ಮನೋರಂಜನೆ

ನನ್ನನ್ನು ಮದುವೆಯಾಗು ಎಂದು ವಿರಾಟ್ ಕೊಹ್ಲಿಯನ್ನು ಕೇಳಿದ್ದ ಇಂಗ್ಲೆಂಡ್ ಕ್ರಿಕೆಟರ್

Pinterest LinkedIn Tumblr

virat-new

ನವದೆಹಲಿ: ವಿರಾಟ್ ಕೊಹ್ಲಿ ನನ್ನನ್ನು ಮದುವೆಯಾಗು ಎಂದು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದ ಇಂಗ್ಲೆಂಡ್ ಕ್ರಿಕೆಟರ್ ಡೇನಿಯಲ್ ವ್ಯಾತ್ ಭಾರತಕ್ಕೆ ಬಂದಿದ್ದಾಳೆ.

2014ರ ವರ್ಲ್ಡ್ ಕಪ್ ಕ್ರಿಕೆಟ್ ವೇಳೆ ಸೌತ್ ಆಫ್ರಿಕಾ ವಿರುದ್ಧ ಸೆಮಿ ಫೈನಲ್ ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಕೊಹ್ಲಿಯನ್ನು ವಿವಾಹವಾಗುವಂತೆ ಕೇಳಿದ್ದಳಂತೆ. ಆಗ ಇದು ಬಹುದೊಡ್ಡ ರಾಷ್ಟ್ರೀಯ ಸುದ್ದಿಯಾಗಿತ್ತು.

ನಂತರ ಇಂಗ್ಲೆಂಡ್ ನಲ್ಲಿ ಭಾರತ ತಂಡದ ಟೆಸ್ಟ್ ಮ್ಯಾಚ್ ಇದ್ದ ವೇಳೆ ವ್ಯಾಟ್ ಕೊಹ್ಲಿಯನ್ನು ಭೇಟಿ ಮಾಡಿದ್ದಳಂತೆ. ಇದಾದ ಎರಡು ವರ್ಷಗಳ ನಂತರ ವ್ಯಾಟ್ 2016ರ ಟಿ-20 ವರ್ಲ್ಡ್ ಕಪ್ ನಲ್ಲಿ ಭಾಗವಹಿಸಲು ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಭಾಗವಾಗಿ ಭಾರತಕ್ಕೆ ಬಂದಿದ್ದಾಳೆ.

ವ್ಯಾಟ್ ಗೆ ಮತ್ತೊಮ್ಮೆ ವಿರಾಟ್ ಕೊಹ್ಲಿಯನ್ನು ಭೇಟಿ ಮಾಡುವ ಅವಕಾಶ ಬಂದಿದೆ. ಇನ್ನೂ ಕ್ರಿಕೆಟ್ ಆಟಗಾರ್ಟಿ ವ್ಯಾಟ್ ಮಾಡಿದ್ದ ಈ ಟ್ವೀಟ್ ಅನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಇನ್ನೂ ಕೂಡ ಶೇರ್ ಮಾಡಿ, ರಿಟ್ವೀಟ್ ಮಾಡುತ್ತಿದ್ದಾರೆ.

Write A Comment