ಚೆನ್ನಾಗಿ ತಿಂದು, ತೆಳ್ಳಗಿರಲು ಯಾರು ತಾನೇ ಬಯಸುವುದಿಲ್ಲ? ಖಂಡಿತವಾಗಿಯೂ ಇದನ್ನು ಎಲ್ಲರೂ ಬಯಸುತ್ತಾರೆ. ಅದಕ್ಕೆ ಇಲ್ಲೊಂದು ಪರಿಹಾರವಿದೆ. ಅದುವೇ ಪ್ರೋಟೀನ್. ಪ್ರೋಟೀನ್‌ನ ಮೂಲ ಚಿಕನ್. ಜೊತೆಗೆ ರೊಟ್ಟಿ, ಅಕ್ಕಿ, ಆಲೂಗಡ್ಡೆ ತೆಳ್ಳಗಾಗಲು ಅಗತ್ಯವಾದ ಪ್ರೋಟೀನ್‌ಯುಕ್ತ ಆಹಾರವಾಗಿದೆ. ಸ್ನಾಯುಗಳಿಗೆ ಬಲ, ತೆಳ್ಳಗಾಗುವುದಿದ್ದರೆ, ನಿಮ್ಮ ತಟ್ಟೆಯಲ್ಲಿ ಯಾವಾಗಲೂ ಕೊಂಚ ಕೋಳಿ ಮಾಂಸ ಇರಲೇಬೇಕು.
ಸ್ವಾಸ್ಥ್ಯ ಮತ್ತು ಸುಂದರ ರೂಪದ ಬಗ್ಗೆ ಆಸಕ್ತಿಯಿರುವ ಇಂದಿನ ಯುವ ಪೀಳಿಗೆ ಆಹಾರ ಸೇವಿಸುವ ವಿಷಯಕ್ಕೂ ಹೆಚ್ಚು ಒತ್ತು ನೀಡುತ್ತಾರೆ ಅಲ್ಲದೆ ಕೊಬ್ಬು ಕರಗಿಸಲು ಬಹಳ ಪಡಿಪಾಟಲು ಪಡುತ್ತಾರೆ. ಕೊಬ್ಬು ಕರಗಿಸಲು ಎರಡು ನಿಯಮಗಳಿವೆ. ಅವನ್ನು ಒಮ್ಮೆ ಗಮನಿಸುವುದು ಒಳಿತು.
1. ಕ್ಯಾಲೊರಿ ಒಳಗೆ ಮತ್ತು ಕ್ಯಾಲರಿ ಹೊರಗೆ: ಇದರ ಅರ್ಥ ತೂಕ ಕಳೆದುಕೊಳ್ಳಬೇಕಿದ್ದಲ್ಲಿ ಎಷ್ಟು ಕ್ಯಾಲೋರಿ ಸೇವಿಸುತ್ತೀರಿ, ಎಷ್ಟನ್ನು ವ್ಯಯ ಮಾಡುತ್ತೀರಿ ಎಂಬ ಲೆಕ್ಕಾಚಾರ ಇರಬೇಕು. ಸಾಧ್ಯವಿದ್ದಷ್ಟೂ ತಿನ್ನುವುದಕ್ಕಿಂತಲೂ ಕರಗಿಸುವತ್ತ ಗಮನವಿರಬೇಕು. ಕ್ಯಾಲೋರಿಗಳನ್ನು ಸುಟ್ಟಷ್ಟೂ ಕೊಬ್ಬು ಕಡಿಮೆಯಾಗುತ್ತದೆ.
2. ಪ್ರಮಾಣಕ್ಕಿಂತ ಗುಣಮಟ್ಟ ಮುಖ್ಯ: ಇದರ ಅರ್ಥ ನಾವು ತಿನ್ನುವ ಕ್ಯಾಲೊರಿಯ ಪ್ರಮಾಣಕ್ಕಿಂತ ಆಹಾರದ ಗುಣಮಟ್ಟವು ಹೆಚ್ಚು ಮುಖ್ಯ. ಹೆಚ್ಚಿನ ಪ್ರಮಾಣದಲ್ಲಿ ತಿಂದು ಕರಗಿಸುವುದು ಒಳಿತೋ ಅಥವಾ ಕಡಿಮೆ ಪ್ರಮಾಣ ಹಾಗೂ ಹೆಚ್ಚು ಗುಣಮಟ್ಟವಿರುವ ಆಹಾರ ಸೇವಿಸಬೇಕೋ…
ಇವೆರಡೂ ನಿಯಮಗಳಲ್ಲಿ ನಿಮ್ಮ ಜೀವನಶೈಲಿಗೆ ಯಾವುದು ಒಪ್ಪುತ್ತದೆ? ಎರಡೂ ವಾದಗಳು ಸಮಂಜಸವೆನಿಸುತ್ತವೆ ಅಲ್ಲವೇ? ಇವೆರಡನ್ನೂ ಒಟ್ಟೊಟ್ಟಿಗೆ ಬಳಸುವುದೇ ಆರೋಗ್ಯಕ್ರ ಶೈಲಿಯಾಗಿದೆ. ಆಹಾರದ ಪ್ರಮಾಣ ಮತ್ತು ಗುಣಮಟ್ಟ ಎರಡೂ ಸಮತೋಲಿತವಾಗಿದ್ದಲ್ಲಿ ಮಾತ್ರ ತೂಕ ನಿಯಂತ್ರಣ ಸಮರ್ಪಕವಾಗಿರುತ್ತದೆ.
ಚಿಕನ್ ಸೇವಿಸುವುದರಿಂದ ಕೊಬ್ಬು ಹೆಚ್ಚಾಗುತ್ತದೆ ಎನ್ನುವುದೊಂದು ವಾದವಿದೆ. ಆದರೆ ಚಿಕನ್‌ನ ಯಾವ ಖಾದ್ಯಗಳನ್ನು ಸೇವಿಸುವಿರಿ ಎನ್ನುವುದು ಹೆಚ್ಚು ಮಹತ್ವಪೂರ್ಣವಾಗಿದೆ. ಕರಿದ ತಿಂಡಿಗಳಾದರೆ ಖಂಡಿತವಾಗಿಯೂ ಆರೋಗ್ಯಕ್ಕೆ ಹಾನಿಕರವಾಗಿರುತ್ತವೆ. ಆದರೆ ಬೇಯಿಸಿದ ಚಿಕನ್‌ನಿಂದ ದೇಹಕ್ಕೆ ಅಮೈನೊ ಆಮ್ಲವನ್ನು ಒದಗುತ್ತದೆ. ವಿಟಮಿನ್ಸ್, ಪೌಷ್ಠಿಕಾಂಶಗಳು ದೊರೆಯುತ್ತವೆ. ಚಿಕನ್‌ನ ಹಿತಮಿತವಾದ ಸೇವನೆ ಅಂಗಸೌಷ್ಠವವನ್ನು ಕಾಪಾಡುತ್ತದೆ.
