ಮನೋರಂಜನೆ

ಇಂದು ವಿರಾಟ್‌–ದೋನಿ ಮುಖಾಮುಖಿ

Pinterest LinkedIn Tumblr

Royal-Challengers-Bangalore-Squad

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣ ದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗ ಳೂರು ಮತ್ತು ಪುಣೆ ಸೂಪರ್ ಜೈಂಟ್ಸ್ ತಂಡಗಳ ನಡುವಣ ಐಪಿಎಲ್ ಪಂದ್ಯ ವನ್ನು ಸವಿಯುವ ತವಕದಲ್ಲಿ ಜನರಿದ್ದಾರೆ.

ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕ ಮಹೇಂದ್ರಸಿಂಗ್ ದೋನಿ ಮತ್ತು ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಮುಖಾಮುಖಿ ಹೋರಾಟ ನೋಡಲು ಉದ್ಯಾನನಗ ರಿಯ ಕ್ರಿಕೆಟ್ ಅಭಿಮಾನಿಗಳು ತುದಿಗಾಲಿ ನಲ್ಲಿ ನಿಂತಿದ್ದಾರೆ.

ಸತತವಾಗಿ ರನ್‌ಹೊಳೆ ಹರಿಸುತ್ತಿರುವ ಕೊಹ್ಲಿ ಬ್ಯಾಟಿಂಗ್ ಕಣ್ತುಂಬಿಕೊಳ್ಳುವ ಆಸೆ ಒಂದೆಡೆ ಇದ್ದರೆ, ದೋನಿ ನಾಯಕತ್ವದ ತಂತ್ರಗಾರಿಕೆಗ ಳನ್ನು ನೋಡುವ ಕುತೂಹಲವೂ ಅವರಲ್ಲಿದೆ.

ಇಬ್ಬರೂ ಘಟಾನುಘಟಿ ನಾಯಕರ ತಂಡಗಳ ಸ್ಥಿತಿ–ಗತಿ ಒಂದೇ ರೀತಿಯಿದೆ. ಉತ್ತಮ ಆಟಗಾರರು ಎರಡೂ ತಂಡಗಳಲ್ಲಿ ತುಂಬಿದ್ದಾರೆ. ಆದರೆ, ಅನುಭವಿಸಿದ ಸೋಲುಗಳೇ ಹೆಚ್ಚು.

ಕೊಹ್ಲಿಗೆ ಬೌಲರ್‌ಗಳದ್ದೇ ಚಿಂತೆ: ಏಳು ಪಂದ್ಯಗಳಿಂದ 433 ರನ್‌ಗಳಿಸಿರುವ (ನಾಲ್ಕು ಅರ್ಧಶತಕ, ಒಂದು ಶತಕ) ವಿರಾಟ್ ಕೊಹ್ಲಿ ಸದ್ಯ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಬ್ಯಾಟ್ಸ್‌ಮನ್ ಆಗಿದ್ದಾರೆ. ಆದರೆ, ಅವರ ಆಟವು ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿಲ್ಲ.

ಅವರಿಗೆ ಬ್ಯಾಟಿಂಗ್‌ವಿಭಾಗದಲ್ಲಿ ಯಾವುದೇ ಚಿಂತೆ ಕಾಡುತ್ತಿಲ್ಲ. ಕೆ.ಎಲ್. ರಾಹುಲ್, ಎ.ಬಿ. ಡಿವಿಲಿ ಯರ್ಸ್, ಶೇನ್ ವ್ಯಾಟ್ಸನ್, ಸ್ಟುವರ್ಟ್ ಬಿನ್ನಿ, ಸಚಿನ್ ಬೇಬಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಕ್ರಿಸ್ ಗೇಲ್ ಕೇವಲ 7 ರನ್ ಗಳಿಸಿದ್ದರು. ಅವರೂ ಫಾರ್ಮ್‌ಗೆ ಮರಳಿದರೆ ಎದುರಾಳಿ ಬೌಲರ್‌ಗಳು ಪರದಾಡುವುದು ಖಚಿತ.

ಆದರೆ, ಸಮಸ್ಯೆ ಇರುವುದು ಬೌಲಿಂಗ್ ವಿಭಾಗದಲ್ಲಿ. ಮಿಷೆಲ್ ಸ್ಟಾರ್ಕ್ ಮತ್ತು ಸ್ಯಾಮುಯೆಲ್ ಬದ್ರಿ ಅವರು ಗಾಯಗೊಂಡು ಹೊರಗುಳಿದ ಕಾರಣ ಬೌಲಿಂಗ್‌ಪಡೆಯ ಬಲ ಕುಸಿ ದಿದೆ.

