ಅಂತರಾಷ್ಟ್ರೀಯ

ಅತಿಯಾದ ನಿರೀಕ್ಷೆ ವಿಚ್ಛೇದನಕ್ಕೆ ಕಾರಣ ! ಪತಿಯನ್ನು ಪೀಡಿಸುವುದಕ್ಕೂ ಮುನ್ನ ಹೆಂಗಳೆಯರೇ ಎಚ್ಚರ

Pinterest LinkedIn Tumblr

divorce

ಪ್ರತೀಯೊಬ್ಬರ ಜೀವನದಲ್ಲೂ ನಿರೀಕ್ಷೆ ಹಾಗೂ ಆಸೆ ಎಂಬುದಿರುತ್ತದೆ. ಆದರೆ, ಆ ನಿರೀಕ್ಷೆಗಳು ಅತಿಯಾಗಬಾರದಷ್ಟೇ. ಅತಿ ನಿರೀಕ್ಷೆಗಳು ದುಃಖಕ್ಕೆ ಕಾರಣವಾಗುತ್ತದೆ. ಅಲ್ಲದೆ, ನಮ್ಮನ್ನು ನಾವೇ ನಮ್ಮ ಕೈಯಿಂದ ಹಾಳು ಮಾಡಿಕೊಳ್ಳುತ್ತೇವೆ.

ಮದುವೆಯಾದ ಮೇಲೆ ಪ್ರತೀಯೊಬ್ಬ ಹೆಣ್ಣಿಗೂ ನಿರೀಕ್ಷೆಯೆಂಬುದಿರುತ್ತದೆ. ಆ ನಿರೀಕ್ಷೆಗಳನ್ನು ತಮ್ಮ ಪತಿಯೇ ಈಡೇರಿಸಬೇಕೆಂದು ಇಚ್ಛಿಸುತ್ತಾಳೆ. ಆದರೆ, ಇಂತಹ ನಿರೀಕ್ಷೆಗಳು ಅತೀಯಾದರೆ ಗಂಡನ ಜೊತೆ ಘರ್ಷಣೆಯಾಗಿ, ವಿಚ್ಛೇದನಕ್ಕೂ ಕಾರಣವಾಗುತ್ತದೆಂದು ಸಂಶೋಧನೆಯೊಂದು ಹೇಳಿದೆ.

ದಂಪತಿಗಳ ದಾಂಪತ್ಯ ಕುರಿತಂತೆ ಫ್ಲೊರಿಡಾ ವಿಶ್ವವಿದ್ಯಾಲಯದ ಸಂಶೋಧನೆಯೊಂದನ್ನು ನಡೆಸಿದ್ದು, ಸಂಶೋಧನೆಯಲ್ಲಿ 135 ನವ ವಿವಾಹಿತ ದಂಪತಿಗಳನ್ನು ಬಳಸಿಕೊಂಡಿದ್ದಾರೆ. ಸಂಶೋಧನೆ ವೇಳೆ ಪ್ರತೀ ದಂಪತಿಗಳು ಪ್ರಶ್ನಾವಳಿಗಳ ಮೂಲಕ ಪರೀಕ್ಷೆಗೊಳಪಡಿಸಲಾಗಿದೆ. ಸಂಶೋಧನೆಯನ್ನು 4 ವರ್ಷಗಳ ಕಾಲ ನಡೆಸಲಾಗಿದ್ದು, ಪ್ರತೀ 6 ತಿಂಗಳಿಗೊಮ್ಮೆ ದಂಪತಿಗಳಿಗೆ ಪ್ರಶ್ನಾವಳಿಗಳನ್ನು ನೀಡುವ ಮೂಲಕ ಪರೀಕ್ಷೆಗೊಳಪಡಿಸಲಾಗಿದೆ.

ಈ ವೇಳೆ ನವವಿವಾಹಿತರು ತಮ್ಮ ಪತ್ನಿಯರು ಅತೀ ಹೆಚ್ಚು ನಿರೀಕ್ಷೆಗಳನ್ನಿಟ್ಟುಕೊಂಡಿದ್ದು, ಅವುಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಹಾಗೂ ಕೆಲವು ವಿಷಯಗಳಲ್ಲಿ ದಾಂಪತ್ಯ ಜೀವನ ಸಂತೋಷವನ್ನುಂಟು ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ.

ದಂಪತಿಗಳು ಒಟ್ಟಿಗೆ ಕೆಲಸ ಮಾಡುತ್ತಿದ್ದರೆ, ಅವರ ಸಾಮರ್ಥ್ಯಕ್ಕೆ ತಕ್ಕಂತೆ ನಿರೀಕ್ಷೆಗಳಿಟ್ಟುಕೊಂಡಿರುವುದರಿಂದ ಅವರ ದಾಂಪತ್ಯ ಜೀವರ ಸುಖಕರ ಹಾಗೂ ಧೀರ್ಘಕಾಲಿಕವಾಗಿರುತ್ತದೆ ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ.

ಕೆಲವರು ಮದುವೆಯು ತಮ್ಮ ಜೀವನದ ಎಲ್ಲಾ ಆಸೆಗಳನ್ನು ಈಡೇರಿಸುತ್ತದೆ ಎಂಬ ಕಾರಣಕ್ಕೆ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿರುತ್ತಾರೆ. ಆದರೆ, ಮದುವೆಯಾದ ಬಳಿಕ ಅತ್ಯಂತ ಕಡಿಮೆ ಸಮಯವಿರುವುದರಿಂದ ಆ ನಿರೀಕ್ಷೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೆ ದಂಪತಿಗಳ ನಡುವೆ ಭಿನ್ನಾಭಿಪ್ರಾಯ, ಘರ್ಷಣೆ, ವಿನಾ ಕಾರಣ ಜಗಳಗಳು ಮೂಡುತ್ತವೆಂದು ಫ್ಲೋರಿಡಾ ವಿಶ್ವವಿದ್ಯಾಲಯದ ಸಂಶೋಧಕ ಜೇಮ್ಸ್ ಮ್ಯಾಕ್ನಲ್ಟಿ ಅವರು ಹೇಳಿದ್ದಾರೆ.

ಮದುವೆ ನಂತರ ಜೀವನದ ಬಗ್ಗೆ ವ್ಯಕ್ತಿಗಳು ಮೊದಲು ಆಲೋಚನೆ ಮಾಡಬೇಕು. ನಂತರ ದಾಂಪತ್ಯ ಜೀವನಕ್ಕೆ ಕಾಲಿಡಬೇಕು. ಪತಿ-ಪತ್ನಿಯರ ನಡುವೆ ವಿಷಮ ಸಂಬಂಧವೇಕೆ ಏರ್ಪಡುತ್ತದೆ ಎಂಬ ಪ್ರಶ್ನೆಗೆ ಉತ್ತರಿಸುವುದು ನಿಜಕ್ಕೂ ಕಷ್ಟಕರವಾಗುತ್ತದೆ. ಆದರೆ, ಸಂಶೋಧನೆಯಲ್ಲಿ ತಿಳಿದುಬಂದಿರುವ ಪ್ರಕಾರ ವಿಷಮ ಸಂಬಂಧಕ್ಕೆ ಕಾರಣ ಅತಿಯಾದ ನಿರೀಕ್ಷೆ ಎಂದು ಹೇಳಬಹುದು ಎಂದು ಹೇಳಿದ್ದಾರೆ.

Write A Comment