ಕರಾವಳಿ

ದ್ವಿತೀಯ ಪಿಯುಸಿ ಫಲಿತಾಂಶ ಸರ್ಕಾರಿ ವೆಬ್‌ಸೈಟ್‌ನಲ್ಲಿ ಮಾತ್ರ ಪ್ರಕಟ

Pinterest LinkedIn Tumblr

puc

ಬೆಂಗಳೂರು: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾತ್ರ ಪ್ರಕಟವಾಗಲಿದೆ. ವಿದ್ಯಾರ್ಥಿಗಳಲ್ಲಿ ಉಂಟಾಗುವ ಗೊಂದಲ ನಿವಾರಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಿಯು ಮಂಡಲಿ ತಿಳಿಸಿದೆ.

ಕಳೆದ ವರ್ಷ ಖಾಸಗಿ ವೆಬ್‌ಸೈಟ್‌ಗಳಿಂದ ಗೊಂದಲ ಸೃಷ್ಟಿಯಾದ ಹಿನ್ನೆಲೆಯಲ್ಲಿ ಈ ಬಾರಿ ಯಾವುದೇ ಮಕ್ಕಳಿಗೆ ಗೊಂದಲವಾಗದಿರಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಿಯು ಮಂಡಲಿ ನಿರ್ದೇಶಕಿ ಪಲ್ಲವಿ ಅಕುರಾತಿ ಹೇಳಿದ್ದಾರೆ.

ವೆಬ್‌ಸೈಟ್‌ಗೆ ಒಂದೇ ಬಾರಿ ಜನ ಭೇಟಿ ನೀಡಿ ಸರ್ವರ್‌ಗೆ ಹೊಡೆತ ಬೀಳುವುದನ್ನು ತಪ್ಪಿಸಲು ಮತ್ತು ಜನರಿಗೆ ವೇಗವಾಗಿ ಫಲಿತಾಂಶ ನೀಡಲು ಪಿಯು ಮಂಡಲಿ ಕಳೆದ ವರ್ಷದವರೆಗೆ ಖಾಸಗಿ ಕಂಪನಿಗಳಿಗೆ ಫಲಿತಾಂಶದ ಮಾಹಿತಿ ಇರುವ ಸಿಡಿಯನ್ನು ನೀಡುತಿತ್ತು. ಆದರೆ ಕಳೆದ ವರ್ಷ ಕೆಲ ವೆಬ್‌ಸೈಟ್‌ಗಳು ಸರಿಯಾಗಿ ಡೇಟಾವನ್ನು ಅಪ್ ಲೋಡ್ ಮಾಡದ ಕಾರಣ ಫಲಿತಾಂಶದಲ್ಲಿ ಗೊಂದಲ ಉಂಟಾಗಿತ್ತು. ಸರ್ಕಾರಿ ವೆಬ್‌ಗಳಲ್ಲಿ ವಿದ್ಯಾರ್ಥಿಗಳು ಪಾಸ್ ಎಂದು ತೋರಿಸುತ್ತಿದ್ದರೆ ಈ ವೆಬ್‌ಸೈಟ್‌ಗಳಲ್ಲಿ ಫೇಲ್ ಎಂದು ತೋರಿಸುತಿತ್ತು.

ಈ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಾಗಲಿದೆ
http://karnatakaeducation.gov.in/

http://pue.kar.nic.in/

Write A Comment