ಕರಾವಳಿ

ಮುಂದಿನ ಗುರಿ ಪಂಜಾಬ್ ರಾಜ್ಯವನ್ನು ಗೆಲ್ಲುವುದಾಗಿದೆ: ಕೇಜ್ರಿವಾಲ್

Pinterest LinkedIn Tumblr

Arvind-Kejriwal

ಬೆಳ್ತಂಗಡಿ, ಸೆ.9: ದಿಲ್ಲಿಯನ್ನು ಗೆದ್ದ ಬಳಿಕ ನಮ್ಮ ಮುಂದಿನ ಗುರಿ ಪಂಜಾಬ್ ರಾಜ್ಯವನ್ನು ಗೆಲ್ಲುವುದಾಗಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ಧರ್ಮಸ್ಥಳದಲ್ಲಿ ಶ್ರೀಸನ್ನಿಧಿ ಅತಿಥಿ ಗೃಹದಲ್ಲಿ ಬುಧವಾರ ಅವರು ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡಿದರು. ಈಗಾಗಲೇ ದಿಲ್ಲಿ ಆಮ್ ಆದ್ಮಿ ಪಕ್ಷದ ಕೈಯಲ್ಲಿದೆ. ನಮ್ಮ ಮುಂದಿನ ಹೆಜ್ಜೆ ಪಂಜಾಬ್ ರಾಜ್ಯದ ಕಡೆಗೆ ಆಗಿದ್ದು, ಅಲ್ಲಿ ಒಂದು ತಿಂಗಳೊಳಗೆ ಪ್ರತೀ ಬೂತ್‌ನಲ್ಲಿ ಐದೈದು ಕಾರ್ಯಕರ್ತರನ್ನು ತಯಾರು ಮಾಡಲಾಗುವುದು. ಇಲ್ಲಿ ಯುವಕರ ಸಂಘಟನೆ ಚುರುಕಾಗಿದೆ. ಮುಂದಿನ ದಿನಗಳಲ್ಲಿ ಇನ್ನುಳಿದ ರಾಜ್ಯಗಳಲ್ಲೂ ಇದೇ ಪ್ರಯತ್ನ ಮುಂದುವರಿಸಲಾಗುವುದು ಎಂದು ಅವರು ತಿಳಿಸಿದರು.

ಕೇಂದ್ರದ ನರೇಂದ್ರ ಮೋದಿ ಸರಕಾರವನ್ನು ಜನರು ಬಹು ನಿರೀಕ್ಷೆಯೊಂದಿಗೆ ಅಧಿಕಾರಕ್ಕೆ ತಂದಿದ್ದರು ಆದರೆ ಸರಕಾರ ಜನರನ್ನು ನಿರಾಶೆಗೊಳಿಸಿದೆ. ಅದು ಅವರ ಧರ್ಮ. ಕೆಲಸ ಮಾಡಿ ತೋರಿಸುವುದು ನಮ್ಮ ಧರ್ಮ. ಹೀಗಾಗಿ ಮತದಾರರು ಮುಂದೆಯೂ ನಮ್ಮೆಂದಿಗೆ ಇರಲಿದ್ದಾರೆ ಎಂದರು.

ಇದೇ ಅಕ್ಟೋಬರ್ ತಿಂಗಳೊಳಗೆ ಲೋಕಪಾಲ್ ಮಸೂದೆಯನ್ನು ದಿಲ್ಲಿಯಲ್ಲಿ ಜಾರಿಗೆ ತರಲಾಗುವುದು. ಸರಕಾರದ ವಿವಿಧ ಯೋಜನೆಗಳಿಗೆ ಭೂಮಿ ವಶಪಡಿಸಿಕೊಳ್ಳುವಾಗ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟ ಅವರು, ದಿಲ್ಲಿಯಲ್ಲಿ ಇದನ್ನು ಪ್ರಾಮಾಣಿಕವಾಗಿ ಮಾಡುವುದಾಗಿ ತಿಳಿಸಿದರು. ಕೃಷಿಗಾಗಿ, ಕೃಷಿಕರಿಗಾಗಿ ವಿಶೇಷ ಯೋಜನೆ ಮಾಡಿದ್ದೇವೆ. ಎಲ್ಲ ರಾಜ್ಯದ ರೈತರನ್ನು ಬೇರೆ ಬೇರೆಯಾಗಿ ಸೇರಿಸಿ ಮಾತುಕತೆ ನಡೆಸಬೇಕು, ಅಲ್ಲಿನ ಅಗತ್ಯಗಳಿಗೆ ಅನುಗುಣವಾಗಿ ಕಾರ್ಯತಂತ್ರಗಳನ್ನು ರೂಪಿಸಬೇಕು ಎಂದರು.

Write A Comment