ಕರಾವಳಿ

ರೋಟರಿ ಕ್ಲಬ್ ಮಣಿಪಾಲ ಟೌನ್ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Pinterest LinkedIn Tumblr

Feliciation_0424

ರೋಟರಿ ಕ್ಲಬ್ ಮಣಿಪಾಲ ಟೌನ್ ಇದರ 2015-16 ನೇ ಸಾಲಿನ ಅಧ್ಯಕ್ಷರಾಗಿ ಡಾ. ಸೇಸಪ್ಪ ಎ. ರೈ ಹಾಗು ಪ್ರಧಾನ ಕಾರ್ಯದರ್ಶಿಯಾಗಿ ರಾಘವೇಂದ್ರ ಜಿ ಇವರುಗಳ ನೇತೃತ್ವದ ನೂತನಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜು.15ರಂದು ಮಣಿಪಾಲದ ಫಾರ್ಚ್ಯೂನ್ ಇನ್ ವ್ಯಾಲಿ ವ್ಯೂ ನ ‘ಚೈತ್ಯಾ’ ಸಭಾಂಗಣದಲ್ಲಿ ಜರುಗಿತು.

ಪದಗ್ರಹಣ ಅಧಿಕಾರಿಯಾಗಿ ಮಾತನಾಡಿದ ರೋಟರಿ ಜಿಲ್ಲಾ ನಿಯೋಜಿತ ರಾಜ್ಯಪಾಲ 2017-18 ಜಿ. ಏನ್. ಪ್ರಕಾಶ್ ಮಾತನಾಡಿ ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ ಹಾಗು ಹೆಚ್ಚಾಗಿಯುವ ಸದಸ್ಯರುಗಳನ್ನೋಳಗೊಂಡ ಕ್ಲಬ್ ನ ಭವಿಷ್ಯ ಉಜ್ವಲವಾಗಲಿ ಹಾಗು ಈ ಮೂಲಕ ರೋಟರಿಯ ದ್ಯೇಯ ಮತ್ತು ಉದ್ದೇಶಗಳು ಅಕ್ಷರಶಃ ಕಾರ್ಯಗತವಾಗಲಿ ಎಂದು ಹಾರೈಸಿದರು.ಮುಖ್ಯ ಅತಿಥಿಯಾಗಿ ವಲಯ 2ರ ರೋಟರಿ ಉಪ ರಾಜ್ಯಪಾಲ ಅಲನ್ ವಿನಯ್ ಲುವಿಸ್ ಕ್ಲಬ್ ನ ಮಾಸಿಕ ಪತ್ರಿಕೆ ‘ಪ್ರೇರಣ’ ಬಿಡುಗಡೆಗೊಳಿಸಿ ಕೆಲವೇ ತಿಂಗಳುಗಳ ಹಿಂದೆ ಪ್ರಾರಂಭವಾದಈ ನೂತನ ಕ್ಲಬ್ ನಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಇನ್ನೋರ್ವ ಮುಖ್ಯ ಅತಿಥಿ ಡಾ. ಪ್ರಭಾಕರ ರೆಂಜಾಲ್ ನೂತನ ಸದಸ್ಯರುಗಳನ್ನು ಅಧಿಕೃತವಾಗಿಬರಮಾಡಿಕೊಂಡು ಶುಭ ಹಾರೈಸಿದರು.

Inst_0336

Group

ಸರ್ಕಾರಿ ಪಾಲಿಟೆಕ್ನಿಕ್ ರೋಟರಾಕ್ಟ್ ವಿಧ್ಯಾರ್ಥಿ ಹರ್ಷ ಪೂಜಾರಿ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷ ಡಾ. ಸೇಸಪ್ಪ ಎ. ರೈ ವಹಿಸಿ ಅತಿಥಿಗಣ್ಯರನ್ನು ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿಯಾಗಿ ರಾಘವೇಂದ್ರ ಜಿ ಕಳೆದ ಸಾಲಿನ ವರದಿ ವಾಚಿಸಿ ಪರದೆಯಲ್ಲಿ ಪ್ರಸ್ತುತ ಪಡೆಸಿದರು, ಕ್ಲಬ್ ಪ್ರಾರಂಬಿಸಲು ರೋಟರಿರಾಜ್ಯಪಾಲರ ವಿಶೇಷ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ ಕೆ. ಎಸ. ಜೈವಿಠಲ್ ಕ್ಲಬ್ ಪ್ರಾರಂಭವಾಗಿ ಬೆಳೆದ ಹಾದಿಯನ್ನು ವಿವರಿಸಿದರು ಹಾಗು ಉಪಾಧ್ಯಕ್ಷೆ ಡಾ. ಎಲ್ಸ ಸನತೊಂಬಿ ದೇವಿಉಪಸ್ಥಿತರಿದ್ದರು.

ಕ್ಲಬ್ ಪ್ರಾರಂಬಿಸಲು ಕಾರಣೀಕರ್ತರಾದ 2014-15 ನೇ ಸಾಲಿನ ರೋಟರಿ ಉಪ ರಾಜ್ಯಪಾಲ ದಿನೇಶ್ ಹೆಗ್ಡೆ ಅತ್ರಾಡಿ ದಿನೇಶ್ ಹೆಗ್ಡೆ, ಕೆ. ಎಸ. ಜೈವಿಠಲ್, ಬಾಲಕೃಷ್ಣ ಮದ್ದೋಡಿಇವರುಗಳನ್ನು ಸನ್ಮಾನಿಸಲಾಯಿತು ಹಾಗು ಸಹಕರಿಸಿದ ಜಯರಾಜ್ ಶೆಟ್ಟಿ, ಪ್ರಸನ್ನ ಕುಮಾರ್ ಶೆಟ್ಟಿ ಇವರುಗಳನ್ನು ಗೌರವಿಸಲಾಯಿತು.

ತನುಜಾ ಮುಬೇನ್ ಮತ್ತು ವಿಜಯಲಕ್ಷ್ಮಿ ಕಾರ್ಯಕ್ರಮವನ್ನು ನಿರ್ವಹಿಸಿ, ಅಮೃತರಾಜ್ ಸಹಕರಿಸಿದರು, ಪದಾಧಿಕಾರಿಗಳ ಹಾಗು ನೂತನ ಸದಸ್ಯರುಗಳ ಪರಿಚಯ ಪತ್ರವನ್ನು ರತ್ನದೀಪ್ಭಟ್ಟಾಚಾರ್ಯ, ಡಾ. ಶಶಿಧರ ವೈ ಏನ್, ಸಿ. ಎಪ್. ರೋಡ್ರಿಗಸ್, ಮಿತುನ್ ಶೆಟ್ಟಿ, ರಾಹುಲ್ ಶೆಡ್ಬಾಲ್ಕರ್ ಇವರುಗಳು ಓದಿ, ಮಾಸಿಕ ಪತ್ರಿಕೆಯ ಬಿಡುಗಡೆ ಹಾಗು ಆಡಿಯೋ-ವೀಡಿಯೊವರದಿಗಳಿಗಾಗಿ ಸುರೇಶ ಕೆ, ಹಿಲ್ಡಾ ಲುವಿಸ್ ಇವರುಗಳು ಸಹಕರಿಸಿದರು.

Write A Comment