ಕರಾವಳಿ

ಕೆ ಐ ಸಿ ಜಬಲ್ ಅಲಿ (JAFZA) ನೂತನ ಸಮಿತಿ ಅಸ್ತಿತ್ವಕ್ಕೆ

Pinterest LinkedIn Tumblr

IMG-20160205-WA0025

ದುಬೈ : ಪುತ್ತೂರು ತಾಲೂಕಿನ ಕುಂಬ್ರ ಪ್ರದೇಶದಲ್ಲಿ ಸಮನ್ವಯ ವಿಧ್ಯಾಧಾನ ನೀಡುತ್ತಿರುವ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಇಂದು ಅರಬ್ ರಾಷ್ಟ್ರಾದಾಧ್ಯಂತ ಹಲವಾರು ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಪ್ರಚಲಿತದಲ್ಲಿದ್ದು ಹಲವಾರು ಹಿತೈಶಿವರ್ಗವನ್ನು ತನ್ನದಾಗಿಸಿ ಕೊಂಡಿದೆ. ಇದರ ಮೇಲುಸ್ತುವಾರಿ ಸಮಿತಿ ಕರ್ನಾಟಕ ಇಸ್ಲಾಮಿಕ್ ಸೆಂಟರ್ ಅಧೀನದಲ್ಲಿ ದುಬೈ ಸಮಿತಿ ಸಹಯೋಗದೊಂದಿಗೆ ಕೆ ಐ ಸಿ ಜಬಲ್ ಅಲಿ ನೂತನ ಘಟಕವನ್ನು ರಚಿಸಲಾಯಿತು.

IMG-20160205-WA0044

IMG-20160205-WA0048

IMG-20160205-WA0050

IMG-20160205-WA0063

ದುಬೈ ಸಮಿತಿ ಅಧ್ಯಕ್ಷರಾದ ಅಶ್ರಫ್ ಖಾನ್ ಮಾಂತೂರ್ ರವರ ಅಧ್ಯಕ್ಷತೆಯಲ್ಲಿ ಅಶ್ರಫ್ ಅಮ್ಜದಿ ಯವರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಂಸುದ್ದೀನ್ ಹನೀಫಿ ಪ್ರಾರ್ಥಿಸಿದರು. ನಂತರ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಅವರು ಕೆ ಐ ಸಿ ಅಕಾಡೆಮಿ ಕಾರ್ಯ ಚಟುವಟಿಕೆಗಳನ್ನು ವಿವರಿಸಿ ಸರ್ವರ ಸಹಕಾರ ಕೋರಿ, ಪ್ರಸಕ್ತ ಸಂಘ ಸಂಸ್ಥೆಗಳನ್ನುಪೋಷಿಸ ಬೇಕಾದ ಅಗತ್ಯತೆ ಯನ್ನು ವಿವರಿಸಿದರು. ಇಂದು ಪೋಷಕರು ತಮ್ಮ ಜೀವನೋಪಾಯಕ್ಕಾಗಿ ಕಡಲಾಚೆಗೆ ಪ್ರಯಾಣಿಸಿ ತನ್ನ ಮಡದಿ ಮಕ್ಕಳಾದಿಯಾಗಿ ಕುಟುಂಬಿಕರನ್ನು ಸಲಹುವ ಉದ್ದೇಶದಿಂದ ದಿನದ ಹೆಚ್ಚಿನ ಸಮಯನ್ನು ದುಡಿಮೆಯಲ್ಲಿ ಉಪಯೋಗಿಸಿ ಅದರಿಂದ ಸಿಗುವ ಅಲ್ಪ ವೇತನವನ್ನು ತನ್ನ ಕುಟುಂಬಕ್ಕೆ ಕಳುಹಿಸಿಕೊಟ್ಟು, ತನ್ನಲ್ಲೇ ವೆದನೆಗಳನ್ನು ಸಹಿಸಿಕೊಂಡು ಜೀವಿಸುತ್ತಿರುವ ಇಂದಿನ ನಮ್ಮ ಪ್ರವಾಸಿ ಜೀವನದಲ್ಲಿ ನಮಗೆ ಸಿಗುವ ಪುನ್ಯದಾಯಕ ಕಾರ್ಯ ವಾಗಿದೆ ಇಂತಹ ಸಂಘ ಸಂಸ್ಥೆಗಳನ್ನು ಪೋಷಿಸುವುದು. ಇಂದು ಸಮುದಾಯದ ಯುವ ತರುಣರು ಅನಾಚಾರ , ಕಳ್ಳತನಗಳಲ್ಲಿ ಭಾಗಿಯಾಗಿ ಅಲೆದಾಟದ ಜೀವನವನ್ನು ನಡೆಸುತ್ತಿದ್ದು ಇವೆಲ್ಲದಕೂ ನಾಂದಿ ಹಾಡಬೇಕಾಗಿದ್ದು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಸಮುದಾಯದ ಸಮಾಜದ ಸತ್ಪ್ರಜೆಗಳಾಗಿ ಬೆಳೆಸುವಂತೆ ಕರೆ ನೀಡಿದ ಅವರು , ಕೆ ಐ ಸಿ ಕಳೆದ ಇಪ್ಪತ್ತು ವರ್ಷಗಳಿಂದ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದ ಬಡ ವಿಧ್ಯಾರ್ಥಿಗಳಿಗೆ ಉಚಿತವಾಗಿ ವಿಧ್ಯಾಧಾನವನ್ನು ನೀಡುತ್ತಿದ್ದು , ನಮ್ಮ ಸಂಸ್ಥೆಯಲ್ಲಿ ಎಂಟು ವರ್ಷಗಳ ಕಾಲ ವಿಧ್ಯಾರ್ಜನೆ ಗೈದು ಕೌಸರಿಗಲೆಂಬ ಪದವಿಯೊಂದಿಗೆ ಇಂದು ಸಮಾಜದಲ್ಲಿ ಪ್ರಭಾಷಣ ಲೋಕದಲ್ಲಿ ಗುರುತಿಸಿ ಕೊಂಡಿದ್ದು ಇವೆಲ್ಲವೂ ನಮ್ಮ ನಿಮ್ಮೆಲ್ಲರ ಪ್ರಯತ್ನದ ಫಲ ವಾಗಿದ್ದು , ಮುಂದೆ ಕೆ ಐ ಸಿ ಎಂಬ ಸ್ಥಾಪನೆಯನ್ನು ಬಲಪಡಿಸುವ ಉದ್ದೇಶದಿಂದ ಜಬಲ್ ಅಲಿ ಪ್ರದೇಶದ ದೀನೀ ಸ್ನೇಹಿಗಳಾದ ತಾವೆಲ್ಲರೂ ನಮ್ಮೊಂದಿಗೆ ಕೈಜೋಡಿಸುವಂತೆ ಕೇಳಿಕೊಂಡರು.

ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ನೂರ್ ಮುಹಮ್ಮದ್ ನೀರ್ಕಜೆ ಯವರು ಮಾತನಾಡಿ ವಿಧ್ಯಾ ಸಂಸ್ಥೆಯ ಕಾರ್ಯ ಚಟುವಟಿಕೆ, ಅಲ್ಲಿನ ಅಕಾಡೆಮಿ ವಾತಾವರಣ, ಗಳ ಕುರಿತು ಸವಿವರವಾಗಿ ವಿವರಿಸಿ ಸಮಿತಿ ಭಲವರ್ಧನೆಗೆ ತಾವೆಲ್ಲರೂ ನಮ್ಮೊಂದಿಗೆ ಕೈಜೋಡಿಸುವಂತೆ ಕೇಳಿಕೊಂಡರು.

ಅಶ್ರಫ್ ಅಂಜದಿ ಉಸ್ತಾದ್ ನೂತನ ಸಮಿತಿ ಜವಾಬ್ದಾರಿ ವಹಿಸಿ ಮಾತನಾಡಿ ಇಂದು ನಮ್ಮ ಸಮುದಾಯವು ಶೈಕ್ಷಣಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕಾದ ಅನಿವಾರ್ಯ ಪರಿಸ್ತಿತಿಯಲ್ಲಿದು , ನಮ್ಮ ಸಂಸ್ಥೆಯು ಎಂಟು ವರ್ಷಗಳ ವಿಧ್ಯಾಭ್ಯಾಸವನ್ನು ಉಚಿತವಾಗಿ ನೀಡುತ್ತಿದ್ದು ಇಂದು ಪ್ರಭಾಷಣ ಲೋಕದಲ್ಲಿ ಕೌಸರಿಗಲೆಂಬ ಯುವ ಪ್ರತಿಭೆಗಳನ್ನು ಸಮ್ಮ ಸಮುದಾಯಕ್ಕೆ ಸಮಾಜಕ್ಕೆ ಸಮರ್ಪಿಸಿರುತ್ತೇವೆ. ಆದ್ದರಿಂದ ಮುಂದೆ ಸಂಸ್ಥೆಯು ಬೆಳೆಯುತ್ತಿದ್ದು ನಮ್ಮ ನಿಮ್ಮಲ್ಲೆರ ಸಹಕಾರವು ಅತ್ಯಗತ್ಯವಾಗಿದೆ ಎಂದು ಸರ್ವರ ಸಹಕಾರವನ್ನು ಕೋರಿ ನೂತನ ಸಮಿತಿಗೆ ಚಾಲನೆ ನೀಡಿದರು.

