
ಮಂಗಳೂರು,ಮಾ.25: ಮಂಗಳೂರಿನ ಆರ್.ಟಿ.ಐ ಕಾರ್ಯಕರ್ತ, ವಿದ್ಯುತ್ ಕಂಟ್ರಾಕ್ಟರ್ ವಿನಾಯಕ್ ಬಾಳಿಗ ಅವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ವಿನೀತ್ ಮತ್ತು ವಿಶಿತ್ ಎಂಬವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಮಾ.21 ರಂದು ಮುಂಜಾನೆ ವಿನಾಯಕ್ ಬಾಳಿಗ ಅವರನ್ನು ನಗರದ ಬೆಸೆಂಟ್ ಕಾಲೇಜು ಹಾಗೂ ಪಿ.ವಿ.ಎಸ್ ಕಲಾಕುಂಜ ಮಧ್ಯೆ ಇರುವ ಒಳ ರಸ್ತೆಯ ಓಣಿಯಲ್ಲಿ ಭೀಕರವಾಗಿ ಹತ್ಯೆಗೈಯ್ಯಲಾಗಿತ್ತು. ನಗರದಲ್ಲಿ ನಡೆಯುತ್ತಿದೆ ಎನ್ನಲಾದ ಹಲವಾರು ಪ್ರಕರಣಗಳಿಗೆ ಸಂಬಂಧಿಸಿದಂತೆ ಹಲವು ಅಕ್ರಮಗಳನ್ನು ವಿನಾಯಕ್ ಬಾಳಿಗ ಅವರು ಬಯಲಿಗೆಳೆದಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.
Click : ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಆರ್‌ಟಿಎ ಕಾರ್ಯಕರ್ತ ವಿನಾಯಕ ಬಾಳಿಗರ ಹತ್ಯೆ
ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಆರ್‌ಟಿಎ ಕಾರ್ಯಕರ್ತ ವಿನಾಯಕ ಬಾಳಿಗರ ಹತ್ಯೆ