ಕರಾವಳಿ

  ಕೆ ಐ ಸಿ ಅಬುದಾಬಿ ಸಮಿತಿ ಅಧ್ಯಕ್ಷರಾಗಿ ಅಬ್ದುಲ್ ಸಲಾಂ ಹಾಜಿ ಸೂರತ್ಕಲ್ ಹಾಗೂ ಕಾರ್ಯದರ್ಶಿಯಾಗಿ ಅಝೀಝ್ ಅಮ್ಚಿನಡ್ಕ ಆಯ್ಕೆ

Pinterest LinkedIn Tumblr

32

ದುಬೈ:  ಧಾರ್ಮಿಕ ಹಾಗೂ ಲೌಕಿಕ ವಿಧ್ಯಾಬ್ಯಾಸವನ್ನು  ನೀಡುತ್ತಾ ಬಂದಿರುವ ಜಾಮಿಅ ಅಲ್ ಕೌಸರ್ ಶರೀಅತ್ ಕಾಲೇಜ್ ಕುಂಬ್ರ ಇದರ ಮೇಲುಸ್ತುವಾರಿ ಸಮಿತಿ ಕೆ ಐ ಸಿ ಕೇಂದ್ರ ಸಮಿತಿ ಅಧೀನ ಸಮಿತಿಗಳಲ್ಲಿ ಒಂದಾದ ಅಬುಧಾಬಿ ಸಮಿತಿ  ಇದರ ವಾರ್ಷಿಕ ಮಹಾ ಸಭೆಯು  ಅಬುದಾಬಿ ಇಂಡಿಯನ್ ಇಸ್ಲಾಮಿಕ್ ಸೆಂಟರ್  ಸಭಾಂಗಣದಲ್ಲಿ ನಡೆಯಿತು.  ಅಬುದಾಬಿ  ಸಮಿತಿ  ಅಧ್ಯಕ್ಷರಾದ ಹನೀಫ್ ಹರಿಯಮೂಲೆ   ರವರ  ಸಭಾಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ  ಶಂಸುದ್ದೀನ್ ಹನೀಫಿ ರವರು ಪ್ರಾರ್ಥಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು .

ಕಾರ್ಯಕ್ರಮದಲ್ಲಿ  ಹನೀಫ್ ಮುಸ್ಲಿಯಾರ್  ಮುಸ್ಲಿಯಾರ್ ಕಲ್ಲೆಗರವರು  ಸ್ವಾಗತಿಸಿ  ಮಾತನಾಡಿ ಹಂತ ಹಂತವಾಗಿ ಕೆ ಐ ಸಿ ಬೆಳೆದು ಬಂದ  ಹಾದಿ, ವಿಧ್ಯಾ ಸಂಸ್ಥೆಯ ಮಹತ್ವ ವನ್ನು ವಿವರಿಸಿ  ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದ  ಅತಿಥಿಗಳನ್ನು ಹಾಗೂ ಆಗಮಿಸಿದ ಕೆ ಐ ಸಿ ನೇತಾರರನ್ನು , ಹಿತೈಷಿಗಳನ್ನು ತುಂಬು ಹೃದಯದಿಂದ ಸ್ವಾಗತಿಸಿದರು .

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ  ಅಬ್ದುಲ್ ಸಲಾಂ ಸೂರತ್ಕಲ್ ರವರು , ಇಸ್ಲಾಂ ವಿಧ್ಯಾಬ್ಯಾಸಕ್ಕೆ ನೀಡಿದ ಮಹತ್ವ . ಪ್ರಸಕ್ತ ಸನ್ನಿವೇಶದಲ್ಲಿ ಸಮುದಾಯದ ಯುವ ಪ್ರತಿಭೆಗಳು ಹಲವಾರು ಕಾರಣಗಳಿಂದ ತಮ್ಮ ಜೀವನದ ಅವಿಭಾಜ್ಯ ಅಂಗವಾದ ಶಿಕ್ಷಣದಿಂದ ವಂಚಿತರಾಗುವುದನ್ನು  ಮನಗಂಡು , ಬಡ ಅನಾಥ ನಿರ್ಗತಿಕ ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ಅವರ ಅಭಿರುಚಿಗನುಗುಣವಾಗಿ ವಿಧ್ಯಾಧಾನವನ್ನು ನೀಡುತ್ತಾ ಬಂದಿರುವ ಸಂಸ್ಥೆಯಾಗಿದೆ ಕೆ ಐ ಸಿ ಎಂಬುದು. ಇಂತಹ ಸಂಸ್ಥೆಗಳನ್ನು ಪೋಷಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು  ತಾವೆಲ್ಲರೂ ಸಮಿತಿಯೊಂದಿಗೆ  ಕೈ ಜೋಡಿಸಿ ಸಹಕರಿಸುವಂತೆ ಕೇಳಿಕೊಂಡರು

