ಕರಾವಳಿ

ಕೆ ಐ ಸಿ ಅಲ್ ಐನ್ ನೂತನ ಸಾರಥಿಗಳಾಗಿ ಇಸಾಕ್ ಮಾಡಾವು , ರಮೀಝ್ ಕಣ್ಣೂರು , ಸಿನಾನ್ ಪರ್ಲಡ್ಕ ಆಯ್ಕೆ

Pinterest LinkedIn Tumblr

222222

ಅಲ್ ಐನ್ : ಕರ್ನಾಟಕ ಇಸ್ಲಾಮಿಕ್ ಸೆಂಟರ್ (ಕೆ ಐ ಸಿ) ಇದರ ಅಧೀನ ಪೋಷಕ ಸಮಿತಿ ಗಳಲ್ಲಿ ಒಂದಾದ ಅಲ್ ಐನ್ ಸಮಿತಿ ವಾರ್ಷಿಕ ಮಹಾ ಸಭೆಯು ಇತ್ತೀಚಿಗೆ ನಡೆಯಿತು. ಅಲ್ ಐನ್ ಸಮಿತಿ ಅಧ್ಯಕ್ಷರಾದ ರಮೀಝ್ ಕಣ್ಣೂರು ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ ಐ ಸಿ ಪ್ರತಿನಿಧಿ ಶಂಸುದ್ದೀನ್ ಹನೀಫಿ ಉಸ್ತಾದ್ ರವರು ಪ್ರಾರ್ಥಿಸಿ ಉಧ್ಘಾಟಿಸಿ ಮಾತನಾಡಿ , ಆಧುನಿಕ ಕಾಲದಲ್ಲಿ ಕಾಲ ಚಕ್ರಗಳು ಉರುಳಿದಂತೆ ಮನುಷ್ಯ ಮನುಷ್ಯ ಜೀವಿಗಳ ನಡುವೆ ಮಾನವೀಯ ಗುಣಗಳು ಕ್ಷೀಣಿಸುತ್ತಿದೆ. ಮನುಷ್ಯನು ಅಧಃಪತನಕ್ಕೆ ಇಳಿಯುತ್ತಿದ್ದು , ತನ್ನ ತಂದೆ ತಾಯಿ ಸಹೋದರರು ಎಂದಿಲ್ಲದೇ ನಾಚಿಕೆಯಿಲ್ಲದೆ ಯಾವುದೇ ಕಾರ್ಯಕ್ಕೂ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದು ಒಂದು ರೀತಿಯಲ್ಲಿ ಸಮುದಾಯವು ಇಂದು ತಲೆತಗ್ಗಿಸುವಂತಹ ಪರಿಸ್ತಿತಿಗೆ ಬಂದಿದೆ. ಇವೆಲ್ಲವನ್ನೂ ಅವಲೋಕಿಸುವಾಗ ಸಮುದಾಯದಲ್ಲಿ ಒಂದು ಕಡೆಯಲ್ಲಿ ವಿಧ್ಯಾಭ್ಯಾಸ ಜ್ಞಾನದ ಕೊರತೆ ಎದ್ದು ಕಾಣುತ್ತಿದ್ದು ,ಅವೆಲ್ಲವನ್ನು ನೀಗಿಸುವ ಜವಾಬ್ದಾರಿ ನಮ್ಮ ಮೇಲಿದ್ದು ಆ ನಿಟ್ಟಿನಲ್ಲಿ ಇಂದು ಕೆ ಐ ಸಿ ಯು ಸಮುದಾಯದ ಪ್ರಗತಿ ಉನ್ನತಿಗೊಸ್ಕರ ಆರ್ಥಿಕವಾಗಿ ಹಿಂದುಳಿದ ಪ್ರಥಿಬಾನ್ವಿತ ವಿಧ್ಯಾರ್ಥಿಗಳಿಗೆ ಉಚಿತ ಮೌಲ್ಯಯುತ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಮತ ಬೌಧಿಕ ವಿಧ್ಯಾಭ್ಯಾಸದೊಂದಿಗೆ ಖುರ್-ಆನ್ ಕಂಠಪಾಠ ವನ್ನು ನೀಡುತ್ತಿದ್ದು , ಇತರ ಪಠ್ಯೇತರ ಚಟುವಟಿಕೆಗಳನ್ನು ಕಲಿಸಿಕೊಡುತ್ತಿದ್ದು , ಇಂದು ನಮ್ಮ ವಿಧ್ಯಾರ್ಥಿಗಳು ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದು , ಇವೆಲ್ಲವೂ ತಮ್ಮಂತಹ ದೀನೀ ಸೇವಕರ ಪರಿಶ್ರಮದ ಫಲವಾಗಿದೆ ಎನ್ನುತ್ತಾ ದೀನೀ ಸ್ನೇಹಿಗಳಾದ ತಾವೆಲ್ಲರೂ ಕೆ ಐ ಸಿ ಯ ಪ್ರಗತಿಗಾಗಿ ನಮ್ಮೊಂದಿಗೆ ಕೈ ಜೋಡಿಸಿ ಸಹಕರಿಸುವಂತೆ ಕೇಳಿಕೊಂಡರು.

