ನ್ಯೂಯಾರ್ಕ್: ಸಾಮಾನ್ಯವಾಗಿ ಕೈ ಗಡಿಯಾರಗಳನ್ನು ಕೊಳ್ಳುವಾಗ ಎಲ್ಲರೂ ಅದರ ಬೆಲೆ ಎಷ್ಟು, ಬ್ರಾಂಡ್ ಯಾವುದು, ಡಿಸೈನ್ ಎಂತಹದ್ದಿರಬೇಕು ಅಂತೆಲ್ಲಾ ನೋಡ್ತಾರೆ.. ಆದರೆ ಜಾಹಿರಾತಿಗಾಗಿ ನೀಡುವ ಎಲ್ಲ ವಾಚ್ ಗಳಲ್ಲಿಯೂ ಸಮಯ 10 ಗಂಟೆ 10 ನಿಮಿಷ ತೋರಿಸುವುದ್ಯಾಕೆ ಎಂದು ಯಾರಾದರೂ ಗಮನಿಸಿದ್ದೀರಾ..? ಅದಕ್ಕೆ ಉತ್ತರ ಇಲ್ಲಿದೆ..
ಸಾಮಾನ್ಯವಾಗಿ ವಾಚ್ಗಳ ಬ್ರಾಂಡ್ ಹೆಸರು ಮತ್ತು ಅದರ ಲೋಗೋ ವಾಚ್ ನ ಮೇಲ್ಭಾಗದಲ್ಲಿ ಕಾಣಿಸುತ್ತದೆ. ಇದು ಸ್ಪಷ್ಟವಾಗಿ ಕಾಣಿಸಬೇಕು ಎಂಬ ಕಾರಣದಿಂದ ವಾಚ್ ಸಂಸ್ಥೆಗಳು ಜಾಹಿರಾತಿನಲ್ಲಿ ಗಂಟೆಯ ಮುಳ್ಳನ್ನ 10ರ ಬಳಿ ಮತ್ತು ನಿಮಿಷದ ಮುಳ್ಳನ್ನ ಎರಡರ ಬಳಿ ಇರುವಂತೆ ಹೊಂದಿಸಲಾಗಿರುತ್ತದೆ. ಒಂದು ವೇಳೆ ಸಮಯವನ್ನ 12 ಗಂಟೆಗೆ ಇಟ್ಟರೆ ಬ್ರಾಂಡಿನ ಲೋಗೋ ಭಾಗಶಃ ಮುಚ್ಚಿ ಹೋಗುತ್ತದೆ. ಆದ್ದರಿಂದ ಲೋಗೋ ನೋಡಿ ಜನರು ವಾಚ್ ಕೊಳ್ಳುವಂತೆ ಮಾಡುವ ಉದ್ದೇಶದಿಂದ ವಾಟ್ ಸಂಸ್ಥೆಗಳು ತಮ್ಮ ಜಾಹಿರಾತಿನಲ್ಲಿ ಸಮಯವನ್ನು 10:10ಕ್ಕೆ ಬದಲಾಯಿಸಿರುತ್ತಾರೆ. ಲೋಗೋ ಮತ್ತು ಸಂಸ್ಥೆ ನೋಡಿ ಗ್ರಾಹಕರು ವಾಚ್ ಖರೀದಿಸಲಿ ಎನ್ನುವ ಸಂಸ್ಥೆಗಳ ಹಳೆಯ ಟ್ರಿಕ್ಸ್ ಇದು.
ಇದಕ್ಕೂ ಮುನ್ನ ಬ್ರಾಂಡ್ನ ಲೋಗೋ ಕಾಣಿಸುವಂತೆ ವಾಚ್ಗಳಲ್ಲಿ ಸಮಯವನ್ನ 8.20ಕ್ಕೆ ಇಡಲಾಗುತ್ತಿತ್ತು. ಆದರೆ ಆಗ ಮುಳ್ಳುಗಳು ಕೆಳಮುಖವಾಗಿರುವುದರಿಂದ ಅಳುತ್ತಿರುವ ಮುಖದಂತೆ ಕಾಣಿಸಿ ನಕಾರಾತ್ಮಕ ಭಾವನೆ ಮೂಡಿಸುತ್ತದೆ ಅನ್ನೋ ಕಾರಣಕ್ಕೆ ಆಸಮಯವನ್ನು 10:10ಕ್ಕೆ ಸೆಟ್ ಮಾಡಲು ಜಾಹಿರಾತು ಸಂಸ್ಥೆಗಳು ಮತ್ತು ವಾಚ್ ತಯಾರಿಕಾ ಸಂಸ್ಥೆಗಳು ಶುರು ಮಾಡಿದವು. ವಾಚ್ನ ಮುಳ್ಳುಗಳು 10:10ರಲ್ಲಿದ್ದಾಗ ಸ್ಮೈಲಿ ಮುಖದಂತೆ ಕಾಣಿಸುತ್ತದೆ ಅನ್ನೋದು ಮತ್ತೊಂದು ಟ್ರಿಕ್.
ಈ ಎಲ್ಲಾ ಮಾಹಿತಿಯನ್ನ ಟೋರ್ನೋ ವಾಚ್ ಕಂಪನಿಯ ಉಪಾಧ್ಯಕ್ಷ ಆ್ಯಂಡ್ರೀವ್ ಬ್ಲಾಕ್ ಅಮೆರಿಕದ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
ಈಗ ಗೊತ್ತಾಯ್ತಲ್ವ ವಾಚ್ ಜಾಹಿರಾತಿನಲ್ಲಿ ಸಮಯ 10:10 ಯಾಕಿರುತ್ತದೆ ಅಂತ…! ಮುಂದಿನ ಬಾರಿ ನೀವು ವಾಚ್ ಕೊಳ್ಳೋವಾಗ ಯಾವ ರೀತಿ ಮಾರ್ಕೆಟ್ ಟ್ರಿಕ್ಸ್ ಬಳಸಲಾಗುತ್ತೆ ಅನ್ನೋದು ನಿಮಗೆ ಖಂಡಿತ ತಿಳಿಯಬಹುದು.