ಮನೋರಂಜನೆ

ಗೆಲುವಿನ ವಿಶ್ವಾದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌; ಕಿಂಗ್ಸ್‌ಇಲೆವನ್ ಪಂಜಾಬ್ ಸವಾಲು

Pinterest LinkedIn Tumblr

delhi-daredevils-1

ಮೊಹಾಲಿ: ಡೆಲ್ಲಿ ಡೇರ್‌ಡೆವಿಲ್ಸ್‌ತಂಡವು ಶನಿವಾರ ಕಿಂಗ್ಸ್‌ಇಲೆವನ್ ಪಂಜಾಬ್ ತಂಡದ ಸವಾಲು ಎದುರಿಸಲಿದೆ.

ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಡೆಲ್ಲಿ ತಂಡವು ಗುರು ವಾರ ರಾತ್ರಿ ಪುಣೆ ಸೂಪರ್‌ಜೈಂಟ್ಸ್ ವಿರುದ್ಧ ಸೋಲನುಭವಿಸಿತ್ತು. ಆದರೆ, ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಕಿಂಗ್ಸ್ ತಂಡವನ್ನು ಸೋಲಿಸಿ ಮತ್ತೆ ಜಯದ ಲಯಕ್ಕೆ ಮರಳುವ ಲೆಕ್ಕಾಚಾರದಲ್ಲಿದೆ.

ರಾಹುಲ್ ದ್ರಾವಿಡ್ ಅವರ ಮಾರ್ಗ ದರ್ಶನದಲ್ಲಿ ಉತ್ತಮ ಆಟವಾಡುತ್ತಿ ರುವ ಡೆಲ್ಲಿ ತಂಡವು ಐದು ಪಂದ್ಯಗಳಲ್ಲಿ ಗೆದ್ದಿದೆ. ನಾಯಕ ಜಹೀರ್ ಖಾನ್ ಅವರು ತಮ್ಮ ಬ್ಯಾಟಿಂಗ್ ಮತ್ತು ಬೌಲಿಂಗ್ ಪಡೆಯನ್ನು ಸಮರ್ಥವಾಗಿ ಬಳಸಿಕೊಂಡಿರುವುದೇ ಇದಕ್ಕೆ ಕಾರಣ.

ಕ್ವಿಂಟನ್ ಡಿ ಕಾಕ್, ರಿಷಭ್ ಪಂತ್, ಕರುಣ್ ನಾಯರ್, ಸಂಜು ಸ್ಯಾಮ್ಸನ್ ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆದರೆ, ಕಳೆದ ಪಂದ್ಯದಲ್ಲಿ ಜಹೀರ್ ಮತ್ತು ಕಾಕ್ ಇಬ್ಬರೂ ಆಡಿರಲಿಲ್ಲ. ಇದರ ಲಾಭವನ್ನು ಪುಣೆ ತಂಡವು ಪಡೆದಿತ್ತು.

ಜಹೀರ್ ಅನುಪಸ್ಥಿತಿಯಲ್ಲಿ ನಾಯ ಕತ್ವ ನಿರ್ವಹಿಸಿದ್ದ ಜೆ.ಪಿ. ಡುಮಿನಿ ಬ್ಯಾಟಿಂಗ್‌ನಲ್ಲಿಯೂ ಉಪಯುಕ್ತ ಕಾಣಿಕೆ ನೀಡಿದ್ದರು. ಸ್ಯಾಮ್ ಬಿಲ್ಲಿಂಗ್ಸ್, ಪವನ್ ನೇಗಿ ಅವರು ಒಂದಷ್ಟು ರನ್‌ಗಳ ಕಾಣಿಕೆ ನೀಡಬಲ್ಲ ಸಮರ್ಥರು.

ಮೊಹಮ್ಮದ್ ಶಮಿ, ಕಾರ್ಲೋಸ್ ಬ್ರಾಥ್‌ವೈಟ್, ಸ್ಪಿನ್ನರ್ ಅಮಿತ್ ಮಿಶ್ರಾ, ವೇಗಿ ಜಹೀರ್ ಖಾನ್, ಪವನ್ ನೇಗಿ, ಇಮ್ರಾನ್ ತಾಹೀರ್ ಅವರ ಮೇಲೆ ಎದು ರಾಳಿ ಬ್ಯಾಟಿಂಗ್‌ಬಲವನ್ನು ಕಟ್ಟಿಹಾಕುವ ಜವಾಬ್ದಾರಿ ಇದೆ.

ಉತ್ತಮ ಬ್ಯಾಟಿಂಗ್ ಪಡೆಯಿದ್ದರೂ ಗೆಲುವು ಒಲಿಸಿಕೊಳ್ಳಲು ಪರದಾಡುತ್ತಿ ರುವ ಕಿಂಗ್ಸ್‌ತಂಡವು ಇಲ್ಲಿ ಪುಟಿದೇಳ ಲೇಬೇಕು. ಕಳೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್‌ರೈಡರ್ಸ್‌ಎದುರು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಅಮೋಘ ಆಟದ ಹೊರ ತಾಗಿಯೂ ಸೋಲನುಭವಿಸಿತ್ತು.

ಆರಂ ಭಿಕ ಬ್ಯಾಟಿಂಗ್ ಜೋಡಿ ಮುರಳಿ ವಿಜಯ್, ಮೊಯಿಸೆಸ್ ಸ್ಟಾಯಿನಿಸ್, ಮನನ್ ವೊಹ್ರಾ, ವೃದ್ಧಿಮಾನ್ ಸಹಾ ಅವರು ನಿರೀಕ್ಷಿತ ಆಟವಾಡಿರಲಿಲ್ಲ. ಮಿಲ್ಲರ್ ಕೂಡ ವಿಫಲರಾ ಗಿದ್ದರು.
ಪಂದ್ಯದ ಆರಂಭ: ರಾತ್ರಿ 8 .

Write A Comment