ಕೆಲವೊಮ್ಮೆ ವಾಟ್ಸಪ್ ಆಗಾಗ ಓಪನ್ ಆದ್ರೂ ಹ್ಯಾಂಗ್ ಆಗುತ್ತಿರುತ್ತದೆ. ವಾಟ್ಸಪ್ ಸ್ವಿಚ್ ಆಫ್ ಮಾಡಿ ಎಂದು ಸಂದೇಶ ಕಾಣುತ್ತಿರುತ್ತದೆ. ಸ್ವಿಚ್ ಆಫ್ ಮಾಡಿದರೂ ವಾಟ್ಸಪ್ ಮೊದಲಿನಂತೆ ಮಾತ್ರ ಕೆಲಸ ಮಾಡುವುದಿಲ್ಲ.
ಬಹಳಷ್ಟು ಜನರಿಗೆ ಈ ರೀತಿಯ ಸಮಸ್ಯೆ ಆಗುತ್ತಿರುತ್ತದೆ. ಈ ಸಮಸ್ಯೆಯನ್ನು ನೀವು ಸುಲಭವಾಗಿ ನಿವಾರಿಸಬಹುದು. ಮೊದಲನೇಯದಾಗಿ ನಿಮ್ಮ ಮೊಬೈಲನ್ನು ಸ್ವಿಚ್ ಆಫ್ ಮಾಡಿ. ಕೆಲ ನಿಮಿಷಗಳ ಬಳಿಕ ಆನ್ ಮಾಡಿ. ಬಳಿಕ ನೀವು ವೈಫೈ ಆಫ್ ಮಾಡಿ ಆನ್ ಮಾಡಿ.
ಇಷ್ಟು ಮಾಡಿಯೂ ಪದೇ ಪದೇ ವಾಟ್ಸಪ್ ಕನೆಕ್ಟ್ ಆಗದಿದ್ದರೆ ನೀವು ವಾಟ್ಸಪ್ ಅಪ್‍ಗ್ರೇಡ್ ಮಾಡಬೇಕಾಗುತ್ತದೆ. ಗೂಗಲ್ ಪ್ಲೇ ಸ್ಟೋರಿಗೆ ಹೋಗಿ ನೀವು ವಾಟ್ಸಪ್ ಅಪ್ ಗ್ರೇಡ್ ಮಾಡಿಕೊಳ್ಳಬಹುದು. ಅಥವಾ ನಿಮ್ಮ ಸ್ನೇಹಿತರ ಜೊತೆ ವಾಟ್ಸಪ್‍ನ ಹೊಸ ಆವೃತ್ತಿ ಇದ್ದಲ್ಲಿ ಶೇರ್‍ಇಟ್ ಅಥವಾ ಬೇರೆ ಯಾವುದೇ ಶೇರಿಂಗ್ ಅಪ್ ಮೂಲಕ ವಾಟ್ಸಪ್‍ನ್ನು ಶೇರ್ ಮಾಡಿಕೊಂಡು ಅಪ್‍ಡೇಟ್ ಮಾಡಿಕೊಳ್ಳಿ.
ಇಷ್ಟು ಮಾಡಿಯೂ ವಾಟ್ಸಪ್‍ನಲ್ಲಿ ಸುಲಲಿತವಾಗಿ ಟೈಪಿಸಲು ಸಾಧ್ಯವಾಗದಿದ್ದರೆ ಕೊನೆಯ ಉಪಾಯವಾಗಿ ವಾಟ್ಸಪ್ ಅನ್ ಇನ್‍ಸ್ಟಾಲ್ ಮಾಡಿ ಮತ್ತೊಮ್ಮೆ ಇನ್‍ಸ್ಟಾಲ್ ಮಾಡಿಕೊಳ್ಳಿ. ಆದರೆ ಈ ರೀತಿ ಮಾಡಿದಾಗ ವಾಟ್ಸಪ್‍ನಲ್ಲಿ ಸೇವ್ ಆಗಿರುವ ಎಲ್ಲ ಚಾಟ್ ಹಿಸ್ಟರಿಗಳು ಡಿಲೀಟ್ ಆಗಿ ಹೋಗುತ್ತದೆ.
ನೀವು ಈ ಮೇಲೆ ತಿಳಿಸಿದ ಎಲ್ಲವನ್ನು ಪ್ರಯೋಗ ಮಾಡುವ ಮೊದಲು ಡೇಟಾ ಸಿಗ್ನಲ್ ಸರಿ ಇದೆಯೇ ಎಂದು ಪರಿಶೀಲಿಸುವುದು ಉತ್ತಮ. ಬಹಳಷ್ಟು ಸಲ ಸಿಗ್ನಲ್ ಸರಿಯಾಗಿ ಸಿಗದೇ ಇದ್ದಲ್ಲಿ ನಿಮ್ಮ ಫೋನ್ ಸರಿಯಾಗಿ ಕಾರ್ಯನಿರ್ವಹಿಸದೇ ಇರುವ ಸಾಧ್ಯತೆ ಹೆಚ್ಚಿರುತ್ತದೆ.