ಕರಾವಳಿ

ಪಿಯು ಫಲಿತಾಂಶ ಪ್ರಕಟ, ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ-ಗದಗ ಜಿಲ್ಲೆ ಕೊನೆಯ ಸ್ಥಾನ: ಶೇ.60.54ರಷ್ಟುಫಲಿತಾಂಶ, ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ

Pinterest LinkedIn Tumblr

results

ಬೆಂಗಳೂರು: 2014-15ಮೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಪ್ರತಿವರ್ಷದಂತೆ ಈ ವರ್ಷವೂ ಬಾಲಿಕಿಯರೇ ಮೇಲುಗೈ ಸಾಧಿಸಿದ್ದಾರೆ.

ಇಂದು ಬೆಳಗ್ಗೆ 11.30ಕ್ಕೆ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸುಷ್ಮಾ ಗೋಡಬೋಲೆ ಅವರು, ಈ ವರ್ಷ ಶೇ.60.54ರಷ್ಟು ಫಲಿತಾಂಶ ಬಂದಿದ್ದು, ಫಲಿತಾಂಶದಲ್ಲಿ ದಕ್ಷಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ ಹಾಗೂ ಉತ್ತರ ಕನ್ನಡ ತೃತೀಯ ಸ್ಥಾನ ಪಡೆದರೆ, ಗದಗ ಜಿಲ್ಲೆ ಕೊನೆಯ ಸ್ಥಾನ ಪಡೆದುಕೊಂಡಿದೆ ಎಂದು ತಿಳಿಸಿದರು.

ರಾಜ್ಯದ 55 ಕಾಲೇಜುಗಳಲ್ಲಿ 100ಕ್ಕೆ 100ರಷ್ಟು ಫಲಿತಾಂಶ ಬಂದಿದ್ದು, 47 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಪ್ರಸಕ್ತ ಸಾಲಿನಲ್ಲಿ 105 ವಿದ್ಯಾರ್ಥಿಗಳು ಡಿಬಾರ್ ಆಗಿದ್ದರು ಎಂದು ಗೋಡಬೋಲೆ ಅವರು ಹೇಳಿದರು.

12 ಗಂಟೆ ಬಳಿಕ ಇಲಾಖೆ ಅಧಿಕೃತ ವೆಬ್‍ಸೈಟ್(www.pue.kar.nic.in )ನಲ್ಲಿ ಫಲಿತಾಂಶ ದೊರೆಯಲಿದೆ.. ಮಾರ್ಚ್ ಮೂರನೇ ವಾರದಲ್ಲಿ ನಡೆದ ದ್ವಿತೀಯ ಪಿಯು ಅಂತಿಮ ಪರೀಕ್ಷೆಗೆ ಸುಮಾರು 6.10 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.

ಕಳೆದ ವರ್ಷ ರಾಜ್ಯವಾರು ಫಲಿತಾಂಶದಲ್ಲಿ ಮೊದಲ ಬಾರಿಗೆ ಪಿಯು ವಿದ್ಯಾರ್ಥಿಗಳು ಶೇ.60ರ ಗಡಿ ದಾಟಿದ್ದರು. ನೂತನ ಪಠ್ಯಕ್ರಮ ಅನುಷ್ಠಾನಕ್ಕೆ ಬಂದ ಬಳಿಕದ ಎರಡನೇ ಫಲಿತಾಂಶ ಇದಾಗಿದೆ. ಮಂಗಳವಾರ ಮಧ್ಯಾಹ್ನದಿಂದ ಫಲಿತಾಂಶವು ಆಯಾಕಾಲೇಜುಗಳಲ್ಲಿ ಲಭ್ಯವಿರಲಿದೆ.

ಯಾವ ಜಿಲ್ಲೆಗೆ ಯಾವ ಸ್ಥಾನ : ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಶೇ.93.09 ರಷ್ಟು ಫಲಿತಾಂಶ ಪಡೆದು ಮೊದಲ ಪಡೆದಿದೆ. ಉಡುಪಿ ಶೇ. 92.32 ಫಲಿತಾಂಶ ಪಡೆದಿದ್ದು ದ್ವಿತೀಯ ಸ್ಥಾನದಲ್ಲಿದೆ. ಉತ್ತರ ಕನ್ನಡ ಶೇ. 81.19ರಷ್ಟು ಫಲಿತಾಂಶ ಪಡೆದು ಮೂರನೇ ಸ್ಥಾನಗಳಿಸಿದ್ದರೆ. ಶೇ 51.02ರಷ್ಟು ಫಲಿತಾಂಶ ಪಡೆದ ಗದಗ ಕೊನೆಯದಲ್ಲಿದೆ.

