ಅಂತರಾಷ್ಟ್ರೀಯ

ದೇಹ ಹಾಗೂ ಮನಸ್ಸು ಆರೋಗ್ಯವಾಗಿರಲು ಉತ್ತಮ ನಿದ್ದೆ ಅತ್ಯವಶ್ಯಕ

Pinterest LinkedIn Tumblr
Romantic young couple sleeping in bed
Romantic young couple sleeping in bed

ನಮ್ಮ ಜೀವಿತಾವಧಿಯ ಮುಕ್ಕಾಲು ಭಾಗ ಸಮಯವನ್ನು ನಾವು ನಿದ್ದೆ ಮಾಡುವುದರಲ್ಲೇ ಕಳೆಯುತ್ತೇವೆ, ನಿದ್ದೆ ಎಂಬುದು ಮನುಷ್ಯನ ದೇಹ ಹಾಗೂ ಮನಸ್ಸಿಗೆ ಅತ್ಯಂತ ಅವಶ್ಯಕ. ಉತ್ತಮ ನಿದ್ದೆಯಿಂದ ಹೆಚ್ಚಿನ ಲಾಭ ಸಿಗುತ್ತದೆ ಎಂದು ಹಲವು ಸಂಶೋಧನೆಗಳು ತಿಳಿಸಿವೆ.

ಅವಶ್ಯಕತೆಗಿಂತ ಕಡಿಮೆ ನಿದ್ದೆ ಮಾಡುವುದರಿಂದ ಮನುಷ್ಯನಿಗೆ ಖಿನ್ನತೆ, ಹೃದಯ ಸಮಸ್ಯೆ, ಬೊಜ್ಜು ಸೇರಿದಂತೆ ಹಲವು ಸಮಸ್ಯೆಗಳಿಗೆ ದಾರಿಯಾಗುತ್ತದೆ. ಇನ್ನೂ ಕೆಲವು ಪ್ರಕರಣಗಳಲ್ಲಿ ತೀರಾ ಕಡಿಮೆ ನಿದ್ದೆ ಮಾಡುವುದು ಮನುಷ್ಯನನ್ನು ಸಾವಿನ ದವಡೆಗೆ ನೂಕುತ್ತದೆ. ಹೃದಯಾಘಾತ ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎಂದು ಅಧ್ಯಯನಗಳು ತಿಳಿಸಿವೆ,

ಕಡಿಮೆ ಸಮಯ ನಿದ್ದೆ ಮಾಡುವುದರಿಂದ ಅನಾರೋಗ್ಯ ಹೇಗೆ ಉಂಟಾಗುತ್ತದೆ ಎಂಬುದು ಇಲ್ಲಿಯವರೆಗೂ ರಹಸ್ಯಾವಾಗಿಯೇ ಉಳಿದಿತ್ತು. ಆದರೆ ವಿಜ್ಞಾನ ತಂತ್ರಜ್ಞಾನ ಮುಂದುವರೆದಂತೆ ಸಂಶೋಧನೆಗಳು ನಿಧಾನವಾಗಿ ಈ ಒಗಟನ್ನು ಬಿಡಿಸುತ್ತಿವೆ.

ನೆನಪುಗಳು ಬಲವರ್ಧನೆಗೊಳ್ಳಲು ಹಾಗೂ ಮತ್ತೆ ಕೆಲವು ನೆನಪುಗಳು ಅಂದರೆ ಗೊಂದಲು ಉಂಟು ಮಾಡುವಂತ ಕೆಲ ನೆನಪುಗಳು ಮೆದುಳಿನಿಂದ ಅಳಿಸಿಹೋಗಲು ನಿದ್ದೆ ಸಹಾಯ ಮಾಡುತ್ತದೆ,

ನಾವು ಎಚ್ಚರವಿರುವ ಸಮಯದಲ್ಲಿ ನಮ್ಮ ಮಿದುಳಿನಲ್ಲಿ ಸಂಗ್ರಹವಾದ ವಿಷಯುಕ್ತ ಪ್ರೊಟಿನ್, ಜೈವಿಕವಾದಂತ ತ್ಯಾಜ್ಯವನ್ನು ಮಿದುಳಿನಿಂದ ಹೊರ ಹಾಕಲು ನಿದ್ದೆ ಸಹಾಯ ಮಾಡುತ್ತದೆ ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ. ಈ ವಿಷಯುಕ್ತ ಪ್ರೋಟಿನ್ ಅಂಶ ಮಿದುಳಿನಿಂದ ಹೊರಬರುವುದರಿಂದ ಅಲ್ಜೀಮೀರ್ ನಂತಹ ಖಾಯಿಲೆಗಳಿಂದ ದೂರ ಇರಲು ನೆರವಾಗುತ್ತದೆ.

ಆರೋಗ್ಯವಂತ ದೇಹ ಮತ್ತು ಆರೋಗ್ಯಯುತ ಮನಸ್ಸು ನಿಮ್ಮದಾಗಬೇಕು ಎಂದರೆ ಉತ್ತಮ ನಿದ್ದೆ ಅತ್ಯವಶ್ಯಕ

Write A Comment