ನಂತರ ದುಬೈ ಸಮಿತಿ ಕಾರ್ಯದರ್ಶಿ ಅಶ್ರಫ್ ಪರ್ಲಡ್ಕ ರವರು ಸ್ವಾಗತಿಸಿ ಮಾತನಾಡಿ , ದೂರ ದೃಷ್ಟಿ ಯಿಂದ ಆರು ವಿಧ್ಯಾರ್ಥಿಗಳಿಂದ ಸ್ಥಾಪಿತ ಗೊಂಡು ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಈ ಸಂಸ್ಥೆಯು ಇಂದು ನಾವೆಲ್ಲರೂ ಹೆಮ್ಮೆಯಿಂದ ಪರಿಚಯಿಸಿಕೊಲ್ಲಬಹುದಾದಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಹಲವಾರು ಮಹಾನುಭಾವರ ಪರಿಶ್ರಮದ ಫಲವಾಗಿ ಯಶಸ್ಸಿನೊಂದಿಗೆ ಕಾರ್ಯಾಚರಿಸುತ್ತಿರುವ ಈ ಸಂಥೆಯು ಇಂದು ಅರಬ್ ರಾಷ್ಟ್ರಗಲಾಧ್ಯಂತ ಪರಿಚಯಿಸಿಕೊಂಡಿದ್ದು ಇವೆಲ್ಲವೂ ತಮ್ಮಂತಹ ಸ್ನೇಹಿತ ವರ್ಗದ ಪ್ರೋತ್ಸಾಹದಿಂದಾಗಿದ್ದು ಮುಂದೆಯೂ ಈ ಸಂಸ್ಥೆಯೊಂದಿಗೆ ಸಹಕರಿಸುವಂತೆ ಕೇಳಿಕೊಂಡರು.

ಅಲ್ ಐನ್ ಸಮಿತಿ ಅಧ್ಯಕ್ಷರಾದ ರಮೀಝ್ ಕಣ್ಣೂರು ರವರು ಮಾತನಾಡುತ್ತಾ ಕಳೆದ ಹಲವಾರು ವರ್ಷಗಳಿಂದ ಈ ಸಂಸ್ಥೆಯ ಎಲ್ಲಾ ಹಾಗು ಹೋಗುಗಳನ್ನು ಅವಲೋಕಿಸಿದಾಗ ಸಂಸ್ಥೆಯು ಇಂದು ಸಮುದಾಯಕ್ಕೆ ನೀಡುತ್ತಿರುವ ಕೊಡುಗೆಯು ಅಪಾರವಾಗಿದ್ದು , ನಾವೆಲ್ಲರೂ ಕೇವಲ ಸದಸ್ಯರೆಂಬ ನಿಲೆಯಲ್ಲಿ ಸಹಕರಿಸುತ್ತಾ ಬಂದಿದ್ದು , ಮುಂದೆಯೂ ನಮ್ಮ ಸಂಸ್ಥೆಯನ್ನು ಪೋಷಿಸಬೇಕಾದ ಅನಿವಾರ್ಯತೆ ಜವಾಬ್ದಾರಿ ನಮ್ಮ ಮೇಲಿದೆ. ಅನಿವಾಸಿಗಳಾದ ನಮಗೆ ದೊರಕುವ ಪುನ್ಯದಾಯಕ ಕಾರ್ಯಗಳಲ್ಲಿ ಒಂದಾಗಿದ್ದು ದೀನೀ ಸಂಘ ಸಂಸ್ಥೆಗಳನ್ನು ಪೋಷಿಸುವುದು. ಆದ್ದರಿಂದ ಯಾವುದೇ ಸ್ಥಾನದ ಪಲವನ್ನು ಚಿಂತಿಸದೆ ಸಂಸ್ಥೆಯ ಪ್ರಗತಿಗೆ ತಮ್ಮ ಕೈಲಾಗುವ ರೀತಿಯಲ್ಲಿ ಸಹಕರಿಸುವಂತೆ ಕೇಳಿಕೊಂಡು ಹಾಲಿ ಸಮಿತಿಯನ್ನು ಬರಕಾಸ್ತು ಗೊಳಿಸಿರುವುದಾಗಿ ಘೋಷಿಸಿ ನೂತನ ಸಮಿತಿ ರಚನೆಗೆ ಅವಕಾಶ ಮಾಡಿಕೊಟ್ಟರು.

