ಕರಾವಳಿ

ಡಿ ಕೆ ಎಸ್.ಸಿ ಯೂಥ್ ವಿಂಗ್ ಯು ಎ ಇ 6 ನೇ ವಾರ್ಷಿಕ ಮಹಾ ಸಭೆ; ಅದ್ಯಕ್ಷರಾಗಿ ಸೈಫುದ್ದೀನ್ ಪಟೇಲ್ -ಪ್ರಧಾನ ಕಾರ್ಯದರ್ಶಿ ಯಾಗಿ ಜುಬೈರ್ ಆತೂರ್ ಆಯ್ಕೆ

Pinterest LinkedIn Tumblr

2

ಡಿ ಕೆ ಎಸ್.ಸಿ ಯೂಥ್ ವಿಂಗ್ ಯು ಎ ಇ ಸಮಿತಿಯ 6 ನೇ ವಾರ್ಷಿಕ ಮಹಾ ಸಭೆ ಯು ಮುಕ್ತಾರ್ ಅಲಿ ಯವರ ಅದ್ಯಕ್ಷತೆಯಲ್ಲಿ ದೇರಾ ಶಕೂರ್ ಮನಿಲಾ ರವರ ನಿವಾಸದಲ್ಲಿ ನಡೆಯಿತು .

ರಾಷ್ಟೀಯ ಸಮಿತಿ ಉಪಾಧ್ಯಕ್ಷರಾದ ಜನಾಬ್ ಇಬ್ರಾಹಿಂ ಹಾಜಿ ಕಿನ್ಯ ದುವಾ : ದ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು . ನಂತರ ಯೂಥ್ ವಿಂಗ್ ಕೋಶದಿಕಾರಿ ಜನಾಬ್ ಸೈಫುದ್ದೀನ್ ಪಟೇಲ್ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು , ಗತ ವರ್ಷದ ವಾರ್ಷಿಕ ವರದಿಯನ್ನು ಸಂಘಟನ ಕಾರ್ಯದರ್ಶಿ ಜನಾಬ್ ಕಮಾಲ್ ಅಜ್ಜಾವರ ಸಭೆಯ ಓದಿ ಸಭೆಯ ಅಂಗಿಕಾರ ಪಡೆದರು , ಲೆಕ್ಕ ಪರಿಶೋದಕ ಜನಾಬ್ ರಿಯಾಝ್ ಕಿನ್ಯ ಲೆಕ್ಕ ಪತ್ರ ಮಂಡಿಸಿದರು , ನಂತರ ಯೂಥ್ ವಿಂಗ್ ಅಧ್ಯಕ್ಷರಾದ ಜನಾಬ್ ಮುಕ್ತಾರ್ ಅಲಿ ಅರಂತೋಡು ಅಧ್ಯಕ್ಷಿಯ ಭಾಷಣ ಮಾಡುತ್ತಾ ಕಳೆದ ಸಾಲಿನಲ್ಲಿ ಸಂಘಟನೆಯು ಹಮ್ಮಿಗೊಂಡ ಕಾರ್ಯಕ್ರಮಗಳನ್ನು ವಿವರಿಸಿ ಸಹಕರಿಸಿದ ಸರ್ವರಿಗೂ ದನ್ಯವಾದ ಸಲ್ಲಿಸಿ ಪ್ರಸ್ತುತ ಸಮಿತಿ ಯನ್ನು ಬರಖಾಸ್ತು ಗೊಳಿಸಿ ನೂತನ ಸಮಿತಿ ಯನ್ನು ಆಯ್ಕೆ ಮಾಡಲು ಅನು ಮಾಡಿಕೊಟ್ಟರು .

