ಕರಾವಳಿ

ರಾಮಾಂಜನೇಯ ವ್ಯಾಯಾಮ ಶಾಲೆಯ ವಿಶೇಷ ಸಮಾರಂಭ; ಉಟ್ಟೂರ ಸನ್ಮಾನದಿಂದ ಸಂತೃಪ್ತಿ – ಪತ್ರಕರ್ತ ಬೊಕ್ಕಪಟ್ನ ದಿನೇಶ್ ಕುಲಾಲ್

Pinterest LinkedIn Tumblr

10993500_811364742278885_3666966174597060542_n

ಮಂಗಳೂರು : ಕಳೆದ ಸುಮಾರು 45ವರ್ಷಗಳಿಂದ ಪ್ರಸಿದ್ದಿಯಾಗಿರುವ ಬೋಳೂರು ಬೊಕ್ಕಪಟ್ನ ರಾಮಾಂಜನೇಯ ತಾಲೀಮು ಮತ್ತು ವ್ಯಾಯಾಮ ಶಾಲೆಯಲ್ಲಿ ಫೆ. 12ರಂದು ಜರಗಿದ ಸಮಾರಂಭದಲ್ಲಿ ಮುಂಬಯಿಯ ಪತ್ರಕರ್ತ, ಸಂಘಟಕ ಬೊಕ್ಕಪಟ್ನ ದಿನೇಶ್ ಕುಲಾಲ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿದ ದಿನೇಶ್ ಕುಲಾಲ್ ಮಾತನಾಡುತ್ತಾ ವ್ಯಾಯಾಮ ಶಾಲೆ ದೈಹಿಕವಾಗಿ ಪ್ರತಿಯೋರ್ವನನ್ನು ಆರೋಗ್ಯವಂತನಾಗಿ ಮಾಡುತ್ತದೆ. ಸಮಾಜಿಕ ಚಿಂತನೆಯಲ್ಲಿರುವ ಸಾಲೆಯ ಸದಸ್ಯರನ್ನು ಗೌರವಿಸುವ ಪರಿಪಾಟ ನಿರಂತರ ನಡೆಯಲಿ. ಉಟ್ಟೂರ ಈ ಸನ್ಮಾನ ಆತ್ಮ ಸಂತೃಪ್ತಿ ತಂದಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ವ್ಯಾಯಾಮ ಶಾಲೆಯ ಗೌರವ ಅಧ್ಯಕ್ಷ ಮೋಹನ್ ಬರ್ಕೆ ಅವರು ಮಾತನಾಡುತ್ತಾ ದೇಶಕ್ಕೆ ಹಲವಾರು ದೇಹಧಾರ್ಢ್ಯ ಪಟುಗಳನ್ನು ಶಾಲೆ ನೀಡಿದೆ. ವ್ಯಾಯಾಮ ಶಾಲೆಯ ಪ್ರಾರಂಭದಲ್ಲೂ ಸಕ್ರಿಯವಾಗಿದ್ದ ಸದಸ್ಯರನ್ನು ಸದಾ ಗುರುತಿಸಿಕೊಂಡಿದೆ ಎಂದರು.

Vyaama shale

ಅತಿಥಿಯಾಗಿ ಪಾಲ್ಗೊಂಡಿದ್ದ ಕುಲಾಲ ಪ್ರತಿಷ್ಠಾನ ಮಂಗಳೂರು ಇದರ ಆಡಳಿತ ವಿಶ್ವಸ್ಥ ಬಿ. ಸುರೇಶ್ ಕುಲಾಲ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಮಾರಂಭದಲ್ಲಿ ವ್ಯಾಯಾಮ ಶಾಲೆಯ ಸ್ಥಾಪಕ, ದೈಹಿಕ ಶಿಕ್ಷಕ ಬೊಕ್ಕಪಟ್ನ ಮಾಸ್ಟರ್ ಸೀತರಾಮ ಕುಲಾಲ್, ಮಾಸ್ಟರ್ ಗೋಪಾಲ್ ಬರ್ಕೆ, ದೆಹದಾರ್ಡ್ಯ ರಾಮಕೃಷ್ಣ ಕುದ್ರೋಳಿ ವ್ಯಾಯಾಮ ಶಾಲೆಯ ಅಧ್ಯಕ್ಷ ಬಿ. ಪ್ರೇಮಾನಂದ ಕುಲಾಲ್, ಗೌರವ ಕಾರ್ಯದರ್ಶಿ ಬಿ. ನಾಗೇಶ್ ಕುಲಾಲ್, ಕೋಶಾಧಿಕಾರಿ ಭಾಸ್ಕರ್ ಅಮೀನ್ ಕುದ್ರೋಳಿ ಮಾಜಿ ಅಧ್ಯಕ್ಷ ತಾರಾನಾಥ ಪುತ್ರನ್, ಸಲಹೆಗಾರ ರಾಮಚಂದ್ರ ಸಾಲ್ಯಾನ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಬಿ. ನಾಗೇಶ್ ಕುಲಾಲ್ ನಿರೂಪಿಸಿದರೆ ಪ್ರಾಸ್ತಾವಿಕ ಮಾತುಗಳನ್ನು ಅಧ್ಯಕ್ಷ ಬಿ. ಪ್ರೇಮಾನಂದ ನುಡಿದರು. ಕೊನೆಯಲ್ಲಿ ರಾಮಚಂದ್ರ ಸಾಲ್ಯಾನ್ ಅಬಾರ ಮನ್ನಿಸಿದರು.

Write A Comment