ನೂತನ ಸಮಿತಿ ಪಧಾಧಿಕಾರಿಗಳಾಗಿ
ಗೌರವಾಧ್ಯಕ್ಷರು : ಮುಹಮ್ಮದ್ ಹಾಜಿ
ಅಧ್ಯಕ್ಷರು : ಆದಂ ಮುಕ್ರಂಪಾಡಿ
ಉಪಾಧ್ಯಕ್ಷರು : ಶರಫುದ್ದೀನ್ ಇಬ್ರಾಹಿಮ್ ಮೂಡಬಿದ್ರಿ ನಾಸಿರ್ ಮಂಗಳೂರು
ಪ್ರಧಾನ ಕಾರ್ಯದರ್ಶಿ : ಆಶಿಕ್ ಸಂಪ್ಯ
ಕಾರ್ಯದರ್ಶಿ : ಮಜೀದ್ ಮುಕ್ರಂಪಾಡಿ ಯಾಕುಬ್ ಕುಂದಾಪುರ
ಕೋಶಾಧಿಕಾರಿ : ಅಬ್ದುಲ್ ರಹ್ಮಾನ್ ಬಪ್ಪಲಿಗೆ
ಸಂಘಟನಾ ಕಾರ್ಯದರ್ಶಿ ; ಮುಹಮ್ಮದ್ ಶಾಫಿ ಪೆರ್ಲ ತಾಜುದ್ದೀನ್ ಆದೂರು
ಸಂಚಾಲಕರು : ರಾಫಿ ಮಲಪ್ಪುರಂ ಅಬ್ದುಲ್ ಮಜೀದ್ ಕೊಝಿಕ್ಕೊಡ್ ಹಂಝ ಮಲಪ್ಪುರಂ ಅಬ್ದುಲ್ ಸಲಾಂ ಕನ್ನೂರ್ ಹಮೀದ್ ಕಾಸರಗೋಡು ಶರೀಫ್ ಕನ್ನೂರ್ ಯೂಸುಫ್ ಸಿರಿಯಾ
ಕಾರ್ಯಕಾರಿ ಸಮಿತಿ ಪಧಾಧಿಕಾರಿಗಳಾಗಿ : ಶರೀಫ್ ಮುಸ್ಲಿಯಾರ್ , ಕಾಸರಗೋಡು ಅಶ್ರಫ್ ಅಮ್ಜದಿ ಮಾಡಾವು , ಮುಹಮ್ಮದ್ ಅಲಿ ಪರಂಗಿಪೇಟೆ ಝುಬೈರ್ ಮಲಪ್ಪುರಂ

ಕಾರ್ಯಕ್ರದಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆ ಗೊಂಡ ಆದಂ ಮುಕ್ರಂಪಾಡಿ ಪ್ರಧಾನ ಕಾರ್ಯದರ್ಶಿ ಆಶಿಕ್ ಸಂಪ್ಯ , ಶರೀಫ್ ಮುಸ್ಲಿಯಾರ್ ಮೊದಲಾದವರು ಸಂಧರ್ಬ್ಹೊಚಿತವಾಗಿ ಮಾತನಾಡಿ ನೂತನ ಸಮಿತಿಯ ಬಲ ವರ್ಧನೆಗೆ ಶಕ್ತಿ ಮೀರಿ ತಮ್ಮಿಂದಾಗುವ ರೀತಿಯಲ್ಲಿ ಸಹಕರಿಸುವುದಾಗಿ ಭರವಸೆಯಿತ್ತರು. ನಂತರ ಕೇಂದ್ರ ಸಮಿತಿ ಪಧಾಧಿಕಾರಿಗಳಾದ ಅಶ್ರಫ್ ಅರ್ಥಿಕೆರೆ ಅಹಮ್ಮದ್ ಜಾಬೀರ್ ಬೆಟ್ಟಂಪಾಡಿ ಅಬ್ದುಲ್ ಬಾರಿ ಮೊದಲಾದವರು ಸಂದರ್ಭೋಚಿತವಾಗಿ ಮಾತನಾಡಿ ನೂತನ ಸಮಿತಿಗೆ ಶುಭ ಹಾರೈಸಿದರು. ಇದೆ ಸಂದರ್ಭದಲ್ಲಿ ಶಂಸುದ್ದೀನ್ ಹನೀಫಿ ರವರ ನೇತೃತ್ವದಲ್ಲಿ ನಮ್ಮಿಂದ ಮರಣ ಹೊಂದಿದ ಕುಟುಂಬಿಕರ ಮೇಲೆ ತಹ್ಲೀಲ್ ಹಾಗೂ ಖುರ್ ಆನ್ ಪಾರಾಯಣ ನಡೆಸಿ ಪ್ರಾರ್ಥಿಸಲಾಯಿತು.

Write A Comment