ಕರಾವಳಿ

ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ಡಿ.ಕೆ.ಎಸ್.ಸಿ) ಯು.ಎ.ಇ ರಾಷ್ಟ್ರೀಯ ಸಮಿತಿ ನೂತನ ಅದ್ಯಕ್ಷರಾಗಿ ಹುಸೈನ್ ಹಾಜಿ ಕಿನ್ಯ ಆಯ್ಕೆ

Pinterest LinkedIn Tumblr

DKSC Dubai-20 April-2016-agm 2

ದುಬೈ. ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟ್ರೀಯ ಸಮಿತಿ ಇದರ ಮಹಾ ಸಭೆಯು ದುಬೈ ರಾಫಿ ಹೋಟೆಲ್ ನ ಆಡಿಟೋರಿಯಂ ನಲ್ಲಿ ಡಿ.ಕೆ.ಎಸ್.ಸಿ ಸೆಂಟ್ರಲ್ ಕಮಿಟಿ ಹಾಗೂ ಮರ್ಕಾಜ್ ತಅಲೀಮುಲ್ ಇಹ್ಸಾನ್ ಮುಳೂರು ಇದರ ಅಧ್ಯಕ್ಷರೂ ಆದ ಶೈಖುನಾ ಸಯ್ಯದ್ ಕೆ.ಯಸ್.ಆಟ್ಟಕೋಯ ತಂಙಳ್ ಕುಂಬೋಲ್ ರವರ ಘನ ಉಪ ಸ್ಥಿತಿಯಲ್ಲಿ ಹಾಜಿ.ಎಂ.ಕೆ.ಬ್ಯಾರಿ ಕಕ್ಕಿಂಜೆ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.

husain haji1

ಸಭೆಯನ್ನು ಶೈಖುನಾ ಸಯ್ಯದ್ ಕೆ.ಯಸ್.ಆಟ್ಟಕೋಯ ತಂಙಳ್ ಕುಂಬೋಲ್ ರವರ ದುವಾ ಇಬ್ರಾಹಿಂ ಹಾಜಿ ಕಿನ್ಯ ರವರ ಕಿರಹಾತ್ ನೊಂದಿಗೆ ಸೆಂಟ್ರಲ್ ಕಮಿಟಿ ಸಂಚಾಲಕರಾದ ಇಸ್ಮಾಯಿಲ್ ಹಾಜಿ ಕಿನ್ಯ ರವರು ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಣ್ಣಂಗಾರ್ ರವರು ಸ್ವಾಗತಿಸಿದರು. ಗತ ವರ್ಷದ ವರದಿಯನ್ನು ಜೊತೆ ಕಾರ್ಯದರ್ಶಿ ಎಸ್.ಯೂಸುಫ್ ಅರ್ಲಪದವು ವಾಚಿಸಿ ಲೆಕ್ಕ ಪತ್ರ ವನ್ನು ಲೆಕ್ಕಪರಿಶೋದಕರಾದ ಅಬ್ದುಲ್ಲ ಪೆರುವಾಯಿ ಓದಿ ಅದರ ವಿವರಣೆಯನ್ನು ಕೊಶಾದಿಕಾರಿ ಹುಸೈನ್ ಹಾಜಿ ಕಿನ್ಯ ರವರು ಮಂಡಿಸಿದರು.

