ರಾಷ್ಟ್ರೀಯ

ಜನವರಿಯಿಂದ ಕಾಲ್ ಡ್ರಾಪ್‌ಗೆ 1 ರೂ. ಪರಿಹಾರ; 3 ಕರೆಗಳಿಗೆ ಸೀಮಿತ

Pinterest LinkedIn Tumblr

mob

ಹೊಸದಿಲ್ಲಿ, ಅ.16: ಮುಂದಿನ ವರ್ಷ (2016) ಜ.1ರಿಂದ ಕಾಲ್‌ಡ್ರಾಪ್ ಒಂದಕ್ಕೆ ಮೊಬೈಲ್ ನಿರ್ವಾಹಕ ಸಂಸ್ಥೆಗಳು ಗ್ರಾಹಕರ ಖಾತೆಗೆ 1 ರೂ. ಜಮಾ ಮಾಡಬೇಕಾಗುತ್ತದೆಯೆಂದು ದೂರವಾಣಿ ನಿಯಂತ್ರಕ ಟ್ರಾಯ್ ತಿಳಿಸಿದೆ. ಆದರೆ, ಗ್ರಾಹಕರಿಗೆ ದಿನಕ್ಕೆ ಕೇವಲ 3 ಕಾಲ್ ಡ್ರಾಪ್‌ಗಳಿಗೆ ಮಾತ್ರ ಪರಿಹಾರ ನೀಡಲಾಗುವುದೆಂದು ಅದು ಹೇಳಿದೆ.

ಒಂದು ಕರೆ ಡ್ರಾಪ್ ಆದ 4 ತಾಸುಗಳೊಳಗೆ ಸೇವಾದಾರ ಸಂಸ್ಥೆಗಳು ಜಮೆ ಮಾಡಿದ ಮೊತ್ತದ ಕುರಿತು ಬಳಕೆದಾರರಿಗೆ ಎಸ್‌ಎಂಎಸ್ ಸಂದೇಶ ಕಳುಹಿಸಬೇಕು. ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಮುಂದಿನ ಬಿಲ್‌ನಲ್ಲಿ ಜಮೆ ಮಾಡಿದ ಹಣದ ಮಾಹಿತಿ ನೀಡಲಾಗುತ್ತದೆಂದು ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ತಿಳಿಸಿದೆ. ಯಶಸ್ವಿಯಾಗಿ ಸಂಪರ್ಕ ಹೊಂದಿದ ಕರೆಯೊಂದು ಮಾತುಕತೆ ಮುಗಿಯುವ ಮೊದಲೇ ಕಡಿತಗೊಳ್ಳುವುದಕ್ಕೆ ಕಾಲ್‌ಡ್ರಾಪ್ ಎನ್ನಲಾಗುತ್ತದೆ.

ಕಾಲ್ ಡ್ರಾಪ್‌ಗೆ ಪರಿಹಾರ ನೀಡುವುದನ್ನು ಸೇವಾದಾರರು ವಿರೋಧಿಸುವ ನಿರೀಕ್ಷೆಯಿದ್ದು, ಕಿರುಕುಳಕ್ಕೊಳಗಾಗುತ್ತಿರುವ ಬಳಕೆದಾರರು ಅದನ್ನು ಪ್ರಬಲವಾಗಿ ಬೆಂಬಲಿಸುತ್ತಿದ್ದಾರೆ.

Write A Comment