ಕರಾವಳಿ

ದುಬೈ ತುಳು ಪಾತೆರ್ಗ ತುಳು ಒರಿಪಾಗ 4ನೇ ವರ್ಷದ “ಗೌಜಿ ಗಮ್ಮತ್ ಗೊಬ್ಬುಲೆದ ಲೆಸ್”

Pinterest LinkedIn Tumblr

Tulu oripaga-March 15-2016-012

ತುಳು ಪಾತೆರ್ಗ ತುಳು ಒರಿಪಾಗ ದುಬೈಯ 4ನೇ ವರ್ಷದ “ಗೌಜಿ ಗಮ್ಮತ್ ಗೊಬ್ಬುಲೆದ ಲೆಸ್” ದುಬೈಯ ಜ಼ಬೀಲ್ ಪಾರ್ಕ್ನಲ್ಲಿ 11-03-2016ನೆ ಶುಕ್ರವಾರ ನೇರೆವೆರಿತು. ದುಬೈಯ ಉದ್ಯಮಿಯಾದ ಪ್ರಭಾಕರ್ ಶೆಟ್ಟಿ ಮತ್ತು ಸಾಮಾಜಿಕ ಕಾರ್ಯಾಕರ್ತ ನೊವೆಲ್ ಆಲ್ಮೆಡ “ಚೆನ್ನೆದ ಮಣೆ” ಆಡುವ ಮೂಲಕ ಕಾರ್ಯಾಕ್ರಮವನ್ನು ಉದ್ಗಾಟಿಸಿದರು.ಕಾರ್ಯಾಕ್ರಮದಲ್ಲಿ ತುಳುನಾಡಿನ ಕ್ರೀಡೆಗಳಾದ ಕಬಡ್ಡಿ, ಲಗೋರಿ, ಹಗ್ಗಜಗ್ಗಾಟ, ಕಾಗದ ದ ಆಟ, ಗೋಣಿ ಚೀಲ, ಸೈಕಲ್ ಚಕ್ರ ಓಡಿಸುವ ಹಾಗೂ ಹಲವಾರು ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿತ್ತು.

Tulu oripaga-March 15-2016-001

Tulu oripaga-March 15-2016-002

Tulu oripaga-March 15-2016-003

Tulu oripaga-March 15-2016-004

Tulu oripaga-March 15-2016-005

Tulu oripaga-March 15-2016-006

Tulu oripaga-March 15-2016-007

Tulu oripaga-March 15-2016-008

Tulu oripaga-March 15-2016-009

Tulu oripaga-March 15-2016-010

Tulu oripaga-March 15-2016-011

ಬಾಲಕೃಷ್ಣ ಸಾಲ್ಯಾನ್, ಸುಧಾಕರ್ ತುಂಬೆ, ಆನಂದ್ ಸಾಲ್ಯಾನ್, ಸತೀಶ್ ಉಳ್ಳಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಾಕ್ರಮಕ್ಕೆ ಶುಭ ಹಾರೈಸಿದರು. ದುಬೈಯಲ್ಲಿ ನಡೆಯುವ ರಕ್ತದಾನ ಶಿಬಿರದ ರೂವಾರಿಯಾದ ಬಾಲಕೃಷ್ಣ ಸಾಲ್ಯಾನ್ ಇವರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಎಲ್ಲಾ ಸದ್ಯಸರು ಉತ್ಸಾಹದಿಂದ ಕ್ರೀಡೆಗಳಲ್ಲಿ ಬಾಗವಹಿಸಿದರು.

ಜಯಗಳಿಸಿದ ಎಲ್ಲಾ ತಂಡಗಳಿಗೆ ಪ್ರಶಸ್ತಿ ಪತ್ರ ಮತ್ತು ಪದಕಗಳನ್ನು ನೀಡಿ ಗೌರವಹಿಸಲಾಯಿತು. ತುಳು ಪಾತೆರ್ಗ ತುಳು ಒರಿಪಾಗದ ಪ್ರಧಾನ ಕಾರ್ಯಾದರ್ಶಿಯಾದ ರೀತು ಅಂಚನ್ ಕುಲಶೇಖರ್ ಇವರು ಸ್ವಾಗತಿಸಿ ಕಾರ್ಯಾಕ್ರಮವನ್ನು ನಿರೂಪಿಸಿದರು. ನೊವೆಲ್ ಆಲ್ಮೆಡ ಹಾಗೂ ಅಮರ್ ಉಮೇಶ್ ಇವರು ಕ್ರೀಡೆಗಳನ್ನು ನಿರ್ವಹಿಸಿ ಸಂಘದ ಅದ್ಯಕ್ಷರಾದ ಪ್ರೇಮ್ ಜೀತ್ ರವರು ತುಳು ಪಾತೆರ್ಗ ತುಳು ಒರಿಪಾಗದ ಉದ್ದೇಶಗಳನ್ನು ವಿವರಿಸಿ ಪ್ರಾಯೋಜಕರಾದ ಉದಯ್ ಅಮೆರಿ, ಮನೋಜ್ ಕುಲಾಲ್,ಸತೀಶ್ ಪೂಜಾರಿ,ಭಾಸ್ಕರ ಅಂಚನ್, ಗುರುದತ್, ಕವಿರಾಜ್ ಇವರಿಗೆ ಧನ್ಯವಾದ ಸಮರ್ಪಣೆಯನ್ನು ಮಾಡಿದರು ಹಾಗೂ ಈ ಕಾರ್ಯಕ್ರಮದಲ್ಲಿ ಬಡಮಕ್ಕಳ ವಿಧಾರ್ಥಿವೇತನಕ್ಕೆ ಬೇಕಾಗುವ ಹಣವನ್ನು ಸಂಗ್ರಹಿಸಲಾಯಿತು.

Write A Comment