2015 ಮಾರ್ಚ್ 12ರಿಂದ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿದ್ದವು. 1017 ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದ 6,10,939 ವಿದ್ಯಾರ್ಥಿಗಳ ಪೈಕಿ 3,69,474 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಫಲಿತಾಂಶದಲ್ಲಿ ನಗರ ಭಾಗದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚು ಸಾಧನೆ ಮಾಡಿದ್ದಾರೆ.

ಫಲಿತಾಂಶದ ಮುಖ್ಯಾಂಶಗಳು : * ಕಲಾ ವಿಭಾಗ ಶೇ 51.12ರಷ್ಟು ಫಲಿತಾಂಶ
ಪರೀಕ್ಷೆ ಬರೆದವರು 2,30,027 ವಿದ್ಯಾರ್ಥಿಗಳು
ಉತ್ತೀರ್ಣಗೊಂಡವರು 1,17,394 ವಿದ್ಯಾರ್ಥಿಗಳು

* ವಿಜ್ಞಾನ ವಿಭಾಗ ಶೇ 65.19ರಷ್ಟು ಫಲಿತಾಂಶ
ಪರೀಕ್ಷೆ ಬರೆದವರು 1,72,105 ವಿದ್ಯಾರ್ಥಿಗಳು
ಉತ್ತೀರ್ಣರಾದವರು 1,12.148 ವಿದ್ಯಾರ್ಥಿಗಳು

* ವಾಣಿಜ್ಯ ವಿಭಾಗದಲ್ಲಿ ಶೇ 67.06ರಷ್ಟು ಫಲಿತಾಂಶ ಬಂದಿದೆ
ಪರೀಕ್ಷೆ ಬರೆದವರು 2,08,807 ವಿದ್ಯಾರ್ಥಿಗಳು
ಉತ್ತೀರ್ಣರಾದವರು 1,39,932 ವಿದ್ಯಾರ್ಥಿಗಳು

ಗರಿಷ್ಠ ಅಂಕಗಳು : ಕಲಾ ವಿಭಾಗದಲ್ಲಿ ಗರಿಷ್ಠ ಅಂಕ – 579
ವಾಣಿಜ್ಯ ವಿಭಾಗದಲ್ಲಿ ಗರಿಷ್ಠ ಅಂಕ – 593
ವಿಜ್ಞಾನ ವಿಭಾಗದಲ್ಲಿ ಗರಿಷ್ಠ ಅಂಕ – 595

ಜೂನ್ 25ರಿಂದ ಪೂರಕ ಪರೀಕ್ಷೆ : ಉತ್ತರ ಪತ್ರಿಕೆಯ ಫೋಟೋ ಪ್ರತಿಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಮೇ 25. ಮರು ಮೌಲ್ಯಮಾನಕ್ಕೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಮೇ 30. ಜೂನ್ 25ರಿಂದ ಜುಲೈ 4ರವರೆಗೆ ಪೂರಕ ಪರೀಕ್ಷೆ ನಡೆಯಲಿದೆ. ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಮೇ 27.

ಫಲಿತಾಂಶಕ್ಕೆ ಇಲ್ಲಿಗೆ ಭೇಟಿ ನೀಡಿ
www.pue.kar.nic.in
www.karresults.nic.in
www.puc.kar.nic.in
www.knowyourresult.com
www.indiaresults.com
www.karnatakaeducation.net
http://results.arnatakaeducation.net
www.bangaloreeducation.net
www.examresults.net
www.results.amarujala.com
www.BangaloreEducation.com
www.resultsat.com
www.resultout.com
www.optraservice.com
www.schools9.com
www.collegeforyou.com
www.goresults.net
www.digied.com
www.ace-online.co.in
www.results.amarujala.com
ಎಸ್ಎಂಎಸ್ ಹೀಗೆ ಮಾಡಿ
5676750- Results KAR 12 space<Registration number>
56263- KAR12<space> <Registrationnumber>
ಕರೆ ಮಾಡಲು ಈ ಸಂಖ್ಯೆ ಬಳಸಿ
58888 / *588#

Write A Comment