ಮಂಗಳೂರು,ಫೆ.25 : ದಕ್ಷಿಣ ಕನ್ನಡ ಬಾಡಿ ಬಿಲ್ಡರ್ಸ್ ಅಸೋಸಿಯೇಶನ್ ಮತ್ತು ಶಕ್ತಿ ಫ್ರೆಂಡ್ಸ್ ಕೆಂಜಾರು ಇವರ ಆಶ್ರಯದಲ್ಲಿ ಬಜಪೆ ಕೇಂದ್ರ ಮೈದಾನದಲ್ಲಿ ನಡೆದ ದ.ಕ ಜಿಲ್ಲಾ ದೇಹದಾಢ್ಯ ಸ್ವರ್ಧೆಯಲ್ಲಿ ಬಾಡಿ ಟೋನ್ ಜೀಮ್ ನ ರಮೇಶ್ ಆರ್.ಕೆ. ಮಿಸ್ಟರ್ ದಕ್ಷಿಣ ಕನ್ನಡ-2015 ಪ್ರಶಸ್ತಿಯನ್ನು ಪಡೆದಿದ್ದಾರೆ.
ವಿಕಲಚೇತನರ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಮಿಸ್ಟರ್ ದಕ್ಷಿಣ ಕನ್ನಡ-2015 ಪ್ರಶಸ್ತಿಯನ್ನು ಫವರ್ ಫಿಟ್ ನೆಸ್ ಜಿಮ್ ನ ಜಗದೀಶ ಪೂಜಾರಿ ಪಡೆದರೆ ಹಿರಿಯ ವಿಭಾಗದಲ್ಲಿ ಮಿಸ್ಟರ್ ದಕ್ಷಿಣ ಕನ್ನಡ-2015 ಹಾಗೂ ಬಲಿಷ್ಟ ಸ್ನಾಯು ಪ್ರಶಸ್ತಿಗಳನ್ನು ಸುರತ್ಕಲ್ ಜಿಮ್ ನ ಕುಮಾರ್ ಪುತ್ರನ್ ಪಡೆದಿದ್ದಾರೆ. ಇನ್ನುಳಿದಂತೆ ಟೀಮ್ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಬಾಡಿ ಟೋನ್ ತಂಡ ಪಡೆದಿದ್ದು, ರನ್ನರ್ಸ್ ಆಫ್ ಪ್ರಶಸ್ತಿಯನ್ನು ಪಾಂಡೇಶ್ವರದ ಬಾಡಿ ಟೋನ್ ತಂಡ ಪಡೆದು ಕೊಂಡಿತು.
ವಿಜೇತರ ವಿವರ ಹೀಗಿದೆ:
ಮಾಸ್ಟರ್ಸ್ ವಿಭಾಗದ 40 ಕೆ.ಜಿ ವಿಭಾಗದಲ್ಲಿ ಕುಮಾರ್ ಪುತ್ರನ್ ಪ್ರಥಮ, ಶಾಮ್ ರಾಯ್ ದ್ವೀತಿಯ, ಎಮ್. ನಾಗರಾಜ್ ತೃತಿಯ ಹಾಗೂ ಜಯಾನಂದ್ ಅಂಚನ್ ನಾಲ್ಕನೇ ಸ್ಥಾನ ಪಡೆದಿದ್ದಾರೆ. 50 ಕೆ.ಜಿ ವಿಭಾಗದಲ್ಲಿ ನೋಬಾರ್ಟ್ ಲೋಬೊ ಪ್ರಥಮ, ಜಯರಾಮ ಸಿ.ಎ ದ್ವೀತಿಯ, 60 ಕೆ.ಜಿ ವಿಭಾಗದಲ್ಲಿ ರವಿ ಕಂಚನ್ ಪ್ರಥಮ ಪ್ರಶಸ್ತಿ ಪಡೆದಿದ್ದಾರೆ.
55 ಕೆಜಿ ವಿಭಾಗದಲ್ಲಿ ಮೊಹಮ್ಮದ್ ಇಸ್ಮಾಯಿಲ್ ಪ್ರಥಮ, ಮಹೇಶ್ ಕಟೀಲು ದ್ವೀತಿಯ, ವಿನಯ್ ರಾಜ್ ಮಡೀವಾಳ್ ತೃತೀಯ ಹಾಗೂ ಹರೀಂದ್ರ ಬಿ. ನಾಲ್ಕನೇ ಸ್ಥಾನ ಪಡೆದಿದ್ದಾರೆ. 60 ಕೆಜಿ ವಿಭಾಗದಲ್ಲಿ ಪ್ರೀತೇಶ್ ಕೋಟ್ಯಾನ್ ಪ್ರಥಮ, ಜಗದೀಶ್ ದ್ವೀತಿಯ, ಜಗದೀಶ್ ತೃತೀಯ, ಇಪ್ರೀಯನ್ ಪೌಲ್ ನಾಲ್ಕನೇಯ ಹಾಗೂ ದಿಪಾಡೆ ಬಾಳಿಗ ಐದನೇ ಸ್ಥಾನ ಪಡೆದಿದ್ದಾರೆ. 65 ಕೆಜಿ ವಿಭಾಗದಲ್ಲಿ ರಮೇಶ್ ಕೆಆರ್ ಪ್ರಥಮ, ನೋಬಾರ್ಟ್ ಲೋಬೊ ದ್ವೀತಿಯ, ಪ್ರವೀಣ್ ಪೀಂಟೊ ತೃತೀಯ, ಶ್ಯಾಮ್ ರಾಯ್ ನಾಲ್ಕನೇಯ ಹಾಗೂ ಪ್ರತೀಕ್ ಐದನೇ ಸ್ಥಾನ ಪಡೆದಿದ್ದಾರೆ.
