ಅಂತರಾಷ್ಟ್ರೀಯ

ಫೇಸ್‌ಬುಕ್‌ನಲ್ಲಿ 2.15 ಲಕ್ಷ ಲೈಕ್‌ಗಳ ಗಡಿದಾಟಿದ ‘ಕನ್ನಡಿಗವರ್ಲ್ಡ್’ ನ್ಯೂಸ್ ವೆಬ್‌ಸೈಟ್: ಎರಡೇ ವರ್ಷದಲ್ಲಿ ಹೆಗ್ಗಳಿಕೆಗೆ ಪಾತ್ರ

Pinterest LinkedIn Tumblr

Untitled

ದುಬೈ, ಮೇ 18: ಕಳೆದ ಎರಡು ವರ್ಷಗಳ ಹಿಂದೆ ಆರಂಭಗೊಂಡ ‘ಕನ್ನಡಿಗವರ್ಲ್ಡ್’ ಕನ್ನಡ-ಇಂಗ್ಲಿಷ್ ನ್ಯೂಸ್ ವೆಬ್‌ಸೈಟ್ ಪೇಸ್‌ಬುಕ್‌ನಲ್ಲಿ 2,15,000 ಲೈಕ್‌ಗಳ ಗಡಿದಾಟುವ ಮೂಲಕ ಓದುಗರ ಹೆಗ್ಗಳಿಕೆಗೆ ಪಾತ್ರವಾಗಿದೆ.

ದಿನದ 24 ಗಂಟೆಗಳ ಕಾಲವು ಓದುಗರಿಗೆ ರಾಜಕೀಯ, ಸಾಮಾಜಿಕ, ಆರ್ಥಿಕ, ಕ್ರೀಡಾ, ಅಪರಾಧ, ದೇಶ-ವಿದೇಶಗಳ ಸುದ್ದಿಗಳು ಸೇರಿದಂತೆ ವಿವಿಧ ರೀತಿಯ ಮಾಹಿತಿಯನ್ನು ಓದುಗರಿಗೆ ನೀಡುತ್ತಾ ಬಂದಿರುವ ‘ಕನ್ನಡಿಗವರ್ಲ್ಡ್’, ಇದೀಗ 2.15 ಲಕ್ಷ ಓದುಗರ ಲೈಕ್‌ಗಳನ್ನು ಪಡೆಯುವ ಮೂಲಕ ಸಾಧನೆಯ ಗರಿಯನ್ನು ಮುಡಿಗೇರಿಸಿಕೊಂಡಿದೆ.

2013ರ ಮಾರ್ಚ್ 15ರಂದು ದುಬೈ ‘ಆ್ಯಕ್ಮೆ ವಿಷನ್’ ಅಡಿಯಲ್ಲಿ ಆರಂಭಗೊಂಡಿರುವ ‘ಕನ್ನಡಿಗವರ್ಲ್ಡ್’ ತಾಜಾ ಸುದ್ದಿಗಳಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುವ ಜೊತೆಗೆ ಕರ್ನಾಟಕ, ಕರಾವಳಿ ಭಾಗದ ಓದುಗರ ಅಭಿರುಚಿಗೆ ತಕ್ಕಂತೆ ಸುದ್ದಿ, ಮಾಹಿತಿಯ ಭಂಡಾರವನ್ನೇ ನೀಡುತ್ತಾ ಮುಂದೆ ಸಾಗುತ್ತಿದೆ.

2.15 ಲಕ್ಷದ ಲೈಕ್‌ಗಳನ್ನು ಪಡೆಯುವ ಮೂಲಕ ಸಾಧನೆಯ ಮೆಟ್ಟಿಲೇರುತ್ತಿರುವ ‘ಕನ್ನಡಿಗವರ್ಲ್ಡ್’, ಈ ಮಟ್ಟಕ್ಕೆ ಬೆಳೆದಿರಲು ಓದುಗರಾದ ನೀವೇ ಕಾರಣ. ಇದಕ್ಕಾಗಿ ಫೇಸ್‌ಬುಕ್ ಮಿತ್ರರಿಗೆ ‘ಕನ್ನಡಿಗವರ್ಲ್ಡ್’ ಬಳಗದ ಪರವಾಗಿ ಕೃತಜ್ಞತೆ ಅರ್ಪಿಸುತ್ತದೆ.

