ಕರಾವಳಿ

ತುಳುವರ ಭೂತಗಳು ದುಷ್ಟ ಶಕ್ತಿಗಳಲ್ಲ: ಡಾ.ಲಕ್ಷ್ಮೀ ಜಿ ಪ್ರಸಾದ

Pinterest LinkedIn Tumblr

paper presentation sv university1

“ತುಳುವರ ಭೂತಗಳು ದುಷ್ಟ ಶಕ್ತಿಗಳಲ್ಲ ,ಮಣ್ಣಿನ ಸತ್ಯಗಳು ಎಂದು ಕರೆಸಿಕೊಳ್ಳುವ ಇವರು ದುಷ್ಟ ಶಿಕ್ಷಕ ಶಿಷ್ಟ ರಕ್ಷಕ ಶಕ್ತಿಗಳು ತುಳುವಿನ ಭೂತ ದೈವ ದೇವರು ಎಲ್ಲವೂ ಸಮಾನರ್ಥಕ ಪದಗಳು .ಪೂತಮ್ ಎಂದರೆ ಪವಿತ್ರ ಎಂಬರ್ಥವುಳ್ಳ ಶಬ್ದದಿಂದ ತುಳುವಿನ ಭೂತ ಪದ ಹುಟ್ಟಿಕೊಂಡಿದೆ.ಶಿವನಿಗೂ ವಿಷ್ಣುವಿಗೂ ಲಕ್ಷ್ಮೀ ದೇವಿಗೂ ಪೂತಮ್ ಎಂದರೆ ಪವಿತ್ರರದವರು ಎಂದು ಕರೆಯುತ್ತಾರೆ .

ಪೂತಮ್ ಪದ ಕಾಲಾಂತರದಲ್ಲಿ ಪೂತೋ>ಬೂತೋ ಆಗಿ ಭೂತ ವಾಗಿ ಪರಿವರ್ತನೆ ಗೊಂಡಿದೆ.ಕೊಡವ ಭಾಷೆಯಲ್ಲಿ ಇಂದಿಗೂ ತುಳುವರ ಭೂತವನ್ನು “ಪೂದ:ಎಂದು ಕರೆಯುವುದು ಇದಕ್ಕೆ ಸಾಕ್ಷಿಯಾಗಿದೆ.ತುಳುವಿನಲ್ಲಿ ಪೂ >ಭೂ ಆಗಿದೆ ತ ಹಾಗೆ ಉಳಿದಿದೆ .ಕೊಡವ ಭಾಷೆಯಲ್ಲಿ ಪೂ ಹಾಗೆ ಉಳಿದಿದ್ದು ತ >ದ ಆಗಿದೆ ,ವರ್ಣ ವ್ಯತ್ಯಾಸ ಭಾಷಾ ಬೆಳವಣಿಗೆಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ .ಭೂತ ಪದ ನಿಷ್ಪತ್ತಿಗೆ ಇನ್ನು ಒಂದು ಸಾಧ್ಯತೆ ಇದೆ .ತುಳುನಾಡಿನ ಹೆಚ್ಚಿನ ಭೂತಗಳು ಹಿಂದೆ ಇದ್ದ ಅಸಾಮಾನ್ಯ ವೀರರೆ ಆಗಿದ್ದಾರೆ .ಹಾಗಾಗಿ ಹಿಂದೆ ಎಂದರೆ ಭೂತಕಾಲದಲ್ಲಿ ಇದ್ದವರು ಎಂಬರ್ಥದಲ್ಲಿಯೂ ಭೂತ ಪದ ಬಳಕೆಗೆ ಬಂದಿರುವ ಸಾಧ್ಯತೆ ಇದೆ”ಎಂದು ಡಾ.ಲಕ್ಷ್ಮೀ ಜಿ ಪ್ರಸಾದ ಅವರು ಹೇಳಿದ್ದಾರೆ .

