ಮನೋರಂಜನೆ

ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಗೆ ಕಂಕಣಭಾಗ್ಯ

Pinterest LinkedIn Tumblr

nayanaನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಾರೆ ಎಂಬ ಸುದ್ದಿ ಬ್ರೇಕ್ ಆಗಿದ್ದು, ಅದಕ್ಕೆ ಏಕಧ್ವನಿಯಲ್ಲಿ ‘ಅಂಥದ್ದೇನಿಲ್ಲ’ ಎಂದು ಇಬ್ಬರೂ ರಾಗ ಎಳೆದಿದ್ದು ಗೊತ್ತೇ ಇದೆ. ಆ ಬಳಿಕ ವಿದೇಶಿದಲ್ಲಿ ಕ್ಲಿಕ್ಕಿಸಿಕೊಂಡಿದ್ದ ಈ ಜೋಡಿಯ ಹಾಟ್ ಸೆಲ್ಪೀ ಸಖತ್ ಸೌಂಡು ಮಾಡಿತ್ತು. ಇದೀಗ ಇವರ ಬಗ್ಗೆ ಮತ್ತೆ ಮಾತನಾಡಲು ಕಾರಣವಿದೆ. 2016ರ ಅಂತ್ಯದ ವೇಳೆಗೆ ನಯನಾ-ವಿಘ್ನೇಶ್ ಹಸೆಮಣೆ ಏರಲಿದ್ದಾರೆ ಎನ್ನುತ್ತಿವೆ ಮೂಲಗಳು!!

‘ನಾನುಮ್ ರೌಡಿಯಾಧಾನ್’ ಚಿತ್ರಕ್ಕೆ ವಿಘ್ನೇಶ್ ನಿರ್ದೇಶನ ಮಾಡುತ್ತಿದ್ದಾರೆ. ಇದರ ನಾಯಕಿ ನಯನಾ. ಈಗಾಗಲೇ ಚಿತ್ರದ ಶೂಟಿಂಗ್ ಮುಗಿದಿದ್ದು, ಬಿಡುಗಡೆಗೆ ಸಕಲ ಸಿದ್ಧತೆ ನಡೆದಿದೆ. ಇತ್ತ ನಯನಾ ಕೈಯಲ್ಲೂ ಸಾಕಷ್ಟು ಚಿತ್ರಗಳಿದ್ದು, ಮುಂದಿನ ವರ್ಷದೊಳಗೆ ಮುಗಿಯಲಿವೆ. ಹಾಗಾಗಿ, ಎಲ್ಲ ಕಮಿಟ್​ವೆುಂಟ್​ಗಳನ್ನು ಮುಗಿಸಿಕೊಂಡು ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ ಎನ್ನಲಾಗುತ್ತಿದೆ.

ಆದರೆ ವಿಘ್ನೇಶ್, ‘ಇನ್ನೊಬ್ಬರನ್ನು ಜನರು ಅಚ್ಚರಿಪಡಿಸುವುದಕ್ಕೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ನಯನಾ ಇದಕ್ಕೆಲ್ಲ ಮಹತ್ವ ನೀಡುವುದಿಲ್ಲ. ಅವರ ಸಿನಿಮಾಗಳು ಉತ್ತಮವಾಗಿ ಪ್ರದರ್ಶನ ಕಾಣುತ್ತಿರುವಾಗ ಇಂಥದ್ದಕ್ಕೆಲ್ಲ ತಲೆಕೆಡಿಸಿಕೊಳ್ಳಲು ಸಮಯವಿಲ್ಲ’ ಎಂದಿದ್ದಾರೆ! ಏನೇ ಆಗಲಿ, ಸಿಂಬು ಮತ್ತು ಪ್ರಭುದೇವ ಜತೆಗೆ ಪ್ರೀತಿ-ಪ್ರೇಮ ಅಂತೆಲ್ಲ ಸುತ್ತಾಡಿದ ಬಳಿಕ ನಯನಾ ಈ ವಿಚಾರದಲ್ಲಿ ಎಚ್ಚರದಿಂದರಬೇಕು ಎನ್ನುವುದು ಅಭಿಮಾನಿಗಳ ಕಾಳಜಿಯುಕ್ತ ಹಾರೈಕೆ.

Write A Comment