ಆರಂಭದ ದಿನಗಳಲ್ಲಿ ಅಂಬೆಗಾಲಿಡುತ್ತಾ ಸಾಗಿದ ‘ಕನ್ನಡಿಗವರ್ಲ್ಡ್’ ವೆಬ್‌ಸೈಟ್‌ನ ಪೇಸ್‌ಬುಕ್ ಪೇಜ್, ಕೆಲವೇ ಕೆಲವು ದಿನಗಳಲ್ಲಿ ಅದರ ಓದುಗರು, ಲೈಕ್‌ನ ಸಂಖ್ಯೆ ಆಶ್ಚರ್ಯಕರ ರೀತಿಯಲ್ಲಿ ಏರುತ್ತಲೇ ಸಾಗಿತು.

ಡಿ.ಕೆ.ರವಿಯವರ ನಿಗೂಢ ಸಾವಿನ ಕುರಿತು ‘ಕನ್ನಡಿಗವರ್ಲ್ಡ್’ನಲ್ಲಿ ಪ್ರಕಟಗೊಂಡ ಸುದ್ದಿಯಂತೂ 5 ಲಕ್ಷಕ್ಕೂ ಅಧಿಕ ಜನರು ಫೇಸ್‌ಬುಕ್‌ನಲ್ಲಿ ಲೈಕ್ ಓತ್ತುವ ಜೊತೆಗೆ, ಸಾವಿರಾರು ಮಂದಿ ಕಮೆಂಟ್(ಪ್ರತಿಕ್ರಿಯೆ)ಯನ್ನು ನೀಡಿದ್ದು, ಜೊತೆಗೆ ಸಾವಿರಾರು ಮಂದಿ ಓದುಗರು ಇದನ್ನು ಶೇರ್ ಕೂಡಾ ಮಾಡಿದ್ದಾರೆ. ಒಂದು ರೀತಿಯಲ್ಲಿ ಈ ಸುದ್ದಿ ದಾಖಲೆಯ ಪುಟವನ್ನೇ ಸೇರಿದೆ.

ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ, ಸಿನಿಮಾ ತಾರೆಯರ ಸುದ್ದಿ ಕೂಡಾ ಲಕ್ಷಾಂತರ ಮಂದಿ ವೀಕ್ಷಿಸಿದ್ದು, ನಿರೀಕ್ಷೆಗೂ ಮೀರಿ ಜನ ಲೈಕ್ ಮಾಡಿದ್ದಾರೆ.

ಮಂಗಳೂರು, ಉಡುಪಿ, ಕುಂದಾಪುರ, ಕಾರ್ಕಳ, ಬೆಂಗಳೂರು, ಮೈಸೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ನಡೆಯುವ ಸುದ್ದಿಗಳನ್ನು ಕ್ಷಣಮಾತ್ರದಲ್ಲಿ ಜನರಿಗೆ ತಲುಪಿಸುವ ಜೊತೆಗೆ, ಮಾಯಾನಗರಿ ಮುಂಬೈ, ದುಬೈ, ಕುವೈಟ್, ಬಹ್ರೈನ್, ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ನಡೆಯುವ ಕನ್ನಡಿಗರ ಸಭೆ-ಸಮಾರಂಭಗಳಿಗೆ ವೇದಿಕೆಯನ್ನು ನೀಡುತ್ತಾ ಬಂದಿರುವ ‘ಕನ್ನಡಿಗವರ್ಲ್ಡ್’, ತನ್ನದೇ ಆದ ಲಕ್ಷಾಂತರ ಮಂದಿ ಓದುಗ ಬಳಗವನ್ನು ಸೃಷ್ಟಿಸಿದೆ.

ಮಾನವೀಯತೆಯೆಡೆಗೆ ಬೆಳಕು ಚೆಲ್ಲುವ, ಸಾಧನೆ ಮಾಡಿರುವ, ಜನರ ಮೂಲಭೂತ ಸೌಕರ್ಯಗಳನ್ನು ಒದಗಿಸುವ, ಅನ್ಯಾಯದ ವಿರುದ್ಧ ಹೋರಾಟದ ಹಾದಿ ತುಳಿದ ಜನರ ಪರವಾಗಿ ನಿಂತು ‘ಕನ್ನಡಿಗವರ್ಲ್ಡ್’ ಆರಂಭದಿಂದಲೂ ಸುದ್ದಿಗಳನ್ನು ಪ್ರಕಟಿಸುತ್ತಿದ್ದು, ಜನರ ಧ್ವನಿಯಾಗಿ ಮೂಡಿಬರುತ್ತಿದೆ.

Write A Comment