ರಾಷ್ಟ್ರೀಯ

ಬಂಧನಕ್ಕೊಳಗಾಗಿರುವ ವ್ಯಕ್ತಿ ‘ರಾ’ ಅಧಿಕಾರಿಯಲ್ಲ’

Pinterest LinkedIn Tumblr

vikas-swaroop-e1458642701559ದೆಹಲಿ: ಗೂಢಚಾರಿಕೆ ಮಾಡಿದ ಆರೋಪದ ಮೇಲೆ ಪಾಕಿಸ್ತಾನದ ನೈರುತ್ಯ ಭಾಗದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಬಂಧನಕ್ಕೊಳಗಾಗಿರುವ ವ್ಯಕ್ತಿ ಭಾರತೀಯ ಗುಪ್ತಚರ ಸಂಸ್ಥೆ(ರಾ)ಯ ಅಧಿಕಾರಿ ಅಲ್ಲ ಎಂದು ವಿದೇಶಾಂಗ ಇಲಾಖೆ ಶುಕ್ರವಾರ ಸ್ಪಷ್ಟಪಡಿಸಿದೆ.

ಆ ವ್ಯಕ್ತಿ ಭಾರತೀಯ ನೌಕಾಪಡೆಯಿಂದ ಅವಧಿಗೂ ಮುನ್ನವೇ ನಿವೃತ್ತಿಯಾಗಿದ್ದು, ನಿವೃತ್ತಿ ನಂತರ ಸರ್ಕಾರದೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಶ್ ಸ್ವರೂಪ್ ಅವರು ಹೇಳಿದ್ದಾರೆ.

ಯಾವುದೇ ದೇಶದ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುವ ಆಸಕ್ತಿ ಭಾರತಕ್ಕೆ ಇಲ್ಲ. ಸ್ಥಿರತೆ ಮತ್ತು ಶಾಂತಿಯಲ್ಲಿ ಭಾರತಕ್ಕೆ ನಂಬಿಕೆ ಇದೆ ಎಂದು ವಿದೇಶಾಂಗ ಸಚಿವಾಲಯ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಬಲೂಚಿಸ್ತಾನದಲ್ಲಿ ಭಯೋತ್ಪಾದನೆ ಹೆಚ್ಚಳಕ್ಕೆ ಗುಮ್ಮಕ್ಕು ನೀಡುತ್ತಿದ್ದ ಹಾಗೂ ಗೂಢಚಾರಿಗೆ ಮಾಡಿದ ಆರೋಪದ ಮೇಲೆ ಭಾರತೀಯ ನೌಕೆ ಹಾಗೂ ಭಾರತೀಯ ಗುಪ್ತಚರ ಸಂಸ್ಥೆ ಸಂಶೋಧನೆ ಮತ್ತು ವಿಶ್ಲೇಷಣೆ ವಿಂಗ್(ರಾ)ನ ಅಧಿಕಾರಿ ಭೂಷಣ್ ಯಾದವ್ ರನ್ನು ಬಂಧಿಸಲಾಗಿದೆ ಎಂದು ಪಾಕಿಸ್ತಾನದ ಗೃಹ ಸಚಿವ ಮಿರ್ ಸರ್ಫರಾಜ್ ಬುಕ್ತಿ ಅವರು ಹೇಳಿದ್ದರು,

Write A Comment