laxmi g prasad

ಏಪ್ರಿಲ್ 16 ಮತ್ತು 17 ರಂದು ತಿರುಪತಿಯ ಶ್ರೀ ವೆಂಕಟೇಶ್ವರ ಯೂನಿವರ್ಸಿಟಿಯ ತಮಿಳು ಭಾಷಾ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಆಯೋಜಿಸಿರುವ “ದ್ರಾವಿಡ ಭಾಷೆಗಳಲ್ಲಿ ಭಕ್ತಿ ಸಾಹಿತ್ಯ”ಕುರಿತಾದ ಅಂತಾಷ್ಟ್ರೀಯ ವಿಚಾರ ಸಂಕಿರಣದ ಎರಡನೆಯ ದಿನ ಏಪ್ರಿಲ್ 17 ರಂದು ನಡೆದ ವಿಚಾರ ಗೋಷ್ಠಿಯಲ್ಲಿ ತುಳು- ಕನ್ನಡ ಜಾನಪದ ಸಂಶೋಧಕರಾದ ನೆಲಮಂಗಲ ಸರ್ಕಾರಿ ಪದವಿ ಪೂರ್ವ ಕಾಲೇಜ್ ನ ಕನ್ನಡ ಉಪನ್ಯಾಸಕರೂ ಆಗಿರುವ ಡಾ.ಲಕ್ಷ್ಮೀ ಜಿ ಪ್ರಸಾದ ಅವರು , “BHUTA CULT-WORSHIP OF ARAB AND CHEENI BHUTA’S OF TULUVA’S” (ತುಳುವರ ಭೂತಾರಾಧನೆಯಲ್ಲಿ ಅರಬ್ ಮತ್ತು ಚೀನೀ ಭೂತಗಳು) ಎಂಬ ಸಂಶೋಧನಾ ಪ್ರಬಂಧವನ್ನು ಮಂಡಿಸಿ ಮಾತನಾಡಿದರು .

ತುಳುವರ ಭೂತಾರಾಧನೆಗೆ ಜಾತಿ ಧರ್ಮ ದೇಶದ ಗಡಿ ಇಲ್ಲ .”ಯಾರು ಯಾವಾಗ ಹೇಗೆ ಎಲ್ಲಿ ಯಾಕೆ ದೈವತ್ವ ಪಡೆಯುತ್ತಾರೆ ಎಂದು ಹೇಳುವುದಕ್ಕೆ ಯಾವುದೇ ನಿರ್ದಿಷ್ಟ ನಿಯಮವಿಲ್ಲ.ಬ್ರಾಹ್ಮಣರು ,ದಲಿತರು, ಜೈನರು, ಮುಸ್ಲಿಮರು,ಕ್ರಿಶ್ಚಿಯನರು ಹೀಗೆ ಎಲ್ಲ ಜಾತಿ ಭಾಷೆ ಧರ್ಮದ ಇಲ್ಲಿ ದೈವತ್ವ ಪಡೆದು ಆರಾಧಿಸಲ್ಪಡುತ್ತಿದ್ದಾರೆ.ತುಳುನಾಡಿನ ಭೂತಾರಾಧನೆಗೆ ದೇಶದ ಗಡಿ ಕೂಡ ಇಲ್ಲ .ಇಲ್ಲಿ ಅರಬ್ ದೇಶದ ಓರ್ವ ಖರ್ಜೂರ ವ್ಯಾಪಾರಿ ಹಾಗೂ ಚೀನಾ ದೇಶದ ಐದು ಮಂದಿ ಜನರು ಕೂಡ ಕಾರಣಾಂತರಗಳಿಂದ ದೈವತ್ವ ಪಡೆದು ಅರಬ್ ಮತ್ತು ಚೀನೀ ಭೂತಗಳಾಗಿ ಆರಾಧಿಸಲ್ಪಡುತ್ತಿದ್ದಾರೆ.

ದೈವತ್ವ ಪಡೆಯುವ ಮುನ್ನ ಇವರು ಏನಾಗಿದ್ದರು ಎಂಬ ವಿಚಾರ ಇಲ್ಲಿ ಮುಖ್ಯವಾಗುವುದಿಲ್ಲ ,ದೈವತ್ವ ಪಡೆದ ನಂತರ ಇವರು ನಮ್ಮನ್ನು ಕಾಯುವ ಶಕ್ತಿಗಳು ಎಲ್ಲರಿಗೂ ಒಂದೇ ರೀತಿಯ ಗೌರವದ ಆರಾಧನೆ ,ಒಂದೇ ತೆರನಾದ ಭಕ್ತಿಯ ನೆಲೆ ,ಇದು ಭೂತಾರಾಧನೆಯ ವೈಶಿಷ್ಟ್ಯ ವಾಗಿದ್ದು ತುಳುವರ ಹೃದಯ ವೈಶಾಲ್ಯತೆಗೆ ಸಾಕ್ಷಿಯಾಗಿದೆ ” ಎಂದು ಡಾ.ಲಕ್ಷ್ಮೀ ಜಿ ಪ್ರಸಾದ ಅವರು ಹೇಳಿದ್ದಾರೆ.

Write A Comment