70 ಕೆಜಿ ವಿಭಾಗದಲ್ಲಿ ಕುಮಾರ್ ಪುತ್ರನ್ ಪ್ರಥಮ, ಲತೀಶ್ ಕೊಟ್ಯಾನ್ ದ್ವೀತಿಯ, ವಿಜೇಸ್ ತೃತೀಯ, ಪ್ರದೀಪ್ ನಾಯಕ್ ನಾಲ್ಕನೇಯ ಹಾಗೂ ಜಯಾನಂದ್ ಐದನೇಯ ಸ್ಥಾನ ಪಡೆದಿದ್ದಾರೆ. 75 ಕೆಜಿ ವಿಭಾಗದಲ್ಲಿ ಆಶ್ವಿನ್ ಪ್ರಥಮ, ರಕ್ಷಿತ್ ದ್ವೀತಿಯ, ರವಿ ಕುಮಾರ್ ತೃತೀಯ ಹಾಗೂ ಚೇತನ್ ನಾಲ್ಕನೇಯ ಸ್ಥಾನ ಪಡೆದಿದ್ದಾರೆ. 80 ಕೆಜಿ ವಿಭಾಗದಲ್ಲಿ ಶಮಂತ್ ಪ್ರಥಮ, ಮೈಕಲ್ ಜೊನ್ಸನ್ ದ್ವೀತಿಯ, ನಿಹಾಲ್ ತೃತೀಯ ಹಾಗೂ ಜಯಾನಂದ್ ನಾಲ್ಕನೇಯ ಸ್ಥಾನ ಪಡೆದಿದ್ದಾರೆ. 80 ಕೆಜಿ ಮೇಲಿನ ವಿಭಾಗದಲ್ಲಿ ಸಫ್ವಾನ್ ಪ್ರಥಮ, ಸುಹಾನ್ ಖಾನ್ ದ್ವೀತಿಯ, ಉಮಾರ್ ಫಾರೂಕ್ ತೃತೀಯ ಹಾಗೂ ವಿರಾಜ್ ನಾಲ್ಕನೇಯ ಸ್ಥಾನ ಪಡೆದಿದ್ದಾರೆ.
ಸ್ಪರ್ಧೆಯಲ್ಲಿ ವಿಜೇತರಿಗೆ ರಾಜ್ಯ ಬಾಡಿ ಬಿಲ್ಡಿರ್ಸ್ ಅಸೋಸಿಯೇಶನ್ ಅಧ್ಯಕ್ಷ ರವೀಂದ್ರನಾಥ ರೈ, ಹಾಗೂ ಭಾರತೀಯ ಬಾಡಿ ಬಿಲ್ಡರ್ಸ್ ಫೆಡರೇಶನ್ ನ ಮಾಜಿ ಉಪಾಧ್ಯಕ್ಷ ನಾರಾಯಣ ಶೆಣೈ ಅವರು ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಜಿ.ಪಂ. ಮಾಜಿ ಉಪಾಧ್ಯಕ್ಷ ರಿತೇಶ್ ಶೆಟ್ಟಿ, ನಿವೃತ್ತ ದೈಹಿಕ ಶಿಕ್ಷಕ ಸೇಸಪ್ಪ ರೈ, ಉದ್ಯಮಿ ಕೃಷ್ಣ ಕಲ್ಲೋಡಿ, ಶಕ್ತಿ ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಶೆಟ್ಟಿ ಚಿಕ್ಕ ಪರಾರಿ, ಮಿಸ್ಟರ್ ಕರ್ನಾಟಕ 2014 ಹಾಗೂ ಮಿಸ್ಟರ್ ದಕ್ಷಿಣ ಕನ್ನಡ 2009, 2014ರ ಪ್ರಶಸ್ತಿ ಪಡೆದ ಶಮಂತ್ ಶೆಟ್ಟಿ, ತಾ.ಪಂ. ಸದಸ್ಯ ಜೋಕಿಂ ಡಿಕೋಸ್ತಾ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.