ರಾಷ್ಟೀಯ ಸಮಿತಿ ವತಿಯಿಂದ ಉಸ್ತುವಾರಿ ಯಾಗಿ ಆಗಮಿಸಿದ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು ಎ ಇ ಇದರ ಹಿರಿಯ ಮುಖಂಡರಾದ ಜನಾಬ್ ಇ.ಕೆ. ಇಬ್ರಾಹಿಂ ಕಿನ್ಯ ಸಂಘಟನೆಯ ಸಂಪೂರ್ಣ ಮಾಹಿತಿಯನ್ನು ಸಭೆಯ ಯಲ್ಲಿ ವಿವರಿಸುತ್ತಾ ಡಿ.ಕೆ.ಎಸ್.ಸಿ ಸಂಘಟನೆ ಯು ಅನಿವಾರ್ಯತೆಯನ್ನು ಪ್ರತಿಯೊಬ್ಬರಿಗೂ ಅರ್ಥವಾಗುವ ರೀತಿಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಹು ಸಮಯ ವಿವರಿಸಿದರು . ಹಾಗು ಮತ್ತೋರ್ವ ಉಸ್ತುವಾರಿ ರಾಷ್ಟೀಯ ಸಮಿತಿ ಹಿರಿಯ ಮುಖಂಡರು ರಾಷ್ಟೀಯ ಸಮಿತಿ ಯಾ ಉಪಾಧ್ಯಕ್ಷರು ಆದ ಜನಾಬ್ ಇಬ್ರಾಹಿಂ ಹಾಜಿ ಕಿನ್ಯ ನೂತನ ಸಮಿತಿ ಆಯ್ಕೆ ಮಾಡುವ ಜವಾಬ್ದಾರಿ ವಹಿಸಿಕೊಂಡು ರೀತಿ ನಿಯಮಗಳನ್ನು ವಿವರಿಸಿ ಈ ಕೆಳಗಿನಂತೆ 2016 -17 ಸಾಲಿಗೆ ಅವಿರೋದವಾಗಿ ಪದಾದಿಕಾರಿಗಳನ್ನು ಆಯ್ಕೆ ಮಾಡಿದರು.

ಅಧ್ಯಕ್ಷ : ಜನಾಬ್ ಸೈಫುದ್ದೀನ್ ಪಟೇಲ್ ಸುಳ್ಯ .
ಉಪಾಧ್ಯಕ್ಷರುಗಳು : ಜನಾಬ್ ಕಮಾಲ್ ಅಜ್ಜಾವರ ಮತ್ತು ಅನ್ಸಾರ್ ಕುರ್ನಾಡ್ .
ಪ್ರಧಾನ ಕಾರ್ಯದರ್ಶಿ : ಜನಾಬ್ ಜುಬೈರ್ ಅತ್ಹೂರ್ .
ಜೊತೆ ಕಾರ್ಯದರ್ಶಿಗಳು : ಜನಾಬ್ ಹಸ್ಸನ್ ಉಚ್ಚಿಲ ಮತ್ತು ಸನವಾಝ್ ಕಿನ್ಯ .
ಕೋಶಾಧಿಕಾರಿ : ಜನಾಬ್ ಮುಕ್ತಾರ್ ಅಲಿ ಅರಂತೋಡು .
ಲೆಕ್ಕ ಪರಿಶೋದಕ : ಜನಾಬ್ ರಿಯಾಝ್ ಕಿನ್ಯ .
ಸಂಘಟನ ಕಾರ್ಯದರ್ಶಿ : ಜನಾಬ್ ಜಮಾಲ್ ಬಜ್ಪೆ .
ಹಾಗು ಕಾರ್ಯಕಾರಿಣಿ ಸದಸ್ಯರನ್ನು ಆಯ್ಕೆ ಮಾಡಲಾಯಿತ್ತು.

ಹಾಗು ಸಭೆಯಲ್ಲಿ ಉಪಸಿತರಿದ್ದ ದೇರಾ ಶಾಖೆಯ ಜೊತೆ ಕಾರ್ಯದರ್ಶಿ ಜನಾಬ್ ರಫೀಕ್ ಸಂಪ್ಯ , ರಾಷ್ಟೀಯ ಸಮಿತಿ ಸದಸ್ಯರಾದ ಜನಾಬ್ ಅಬ್ದುಲ್ ರಝಾಕ್ ಮುಟ್ಟಿಕಲ್ ಶುಭ ಹಾರೈಸಿ ಮಾತನಾಡಿದರು , ಜನಾಬ್ ಅಬ್ಬಾಸ್ ಪಾಣಾಜೆ , ಜನಾಬ್ ಶರೀಫ್ ಅರ್ಲಪದವು , ಜನಾಬ್ ಶೇಕಬ್ಬ ಕಿನ್ಯ ಉಪಸಿತರಿದ್ದರು . ನೂತನ ಅಧ್ಯಕ್ಷರಾಗಿ ಆಯ್ಕೆ ಗೊಂಡ ಜನಾಬ್ ಸೈಫುದ್ದೀನ್ ಪಟೇಲ್ ನೂತನ ಸಮಿತಿ ಕೈಗೊಳ್ಳಬೇಕಾದ ಮಾಹಿತಿ ಗಳನ್ನೂ ಸಭೆಯಲ್ಲಿ ವಿವರಿಸಿದರು , ಪ್ರಧಾನ ಕಾರ್ಯದರ್ಶಿ ಜನಾಬ್ ಜುಬೈರ್ ಆತೂರ್ ದನ್ಯವಾದ ಸಲ್ಲಿಸಿ , ಕಮಾಲ್ ಅಜ್ಜಾವರ ಕಾರ್ಯಕ್ರಮ ನೀರೂಪಿಸಿದರು .

Write A Comment