ಕನ್ನಡ ವಾರ್ತೆಗಳು

ಕಂಕನಾಡಿಯ ಕಾರ್ಮೆಲ್ ಭಗಿನಿಯರ ಮಠದ ಸಂಸ್ಥಾಪಕಿ ಪುನೀತೆ ಮೇರಿ ಬಾವೊರ್ಡಿಗೆ ಸಂತ ಪದವಿ: ಕಾರ್ಮೆಲ್ ಮಠದಲ್ಲಿ ಬಲಿಪೂಜೆಯೊಂದಿಗೆ ಸಂಭ್ರಮಾಚರಣೆ

Pinterest LinkedIn Tumblr

Carmel_Punit_Mery_1

ಮಂಗಳೂರು, ಮೇ 18: ಕಂಕನಾಡಿಯ ಕಾರ್ಮೆಲ್ ಭಗಿನಿಯರ ಮಠದ ಸಂಸ್ಥಾಪಕಿ ಪುನೀತೆ ಮೇರಿ ಬಾವೊರ್ಡಿಯವರನ್ನು ಸಂತರೆಂದು ಜಗದ್ಗುರು ಪೋಪ್ ಫ್ರಾನ್ಸಿಸ್ ರೋಮ್‌ನ ವ್ಯಾಟಿಕನ್ ನಗರದಲ್ಲಿ ಘೋಷಿಸಿರುವ ಹಿನ್ನೆಲೆಯಲ್ಲಿ ರವಿವಾರ  ಕಂಕನಾಡಿ ಕಾರ್ಮೆಲ್ ಭಗಿನಿಯರ ಮಠದಲ್ಲಿ ಬಲಿಪೂಜೆಯೊಂದಿಗೆ ಸಂಭ್ರಮಾಚರಣೆ ನಡೆಯಿತು.

ಗುಲ್ಬರ್ಗ ಕ್ರೈಸ್ತ ಧರ್ಮಪ್ರಾಂತದ ಬಿಷಪ್ ಅತಿ. ವಂ. ರೆ.ಫಾ. ರಾಬರ್ಟ್ ಮಿರಾಂಡ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಮಾರಂಭ ಜರಗಿತು. ಈ ವೇಳೆ ಮಾತನಾಡಿದ ಅವರು, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಸಂತ ಪದವಿಗೇರಿದ ಪುನೀತೆ ಮೇರಿ ಬಾವೊರ್ಡಿ ಅಭಿನಂದನಾರ್ಹರು. ಸಮಾಜದ ಬಡವರ, ದೀನ-ದಲಿತರ ಸೇವೆಯೊಂದಿಗೆ ಧಾರ್ಮಿಕ ಸೇವೆ ಯನ್ನು ಬಲಪಡಿಸಲು ಮತ್ತು ಶ್ರೀಮಂತಗೊಳಿಸಲು ಪುನೀತೆ ಮೇರಿ ಬಾವೊರ್ಡಿ ನಮಗೆ ಆದರ್ಶ ಪ್ರಾಯರಾಗಿದ್ದಾರೆ ಎಂದರು.

Carmel_Punit_Mery_2 Carmel_Punit_Mery_3 Carmel_Punit_Mery_4 Carmel_Punit_Mery_5 Carmel_Punit_Mery_6 Carmel_Punit_Mery_7 Carmel_Punit_Mery_8 Carmel_Punit_Mery_9 Carmel_Punit_Mery_10 Carmel_Punit_Mery_11

ಈ ಸಂದರ್ಭದಲ್ಲಿ ವಂ.ರೆ.ಫಾ.ಪಿಯೂಸ್ ಜೇಮ್ಸ್ ಡಿಸೋಜ, ರೆ.ಫಾ.ಜೋ ತಾವ್ರೊ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ರೆ.ಫಾ. ರಿಚರ್ಡ್ ಕುವೆಲ್ಲೊ, ಶಾಸಕ ಜೆ.ಆರ್.ಲೋಬೊ, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಮೇಯರ್ ಜೆಸಿಂತಾ ವಿಜಯ ಆಲ್ಫ್ರೆಡ್, ಫೋರ್ ವಿಂಡ್ಸ್ ಕಮ್ಯುನಿಕೇಶನ್‌ನ ನಿರ್ದೇಶಕ ಎಲಿಯಾಸ್ ಫೆರ್ನಾಂಡಿಸ್, ಪ್ರಚಾರ ಸಂಚಾಲಕ ಸ್ಟಾನ್ಲಿ ಬಂಟ್ವಾಳ ಮೊದ ಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರೆ.ಫಾ.ರಿಚರ್ಡ್ ಕುವೆಲ್ಲೊ, ಎಲಿಯಾಸ್ ಫೆರ್ನಾಂಡಿಸ್, ಸ್ಟಾನ್ಲಿ ಬಂಟ್ವಾಳ, ಭಗಿನಿಯರಾದ ಶಾಲಿನಿ, ಒಲಿವಿಯಾ, ಲಿಜೆರಿಯಾ ಮೊದಲಾದವರನ್ನು ಸನ್ಮಾನಿಸಲಾಯಿತು.

ಇದಕ್ಕೂ ಮುನ್ನ ಮಂಗಳೂರು ಬಿಷಪ್ ಅತಿ.ವಂ.ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ನೇತೃತ್ವದಲ್ಲಿ ಸಂಭ್ರಮದ ಬಲಿಪೂಜೆ ನಡೆಯಿತು. ಈ ಸಂದರ್ಭದಲ್ಲಿ ಧರ್ಮಗುರುಗಳು, ಭಗನಿಯರು ಹಾಗೂ ಭಕ್ತರು ಪಾಲ್ಗೊಂಡಿದ್ದರು.

ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ದ.ಕ.ಜಿ.ಪಂ. ಸಿಇಒ ಶ್ರೀವಿದ್ಯಾ, ಪಿಲಿಕುಳ ವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ.ಕೆ.ವಿ.ರಾವ್, ಪಿಲಿಕುಳ ವನ್ಯಧಾಮದ ನಿರ್ದೇಶಕ ಜಯಪ್ರಕಾಶ್ ಭಂಡಾರಿ, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಎಂ.ಡಿ.ಪ್ರಸಾದ್, ಸಹಾಯಕ ನಿರ್ದೇಶಕ ಗಣಪತಿ ಭಟ್, ಪಿಲಿಕುಳ ಸೊಸೈಟಿ ಸದಸ್ಯ ಎನ್.ಜಿ.ಮೋಹನ್, ನಿಗಮದ ಆಡಳಿತ ನಿರ್ದೇಶಕ ವಿ.ಕೆ.ಶೆಟ್ಟಿ, ಸಹಾಯಕ ವ್ಯವಸ್ಥಾಪಕ ಮಲ್ಲೇಶ್, ಉದ್ಯಮಿ ಸದಾನಂದ ಶೆಟ್ಟಿ ಪಾಲ್ಗೊಂಡಿದ್ದರು.

Write A Comment