ಕರ್ನಾಟಕ

ಅಪ್ರಾಪ್ತ ವಯಸ್ಸಿನ ಇಬ್ಬರು ಬಾಲಕಿಯರ ಅಪಹರಿಸಿ ಅತ್ಯಾಚಾರ

Pinterest LinkedIn Tumblr

Karthik

ಮೈಸೂರು: ಅಪ್ರಾಪ್ತ ವಯಸ್ಸಿನ ಇಬ್ಬರು ಬಾಲಕಿಯರನ್ನು ಅಪಹರಿಸಿ ಅತ್ಯಾಚಾರವೆಸಗಿದ ಆರೋಪದಡಿ ಯುವಕನೊಬ್ಬನನ್ನು ಬಂಧಿಸಿರುವ ಘಟನೆ ಮೈಸೂರು ವಿವಿ ಪುರಂ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೈಸೂರಿನ ಹಿನಕಲ್ ಬಾನಲ್ಲಿ ಕೆಲಸ ಮಾಡಿಕೊಂಡಿದ್ದ ಶ್ರೀರಂಗಪಟ್ಟಣ ತಾಲೂಕಿನ ಎಂ. ಶೆಟ್ಟಹಳ್ಳಿ ಗ್ರಾಮದ ಕಾರ್ತಿಕ್ (22) ಎಂಬುವವನೇ ಬಂಧಿತ ಆರೋಪಿ. ಬಂಧಿತ ಯುವಕ ಗೋಕುಲಂನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಹಾಗೂ 9 ನೇ ತರಗತಿ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಇಬ್ಬರು ಬಾಲಕಿಯರಿಗೆ ಪರಿಚಿತನಾಗಿದ್ದ ಕಾರ್ತಿಕ್ ಇಬ್ಬರನ್ನೂ ಪುಸಲಾಯಿಸಿ ಚಿತ್ರದುರ್ಗದ ತನ್ನ ಸಂಬಂಧಿಕರ ಮನೆಗೆ ಕರೆದೊಯ್ದು ಅಲ್ಲೇ ಇಬ್ಬರ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಸಂಬಂಧ ಇಬ್ಬರು ಬಾಲಕಿಯರು ನಾಪತ್ತೆಯಾಗುತ್ತಿದ್ದಂತೆ ಬಾಲಕಿಯರ ಪೋಷಕರು ವಿವಿ ಪುರಂ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡ ವಿವಿ ಪುರಂ ಠಾಣೆಯ ಪೊಲೀಸರು ಯುವತಿಯರ ಜತೆ ಪರಿಚಿತನಾಗಿದ್ದ ಕಾರ್ತಿಕ್ ಜಾಡು ಹಿಡಿದು ಹೋದಾಗ ಬಾಲಕಿಯವರನ್ನು ಆತನೇ ಅಪರಿಸಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಬಾಲಕಿಯರನ್ನು ವಿಚಾರಿಸಿದಾಗ ಆತನ ಚಿತ್ರದುರ್ಗದ ಸಂಬಂಧಿಕರ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿರುವ ಬಗ್ಗೆ ತಿಳಿಸಿದ್ದಾರೆ.

ಈ ಸಂಬಂಧ ಕಾರ್ತಿಕ್‌‌‌‌ನನ್ನು ಲೈಗಿಂಕ ದೌರ್ಜನ್ಯ ತಡೆ ಕಾಯಿದೆ (ಫೋಸ್ಕೊ), ಅತ್ಯಾಚಾರ, ಆರೋಪದಡಿಯಲ್ಲಿ ಬಂಧಿಸಿದ್ದು, ಬಾಲಕಿಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.

Write A Comment