ವಾಷಿಂಗ್ಟನ್: ಸಣ್ಣ ಮಕ್ಕಳು ಗೊಂಬೆಗಳೊಂದಿಗೆ ಆಡುವುದು ಸಾಮಾನ್ಯ. ಆದರೆ ಅಮೆರಿಕಲ್ಲಿ ಮೂರು ಮಂದಿ ಮಕ್ಕಳು ವಿಷಪೂರಿತ ಹಾವುಗಳೊಂದಿಗೆ ಆಟವಾಡುತ್ತಿದ್ದಾರೆ.
ಹೌದು.ಕ್ಯಾಲಿಫೋರ್ನಿಯ ನಿವಾಸಿ ಎರಿಕ್ ಉರಗ ತಜ್ಞನಾಗಿದ್ದು ಇವರ ಮನೆಯಲ್ಲಿ 100 ಕ್ಕೂ ಹೆಚ್ಚು ಹಾವುಗಳಿಗೆ. ಅವುಗಳಲ್ಲಿ 19 ಅಡಿ ಉದ್ದದ ಹೆಬ್ಬಾವು ಸೇರಿದೆ. ಈ ಹೆಬ್ಬಾವಿನ ಜೊತೆ ಮೂರು ಮಕ್ಕಳು ಆಡುತ್ತಿದ್ದಾರೆ.
ವಿಶೇಷ ಏನೆಂದರೆ ಈ ಮೂರು ಮಕ್ಕಳಿಗೆ ಈ ಹಿಂದೆ ಹಾವುಗಳು ಕಚ್ಚಿತ್ತು. ಆದರೆ ಕೂಡಲೇ ಚಿಕಿತ್ಸೆ ನೀಡಿದ್ದೇನೆ. ಈಗ ಈ ಮಕ್ಕಳಿಗೆ ಹಾವುಗಳೆಂದರೆ ಯಾವುದೇ ಭಯವಿಲ್ಲ ಎಂದು ಎರಿಕ್ ಹೇಳುತ್ತಾರೆ. ಹಾವಿನ ಜೊತೆಗಿನ ಮಕ್ಕಳ ಆಟ ಹೇಗಿದೆ ಎಂದು ನೋಡಲು ಈ ವಿಡಿಯೋ ಕ್ಲಿಕ್ ಮಾಡಿ.