DKSC Dubai-20 April-2016-agm 1

DKSC Dubai-20 April-2016-agm 3

DKSC Dubai-20 April-2016-agm 4

DKSC Dubai-20 April-2016-agm 5

DKSC Dubai-20 April-2016-agm 6

DKSC Dubai-20 April-2016-agm 7

DKSC Dubai-20 April-2016-agm 8

DKSC Dubai-20 April-2016-agm 9

DKSC Dubai-20 April-2016-agm 10

DKSC Dubai-20 April-2016-agm 11

DKSC Dubai-20 April-2016-agm 12

ಅದ್ಯಕ್ಷರಾದ ಹಾಜಿ.ಎಂ.ಕೆ.ಬ್ಯಾರಿ ಕಕ್ಕಿಂಜೆ ರವರು ತನ್ನ ಅದ್ಯಕ್ಷ ಭಾಷಣ ದಲ್ಲಿ ಯು.ಎ.ಇ ಯಲ್ಲಿ ಸಂಘಟನೆಯು ಉನ್ನತ ಮಟ್ಟಕ್ಕೆ ಏರಲು ಶ್ರಮಿಸಿದ ಎಲ್ಲ ಸಹ ಪ್ರವರ್ತಕರಿಗೆ ಅಭಿನಂದನೆ ಸಲ್ಲಿಸುತ್ತಾ ಕಮಿಟಿಯನ್ನು ಬರ್ಖಾಸ್ತು ಗೊಳಿಸಿದರು. ಇದೇ ಸಂದರ್ಭದಲ್ಲಿ ಸೆಂಟ್ರಲ್ ಕಮಿಟಿ ಅಧೀನದಲ್ಲಿ ಇರುವ ರಾಷ್ಟೀಯ ಹಾಗೂ ವಲಯ ಸಮಿತಿ ಗಳಲ್ಲಿ 2014 – 15 ರಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದು ಸೆಂಟ್ರಲ್ ಕಮಿಟಿ ಅಧ್ಯಕ್ಷರಾದ ಶೈಖುನಾ ಸಯ್ಯದ್ ಕೆ.ಯಸ್.ಆಟ್ಟಕೋಯ ತಂಙಳ್ ರವರು ಯು.ಎ.ಇ. ರಾಷ್ಟೀಯ ಸಮಿತಿ ಅದ್ಯಕ್ಷರಾದ ಹಾಜಿ.ಎಂ.ಕೆ.ಬ್ಯಾರಿ ಕಕ್ಕಿಂಜೆ ರವರಿಗೆ ಪ್ರಸಸ್ತಿ ಫಲಕವನ್ನು ನೀಡಿ ಗೌರವಿಸಿದರು. ಹಾಗೂ ಯು.ಎ.ಇ ರಾಷ್ಟೀಯ ಸಮಿತಿ ಮಹಾಸಭೆ ಗೆ ಅತಿಥಿಗಳಾಗಿ ಆಗಮಿಸಿದ ಸೆಂಟ್ರಲ್ ಕಮಿಟಿ ಅಧ್ಯಕ್ಷರಾದ ಶೈಖುನಾ ಸಯ್ಯದ್ ಕೆ.ಯಸ್.ಆಟ್ಟಕೋಯ ತಂಙಳ್ , ಯು.ಎ.ಇ ರಾಷ್ಟೀಯ ಸಮಿತಿ ಗೆ ಸೆಂಟ್ರಲ್ ಕಮಿಟಿ ಉಸ್ತುವಾರಿ ಯಾಗಿ ಆಗಮಿಸಿದ ಹಾತಿಂ ಕುಳೂರು, ಸೆಂಟ್ರಲ್ ಕಮಿಟಿ ಮಾಜಿ ಕಾರ್ಯದ್ಯಕ್ಷರಾದ ಇಸ್ಮಾಯಿಲ್ ಹಾಜಿ ಕಿನ್ಯ , ಸೆಂಟ್ರಲ್ ಕಮಿಟಿ ಸದಸ್ಯರಾದ ಶೇಕ್ ಬಳ್ಕುಂಜೆ, ಅಬ್ದುಲ್ ಅಜೀಜ್ ಮುಳೂರು ರವರನ್ನು ಯು.ಎ.ಇ.ರಾಷ್ಟೀಯ ಸಮಿತಿ ವತಿಯಂದ ಸಾಲು ಹೊದಿಸಿ ಸನ್ಮಾನಿಸಲಾಯಿತು. ಸೆಂಟ್ರಲ್ ಕಮಿಟಿ ಉಸ್ತುವಾರಿ ಯಾಗಿ ಆಗಮಿಸಿದ ಹಾತಿಂ ಕುಳೂರು ರವರು ಚುನಾವಣಾಧಿಕಾರಿಯಾಗಿ ನೂತನ ಸಮಿತಿ ರಚನೆಯ ಜವಾಬ್ದಾರಿಯನ್ನು ವಹಿಸಿ ಸಮಿತಿಯನ್ನು ರಚಿಸಲಾಯಿತು.