ವರುಣ್ ಆ್ಯರನ್, ಹರ್ಷಲ್ ಪಟೇಲ್, ಡೇವಿಡ್ ವೈಸ್, ಯಜು ವೇಂದ್ರ ಚಹಾಲ್, ಎಸ್‌. ಅರವಿಂದ್, ಶೇನ್ ವಾಟ್ಸನ್, ತಬ್ರೇಜ್ ಶಮ್ಸಿ ಅವರ ಕೈಚಳಕ ಕಳೆಗಟ್ಟುತ್ತಿಲ್ಲ. ವಿಕೆಟ್‌ಗಳನ್ನು ಪಡೆಯುತ್ತಿರುವ ಬೌಲರ್‌ಗಳು, ರನ್‌ಗಳನ್ನು ನಿಯಂತ್ರಿಸುವಲ್ಲಿ ಹಿಂದೆ ಬೀಳುತ್ತಿದ್ದಾರೆ.

ಇದರಿಂದಾಗಿ ಏಳು ಪಂದ್ಯಗಳ ನ್ನಾಡಿರುವ ಆರ್‌ಸಿಬಿ ಗೆದ್ದಿರುವುದು ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ. ಚಿನ್ನಸ್ವಾಮಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆದ್ದಿದೆ. ಏಪ್ರಿಲ್ 22ರಂದು ಆರ್‌ಸಿಬಿ ಪುಣೆ ಯನ್ನು ಅದರ ತವರಿನಲ್ಲಿಯೇ ಸೋಲಿ ಸಿತ್ತು. ಇದೀಗ ಮತ್ತೆ ಮುಖಾಮುಖಿ ಯಾಗುತ್ತಿದೆ.

ದೋನಿಗೆ ಸೇಡು ತೀರಿಸಿಕೊಳ್ಳುವ ತವಕ: ಹದಿನೈದು ದಿನಗಳ ಹಿಂದಿನ ಸೋಲಿಗೆ ಮುಯ್ಯಿ ತೀರಿಸಿಕೊಳ್ಳಲು ದೋನಿ ಪಡೆ ಸಿದ್ಧವಾಗಿದೆ. ಗುರುವಾರ ರಾತ್ರಿ ಡೆಲ್ಲಿ ಡೇರ್‌ಡೆವಿಲ್ಸ್‌ಗೆ ಸೋಲಿನ ರುಚಿ ತೋರಿಸಿರುವ ದೊನಿ ಬಳಗವು ಆತ್ಮವಿಶ್ವಾಸದಲ್ಲಿ ತೇಲುತ್ತಿದೆ.

ಕೋಟ್ಲಾ ಅಂಗಳದಲ್ಲಿ ಭರ್ಜರಿ ಅರ್ಧಶತಕ ದಾಖಲಿಸಿದ್ದ ಅಜಿಂಕ್ಯ ರಹಾನೆ, ಉತ್ತಮ ಫಾರ್ಮ್‌ನಲ್ಲಿರುವ ಉಸ್ಮಾನ್ ಖ್ವಾಜಾ, ಸೌರಭ್ ತಿವಾರಿ, ತಿಸಾರ ಪೆರೆರಾ, ಜಾರ್ಜ್ ಬೇಲಿ ಮತ್ತು ಸ್ವತಃ ದೋನಿ ಅವರು ತಂಡಕ್ಕೆ ರನ್‌ಗಳ ಕಾಣಿಕೆ ನೀಡುವ ಸಮರ್ಥರು.

ಬೌಲಿಂಗ್ ಪಡೆ ಕೂಡ ಸಮರ್ಥವಾಗಿದೆ. ಅಶೋಕ್ ದಿಂಡಾ, ಸ್ಕಾಟ್ ಬೊಲಾಂಡ್, ರಜತ್ ಭಾಟಿಯಾ ಒಳ್ಳೆಯ ಲಯದಲ್ಲಿದ್ದಾರೆ. ಆದರೆ, ಪ್ರಮುಖ ಸ್ಪಿನ್ನರ್‌ರವಿಚಂದ್ರನ್ ಅಶ್ವಿನ್ ಕಳೆದ ಪಂದ್ಯದಲ್ಲಿ ಕಳೆಗುಂದಿ ದ್ದರು. ಲೆಗ್‌ಸ್ಪಿನ್ನರ್ ಮುರುಗನ್ ಅಶ್ವಿನ್ ಕೂಡ ಮಿಂಚಿರಲಿಲ್ಲ.

ಆರ್‌ಸಿಬಿಯ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕ ಬೇಕಾದರೆ, ಶಿಸ್ತುಬದ್ಧ ಬೌಲಿಂಗ್‌ನಿಂದ ಮಾತ್ರ ಸಾಧ್ಯ. ಸ್ವಲ್ಪ ಕಳಪೆ ಬೌಲಿಂಗ್ ಮಾಡಿದರೂ ದಂಡನೆ ಖಚಿತ. ಒಟ್ಟಿನಲ್ಲಿ ಜಯಕ್ಕಾಗಿ ಹಂಬಲಿಸಿರುವ ಎರಡೂ ತಂಡಗಳ ಭರ್ಜರಿ ಹೋರಾಟವನ್ನು ನೋಡಲು ಮಳೆರಾಯ ಅವಕಾಶ ಕೊಡಬೇಕಷ್ಟೆ.