ಅದರಂತೆ ನೂತನ ಸಮಿತಿ ರಚನಾ ಜವಾಬ್ದಾರಿ ವಹಿಸಿ ಮಾತನಾಡಿದ ನೂರ್ ಮುಹಮ್ಮದ್ ನೀರ್ಕಜೆಯವರು , ಕೆ ಐ ಸಿ ಎಂಬುದು ಇಂದು ಹೆಮ್ಮರವಾಗಿ ಬೆಳೆದು ನಿಂತಿದ್ದು ಅದೆಷ್ಟೋ ಪ್ರತಿಭೆಗಳಿಗೆ ಜ್ಞಾನದ ನೆರಳನ್ನು ನೀಡಿದೆ. ಇಂದು ನಮ್ಮ ಸಂಸ್ಥೆಯಲ್ಲಿ ಕಲಿತ ವಿಧ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಮಟ್ಟದಲ್ಲಿ ಗುರುತಿಸಿಕೊಂಡಿದ್ದು , ಪ್ರಭಾಷಣ ಲೋಕದಲ್ಲಿ ಕೌಸರಿಗಲೆಂಬ ಯುವ ಪ್ರಥಿಬೆಗಳು ಮುಂಚೂಣಿಯಲ್ಲಿದ್ದು , ಇವೆಲ್ಲವೂ ತಮ್ಮಂತಹ ನಿಸ್ವಾರ್ಥ ಮನೋಭಾವದ ಸದಸ್ಯರ ಸೇವೆಯ ಫಲವಾಗಿದೆ ಎನ್ನುತ್ತಾ ಪ್ರಸಕ್ತ ವರ್ಷ ಕೆ ಐ ಸಿ ಅಲ್ ಸಮಿತಿ ಯಾ ಪಧಾಧಿಕಾರಿಗಳಿಗೆ ಅಭಿನಂದನೆಯನ್ನು ಸಲ್ಲಿಸಿ ನೂತನ ಸಾಲಿನ ಸಮಿತಿ ಪಧಾಧಿಕಾರಿಗಳ ಆಯ್ಕೆಗೊಳಿಸಿದರು.

ಗೌರವಾಧ್ಯಕ್ಷರು : ಇಸಾಕ್ ಮಾಡಾವು
ಅಧ್ಯಕ್ಷರು : ರಮೀಝ್ ಕಣ್ಣೂರು
ಉಪಾಧ್ಯಕ್ಷರು : ಅಶ್ರಫ್ ಪಿ ಬಿ ಮಲಪ್ಪುರಂ , ಸುಲೈಮಾನ್ ಗಡಿಯಾರ್
ಪ್ರಧಾನ ಕಾರ್ಯದರ್ಶಿ : ಸಿನಾನ್ ಪರ್ಲಡ್ಕ
ಕಾರ್ಯದರ್ಶಿ ಅಶ್ರಫ್ ಉಲ್ಲಾಲ , ಮುಸ್ತಫ ಪರ್ಲಡ್ಕ
ಕೋಶಾಧಿಕಾರಿ : ಸುಲೈಮಾನ್ ಬೈತಡ್ಕ
ಸಂಘಟನಾ ಕಾರ್ಯದರ್ಶಿ : ಸಾಜಿದ್ ಕನ್ನೂರ್
ಲೆಕ್ಕ ಪರಿಶೋದಕರು : ಫಾರೂಕ್ ಕೇಪು
ಸಂಚಾಲಕರು : ಅಶ್ರಫ್ , ನಹೀಂ ಮೂಡಬಿದ್ರೆ , ಅಲ್ತಾಫ್ ಮಂಗಳೂರ್ , ಫರಾಝ್ ಪಾಣೆಮಂಗಳೂರು , ನೌಫಲ್ ಕೊಲ್ಲಂ
ಕಲೀಲ್ ಉಲ್ಲಾಲ ಆಸಿಫ್ ಉಡುಪಿ

ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದ ಹನೀಫ್ ಆರ್ಯಮೂಲೇ , ಸುಲೈಮಾನ್ ಬೈತಡ್ಕ , ಅಶ್ರಫ್ ಅರ್ಥಿಕೆರೆ ಮೊದಲಾದವರು ಸಂಧರ್ಬೋಚ್ಜಿತವಾಗಿ ಮಾತನಾಡಿ ನೂತನ ಸಮಿತಿಗೆ ಶುಭ ಹಾರೈಸಿದರು.

Write A Comment