ಕಾರ್ಯಕ್ರಮದಲ್ಲಿ ಕೆ ಐ ಸಿ ಅಬುದಾಬಿ  ಸಮಿತಿ ಅಧ್ಯಕ್ಷರಾದ ಹನೀಫ್ ಹರಿಯಮೂಲೆ  ರವರು ಮಾತನಾಡುತ್ತಾ  ಕೆ ಐ ಸಿ ವಿಧ್ಯಾ ಸಂಸ್ಥೆಯ ಇಂದು ರಾಜ್ಯದಲ್ಲೇ ಪ್ರತಿಷ್ಟಿತ ಸಂಸ್ಥೆಯಾಗಿ ಬೆಳೆದು ನಿಂತಿದ್ದು , ಇವೆಲ್ಲವೂ ತಮ್ಮನತಹ ನೇತಾರ ಪರಿಶ್ರಮದಿಂದಾಗಿದೆ. ಮುಂದೆ ಸಂಸ್ಥೆಯಲ್ಲಿ ಸಮುದಾಯದ ವಿಧ್ಯಾರ್ಥಿಗಳಿಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಅವುಗಳ ಯಶಸ್ಸಿಗೆ ತಾವೆಲ್ಲರೂ ಕೆ ಐ ಸಿ ಸಮಿತಿಯೊಂದಿಗೆ ಸಹಕರಿಸುವಂತೆ ಕೇಳಿಕೊಂಡು ಪ್ರಸಕ್ತ ಸಾಲಿನಲ್ಲಿ ಸಹಕರಿಸಿ ಪ್ರೋತ್ಸಾಹಿಸಿದ ಪ್ರತಿಯೋರ್ವರಿಗೂ ಕೃತಜ್ಞತೆ ಸಮರ್ಪಿಸಿದರು

ಕೆ ಐ ಸಿ, ರಾಷ್ಟ್ರೀಯ ಸಮಿತಿ ಪ್ರಧಾನ  ಕಾರ್ಯದರ್ಶಿ  ನೂರ್ ಮುಹಮ್ಮದ್ ನೀರ್ಕಜೆ  ರವರು ನೂತನ ಸಮಿತಿ ಪಧಾಧಿಕಾರಿ ನೇಮಕದ ಜವಾಬ್ದಾರಿವಹಿಸಿ ಮಾತನಾಡಿ ಸಮಿತಿ ಕಾರ್ಯವ್ಯಾಪ್ತಿ , ಸಂಘಟನೆ ಯಾ ಪಧಾಧಿಕಾರಿಗಳ ಮೇಲಿನ ಜವಾಬ್ದಾರಿ, ಹಾಗೂ ಸಂಘಟನೆಯ ಅನಿವಾರ್ಯತೆಯನ್ನು ತಿಳಿಯಾಗಿ ವಿವರಿಸಿ  ಪಧಾಧಿಕಾರಿಗಳ ಆಯ್ಕೆಗೆ ಅವಕಾಶ ಮಾಡಿಕೊಟ್ಟರು.