ಮಳೆ ಅಡ್ಡಿ ಸಾಧ್ಯತೆ
ಆರ್‌ಸಿಬಿ ಮತ್ತು ರೈಸಿಂಗ್ ಪುಣೆ ತಂಡಗಳ ನಡುವಣ ಶನಿವಾರ ನಡೆಯಲಿರುವ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ.
ಗುರುವಾರ ಮತ್ತು ಶುಕ್ರವಾರ ಸಂಜೆ ಬೆಂಗಳೂರಿನಲ್ಲಿ ರಭಸದ ಮಳೆ ಸುರಿದಿತ್ತು.

ಹವಾಮಾನ ಇಲಾಖೆಯ ಅಂದಾಜಿನ ಪ್ರಕಾರ ಮಳೆಯಾಗುವ ಸಂಭವವಿದೆ. ಶುಕ್ರವಾರದ ರೀತಿಯಲ್ಲಿಯೇ ಸಂಜೆಯಿಂದ ರಾತ್ರಿಯವರೆಗೂ ಮಳೆ ಸುರಿದರೆ ಸಂಪೂರ್ಣ ಪಂದ್ಯವೇ ಮಳೆಗಾಹುತಿಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಮುಖ್ಯಾಂಶಗಳು
* ಸತತ ಮೂರು ಪಂದ್ಯಗಳಲ್ಲಿ ಸೋತಿರುವ ಆರ್‌ಸಿಬಿ
* ಟೂರ್ನಿಯಲ್ಲಿ ನಾಲ್ಕು ಅರ್ಧ ಶತಕ, ಒಂದು ಶತಕ ಗಳಿಸಿರುವ ವಿರಾಟ್ ಕೊಹ್ಲಿ
* ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿ ರೈಸಿಂಗ್ ಪುಣೆ ತಂಡ

ತಂಡಗಳು ಇಂತಿವೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು
ವಿರಾಟ್ ಕೊಹ್ಲಿ (ನಾಯಕ), ಕ್ರಿಸ್ ಗೇಲ್, ಎ.ಬಿ. ಡಿವಿಲಿಯರ್ಸ್, ಶೇನ್ ವ್ಯಾಟ್ಸನ್, ಸ್ಟುವರ್ಟ್ ಬಿನ್ನಿ, ಇಕ್ಬಾಲ್ ಅಬ್ದುಲ್ಲಾ, ಎಸ್. ಅರವಿಂದ್, ಕೇದಾರ್ ಜಾಧವ್, ವಿಕ್ರಮಜೀತ್ ಮಲೀಕ್, ಕೇನ್ ರಿಚರ್ಡ್ಸನ್, ವರುಣ್ ಆ್ಯರನ್, ಮನದೀಪ್ ಸಿಂಗ್, ಅಬು ನಚೀಮ್, ಆ್ಯಡಂ ಮಿಲ್ನೆ, ಯಜುವೇಂದ್ರ ಚಾಹಲ್, ಹರ್ಷಲ್ ಪಟೇಲ್, ಟ್ರಾವಿಸ್ ಹೆಡ್, ಡೇವಿಡ್ ವೈಸ್, ಸಚಿನ್ ಬೇಬಿ, ಕೆ.ಎಲ್. ರಾಹುಲ್, ಪರ್ವೇಜ್ ರಸೂಲ್, ವಿಕಾಸ್ ಟೊಕಸ್, ಸರ್ಫರಾಜ್ ಖಾನ್,ಪ್ರವೀಣ್ ದುಬೆ, ಅಕ್ಷಯ್ ಕರ್ಣೆವರ್

ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್
ಮಹೇಂದ್ರಸಿಂಗ್ ದೋನಿ (ನಾಯಕ), ಅಂಕಿತ್ ಶರ್ಮಾ, ಬಾಬಾ ಅಪರಾಜಿತ್, ಮುರುಗನ್ ಅಶ್ವಿನ್, ಆರ್. ಅಶ್ವಿನ್, ಜಾರ್ಜ್ ಬೇಲಿ, ಅಂಕುಶ್ ಬೇನ್ಸ್, ರಜತ್ ಭಾಟಿಯಾ, ಸ್ಕಾಟ್ ಬೊಲಾಂಡ್, ದೀಪಕ್ ಚಹಾರ್, ಜಸ್ಕರಣ್ ಸಿಂಗ್, ಉಸ್ಮಾನ್ ಖ್ವಾಜಾ, ಅಲ್ಬೀ ಮಾರ್ಕೆಲ್, ಈಶ್ವರ್ ಪಾಂಡೆ, ಅಜಿಂಕ್ಯ ರಹಾನೆ, ಇಶಾಂತ್ ಶರ್ಮಾ, ಆರ್‌.ಪಿ. ಸಿಂಗ್, ಸೌರಭ್ ತಿವಾರಿ, ಆ್ಯಡಮ್ ಜಂಪಾ.

ಆರಂಭ: ಸಂಜೆ 4ರಿಂದ
ನೇರಪ್ರಸಾರ: ಸೋನಿ ಸಿಕ್ಸ್

Write A Comment