DKSC Dubai-20 April-2016-agm 13

DKSC Dubai-20 April-2016-agm 14

DKSC Dubai-20 April-2016-agm 15

DKSC Dubai-20 April-2016-agm 16

DKSC Dubai-20 April-2016-agm 17

DKSC Dubai-20 April-2016-agm 18

DKSC Dubai-20 April-2016-agm 19

DKSC Dubai-20 April-2016-agm 20

DKSC Dubai-20 April-2016-agm 21

DKSC Dubai-20 April-2016-agm 22

DKSC Dubai-20 April-2016-agm 23

DKSC Dubai-20 April-2016-agm 24

2016-17ನೇ ಸಾಲಿನ ಪಧಾಧಿಕಾರಿಗಳು
ಗೌರವಾಧ್ಯಕ್ಷರು: ಸಯ್ಯದ್ ತ್ವಾಹ ಬಾಫಕಿ ತಂಙಳ್
ಮುಖ್ಯ ಸಲಹೆ ಗಾರರು : ಹಾಜಿ.ಎಂ.ಕೆ.ಬ್ಯಾರಿ ಕಕ್ಕಿಂಜೆ
ಅಧ್ಯಕ್ಷರು : ಹುಸೈನ್ ಹಾಜಿ ಕಿನ್ಯ
ಪ್ರಧಾನ ಕಾರ್ಯದರ್ಶಿ : ಮುಹಮ್ಮದ್ ಇಕ್ಬಾಲ್ ಕಣ್ಣಂಗಾರ್
ಕೋಶಾಧಿಕಾರಿ : ಇಬ್ರಾಹಿಂ ಹಾಜಿ ಕಿನ್ಯ
ಸಂಘಟನಾ ಕಾರ್ಯದರ್ಶಿ : ಎಸ್.ಯೂಸುಫ್ ಅರ್ಲಪದವು
ಉಪಾದ್ಯಕ್ಷರು : ಹಾಜಿ.ಎಂ.ಇ.ಮೂಳೂರು, ಅಬ್ದುಲ್ ಲತೀಫ್ ಮುಲ್ಕಿ, ಹಾಜಿ. ಮುಹಮ್ಮದ್ ಕುಂಞ್ಞಿ ಅಡ್ಕ, ಅಬ್ದುಲ್ ರಜಾಕ್ ಹಾಜಿ ನಾಟೆಕಲ್, ಹಸನಬ್ಬ ಕೊಲ್ನಾಡ್, ಹಾಜಿ.ಎಸ್.ಕೆ.ಅಬ್ದುಲ್ ಖಾದರ್ ಉಚ್ಹಿಲ
ಜೊತೆ ಕಾರ್ಯದರ್ಶಿ : ಕಮಲ್ ಅಜ್ಜಾವರ, ಕಮರುದ್ದೀನ್ ಗುರುಪುರ, ಬದ್ರುದ್ದೀನ್ ಹೆಂತಾರ್, ಇ.ಕೆ.ಇಬ್ರಾಹಿಂ ಕಿನ್ಯ, ನವಾಜ್ ಕೊಟೆಕ್ಕಾರ್
ಲೆಕ್ಕ ಪರಿಶೋದಕರು : ಅಬ್ದುಲ್ಲ ಪೆರುವಾಯಿ
ಕಚೇರಿ ಕಾರ್ಯದರ್ಶಿ : ಸಮೀರ್ ಕಲ್ಲಾರೆ

ಸಂಚಾಲಕರು : ಮುಹಮ್ಮದ್ ಶುಕೂರ್ ಮಣಿಲ, ಅಬ್ದುಲ್ ರಹಿಮಾನ್ ಸಜಿಪ, ರಫೀಕ್ ಅತೂರ್, ಹಾಜಿ .ಅಬ್ದುಲ್ ರಜಾಕ್ ಜಲ್ಲಿ, ಅಬ್ದುಲ್ಲ ಹಾಜಿ ಬೀಜಾಡಿ, ಹಾಜಿ.ಅಬ್ದುಲ್ ರಹಿಮಾನ್ ಸಂಟ್ಯಾರ್, ಇಕ್ಬಾಲ್ ಕುಂದಾಪುರ, ಹನೀಪ್ ಅರ್ಯಮೂಲೆ, ರಜಾಕ್ ಮುಟ್ಟಿಕಲ್, ಹಾಜಿ.ಎಸ್.ಕೆ.ಅಬ್ದುಲ್ ಖಾದರ್ ಉಚ್ಹಿಲ

ಸಲಹೆಗಾರರು : ಇಬ್ರಾಹಿಂ ಸಖಾಫಿ ಕೆದಂಬಾಡಿ, ಅಬ್ಧುಲ್ಲ ಮುಸ್ಲಿಯಾರ್ ಕುಡ್ತಮುಗೆರು, ಸಯ್ಯದ್ ಅಸ್ಗರ ಅಲಿ ತಂಙಳ್ ಕೋಳ್ಪೆ, ಅಬೂಬಕ್ಕರ್ ಮದನಿ ಕೆಮ್ಮಾರ.

ವೇದಿಕೆಯಲ್ಲಿ ಹಾತಿಂ ಕುಳೂರು, ಇಸ್ಮಾಯಿಲ್ ಹಾಜಿ ಕಿನ್ಯ, ಶೇಕ್ ಬಳ್ಕುಂಜೆ, ಅಬ್ದುಲ್ ಅಜೀಜ್ ಮುಳೂರು, ಸಯ್ಯದ್ ಅಸ್ಗರ ಅಲಿ ತಂಙಳ್ ಕೋಳ್ಪೆ, ಅಬೂಬಕ್ಕರ್ ಮದನಿ ಕೆಮ್ಮಾರ.ಇಬ್ರಾಹಿಂ ಸಖಾಫಿ ಕೆದಂಬಾಡಿ, ಅಬ್ಧುಲ್ಲ ಮುಸ್ಲಿಯಾರ್ ಕುಡ್ತಮುಗೆರು, ಹಾಜಿ.ಎಂ.ಇ.ಮೂಳೂರು, ಮುಹಮ್ಮದ್ ಇಕ್ಬಾಲ್ ಕಣ್ಣಂಗಾರ್, ಹುಸೈನ್ ಹಾಜಿ ಕಿನ್ಯ ರವರು ಉಪಸ್ಥಿತರಿದ್ದರು. ಕೊನೆಯಲ್ಲಿ ಎಸ್. ಯೂಸುಪ್ ಅರ್ಲಪದವು ದನ್ಯವಾದ ಸಮರ್ಪಿಸಿ ಜೊತೆ ಕಾರ್ಯದರ್ಶಿ ಕಮಲ್ ಅಜ್ಜಾವರ ರವರು ಕಾರ್ಯಕ್ರಮ ನಿರ್ವಹಿಸಿದರು.

ವರದಿ. ಎಸ್ .ಯೂಸುಪ್ ಅರ್ಲಪದವು

Write A Comment