ಅದರಂತೆ  ನೂತನ ಸಮಿತಿ ಪಧಾದಿಕಾರಿಗಳಾಗಿ :

 ಗೌರವಾದ್ಯಕ್ಷರಾಗಿ : ಅಬ್ದುಲ್ ಖಾದರ್ ಕಾರ್ಕಳ

ಅಧ್ಯಕ್ಷರಾಗಿ : ಅಬ್ದುಲ್ ಸಲಾಂ ಹಾಜಿ ಸೂರತ್ಕಲ್

ಕಾರ್ಯಾದ್ಯಕ್ಷರಾಗಿ : ಹನೀಫ್ ಹರಿಯಮೂಲೆ

ಉಪಾಧ್ಯಕ್ಷರಾಗಿ : ಅಶ್ರಫ್ ಮುಕ್ರಂಪಾಡಿ , ಸಲೀಂ ಅಮ್ಚಿನಡ್ಕ , ಇಬ್ರಾಹಿಂ ಪಾತ್ರತೋಟ

ಪ್ರಧಾನ ಕಾರ್ಯದರ್ಶಿ :  ಅಝೀಝ್ ಅಮ್ಚಿನಡ್ಕ

ಕಾರ್ಯದರ್ಶಿ : ಹಾರಿಸ್ ಕೂರ್ನಡ್ಕ,  ಶಾಫಿ ಪೆರುವಾಯಿ, ಮುಹಮ್ಮದ್ ಮಡಿಕೇರಿ

ಕೋಶಾಧಿಕಾರಿ : ಹನೀಫ್ ಮುಸ್ಲಿಯಾರ್ ಬಿ ಸಿ ರೋಡ್

ಲೆಕ್ಕ ಪರಿಶೋಧಕರು :  ಬಷೀರ್ ಹರಿಯಮೂಲೆ , ಹಾರಿಸ್ ಕಾಂತಡ್ಕ

ಸಂಘಟನಾ ಕಾರ್ಯದರ್ಶಿ : ಅಬ್ದುಲಾ ಅಝ್-ಹರಿ ಪಲ್ಲಂಗೊಡ್ , ಶರೀಫ್ ಕರೋಪಾಡಿ

ಸಂಚಾಲಕರು : ಜಬ್ಬಾರ್ ಕೂರ್ನಡ್ಕ , ಇರ್ಶಾದ್ ಮಾಡಾವು , ಶುಹೈಬ್ ಮುಕ್ವೆ , ನಿಝಾಮ್ ಕಲ್ಲಂಗಳ , ಅಬ್ದುಲ್ ರಹಿಮಾನ್ ಮೂಸ , ಅಲ್ತಾಫ್ ಕುದ್ರೋಳಿ ಫೈಝಲ್ ಗೂಣಾಜೆ , ಫೈಝಲ್ ಸುರಿಬೈಲ್

ಗೌರವ ಸಲಹೆಗಾರರು : ದಾವೂದ್ ಹಾಜಿ ಉಜಿರೆ , ಹೈದರ್ ಹಾಜಿ ಉಜಿರೆ , ಅಬ್ದುಲ್ಲಾ ಮದುಮೂಲೆ , ಕರೀಂ ಚಾವರ್ಕಾಡ್, ಅಝೀಝ್ ಚಾವರ್ಕಾಡ್ .

ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದ , ಶಂಸುದ್ದೀನ್ ಹನೀಫಿ , ಕೇಂದ್ರ ಸಮಿತಿ ಅದ್ಯಕ್ಷರಾದ ಮೊಹಿಯುದ್ದೀನ್ ಕುಟ್ಟಿ ಹಾಜಿ ದಿಬ್ಬ ಅಬ್ದುಲ್ ಖಾದರ್ ಕಾರ್ಕಳ ಸಲೀಂ ಅಮ್ಚಿನಡ್ಕ ,  ಅಬ್ದುಲಾ ಅಝ್-ಹರಿ ಪಲ್ಲಂಗೊಡ್ ಮೊದಲಾದವರು ಸಂದರ್ಭೋಚಿತವಾಗಿ ಮಾತನಾಡಿ ನೂತನ ಸಮಿತಿಗೆ ಶುಭ ಹಾರೈಸಿದರು. ಅಶ್ರಫ್ ಪರ್ಲಡ್ಕ ರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು  .

Write A Comment