ಗಲ್ಫ್

ಕೆಸಿಎಫ಼್ ಯುಎಇ ತಾಜುಲ್ ಉಲಮಾ ಪ್ರಶಸ್ತಿಗೆ ಹಿರಿಯ ವಿದ್ವಾಂಸ ಮಾಣಿ ಉಸ್ತಾದ್ ಆಯ್ಕೆ

Pinterest LinkedIn Tumblr

111

ಅಬುಧಾಬಿ:ಅನಿವಾಸಿ ಕನ್ನಡಿಗ ಮುಸಲ್ಮಾನರ ಅಭಿಮಾನದ ಸಾಂಸ್ಕ್ರತಿಕ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌ೦ಡೇಶನ್ (ಕೆಸಿಎಫ಼್)ಯುಎಇ ರಾಷ್ಟ್ರೀಯ ಸಮಿತಿಯು ತಾಜುಲ್ ಉಲಮಾ ರವರ ಸವಿ ನೆನಪಿನ ಗೌರವಾರ್ಥ ನೀಡಲು ತೀರ್ಮಾನಿಸಿದ “ತಾಜುಲ್ ಉಲಮಾ ಪ್ರಶಸ್ತಿ “ಗೆ ಕರ್ನಾಟಕದ ಹಿರಿಯ ವಿದ್ವಾ೦ಸ ಹಾಗು ದಾರುಲ್ ಇರ್ಶಾದ್ ವಿದ್ಯಾ ಸಮುಚ್ಚಯದ ಸಾರಥಿ ಅಲ್ ಹಾಜ್ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ (ಮಾಣಿ ಉಸ್ತಾದ್ ) ಆಯ್ಕೆಯಾಗಿದ್ದಾರೆ.

ಕಳೆದ ಎರಡು ವರೆ ದಶಕಗಳ ಹಿಂದೆ ಕರ್ನಾಟಕ ರಾಜ್ಯದಲ್ಲಿ ಪ್ರಥಮವಾಗಿ ಧಾರ್ಮಿಕ,ಲೌಖಿಕ ಸಮನ್ವಯ ಶಿಕ್ಷಣಾ ಸಮುಚ್ಚಯ ವನ್ನು ಸ್ಥಾಪಿಸಿ ಸಾರ್ಥಕವಾಗಿ ಕಟ್ಟಿ ಬೆಳೆಸಿದ ವಿದ್ವಾಂಸ ನಾಯಕ ಹಾಗು ಕರ್ನಾಟಕ ಸಾಂಘಿಕ ರಂಗಗಳಲ್ಲಿ ಅವಿಶ್ರಾಂತ ಸೇವೆ ಸಲ್ಲಿಸುತ್ತಾ ಸಮಾಜದಲ್ಲಿ ಕಡೆಗನಿಸಲ್ಪಡುತ್ತಿದ್ದ ನಿರಾಶ್ರಿತರಾದ ಅನೇಕ ಮಕ್ಕಳಿಗೆ ಉಚಿತವಾದ ಊಟ,ವಸ್ತ್ರ,ವಸತಿ ಶಿಕ್ಷಣವನ್ನು ನೀಡಿ ಪ್ರತಿಭಾವಂತರಾಗಿ ಸಮಾಜ ಮತ್ತು ಧರ್ಮ ಸೇವೆ ಗೈಯ್ಯುವ ಸಲುವಾಗಿ ನಾಡಿಗೆ ಸಮರ್ಪಿಸಿ ಸಮಾಜ ಭಾಂದವರ ಪ್ರೀತಿ ಗಳಿಸಿರುವ ಮಾಣಿ ಉಸ್ತಾದರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೂ ಹಲವಾರು ಅಮೂಲ್ಯವಾದ ಕ್ರತಿ ಗಳನ್ನೂ ರಚಿಸಿದ್ದಾರೆ.

ಈ ಎಲ್ಲ ಸೇವೆಗಳನ್ನು ಪರಿಗಣಿಸಿ”ತಾಜುಲ್ ಉಲಮಾ ಪ್ರಶಸ್ತಿ “ಗೆ ಉಸ್ತಾದರನ್ನು ಆಯ್ಕೆ ಮಾಡಲಾಗಿದೆ .ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಬುಡೋಳಿ ಎಂಬಲ್ಲಿ ಎಲ್ಲ ಜನರ ಗೌರವಾದರಗಳಿಗೆ ಪಾತ್ರರಾದ ಅಬ್ದುಲ್ಲ -ಆಸಿಯಮ್ಮ ದಂಪತಿಗಳಿಗೆ ೧೯೪೫ ರಲ್ಲಿ ಜನಿಸಿದ ಮಾಣಿ ಉಸ್ತಾದರು ಪ್ರಾಥಮಿಕ ಶಿಕ್ಷಣದ ಬಳಿಕ ಮರ್ಹೂಂ ತಾಜುಲ್ ಉಲಮಾ ಸಹಿತ ಉನ್ನತ ವಿದ್ವಾಂಸರಿಂದ ದರ್ಸ್ (ಧಾರ್ಮಿಕ )ಶಿಕ್ಷಣವನ್ನು ಪಡೆದು ತಾಜುಲ್ ಉಲಮಾ ರವರ ಆದೇಶದಂತೆ ಪ್ರಥಮವಾಗಿ ಮಂಗಳೂರಿನ ಸೂರಿಂಜೆ ಯಲ್ಲಿ ಮುದರ್ರಿಸ್ ಆಗಿ ಸೇವೆ ಸಲ್ಲಿಸಿ ನಂತರ ದಕ್ಷಿಣ ಕನ್ನಡ ಮತ್ತು ಉತ್ತರ ಕೇರಳದ ವಿವಿದ ಕಡೆ ದೀನೀ ಸೇವೆಗೈದ ಉಸ್ತಾದರು ೧೯೯೦ ರ ಮಾರ್ಚ್ ತಿಂಗಳ ಹನ್ನೊಂದರಂದು ತನ್ನ ಸ್ವ ಗ್ರಹದಲ್ಲಿ ನಡೆಯುತ್ತಿದ್ದ ಆಧ್ಯಾತ್ಮಿಕ ಸಮಾರ೦ಭವಾದ ಜಲಾಲಿಯ ರಾತೀಬ್ ಮಜ್ಲಿಸ್ ನಲ್ಲಿ ದಾರುಲ್ ಇರ್ಶಾದ್ ಗೆ ರೂಪು ನೀಡಿದರು.

ನಂತರ ಅದೊಂದು ಧಾರ್ಮಿಕ-ಲೌಖಿಕ ಸಮನ್ವಯ ಶಿಕ್ಷಣ ಸಮುಚ್ಚಯವಾಗಿ ಬೆಳೆದು ಹೆಮ್ಮರವಾಗಿ ಜೂನಿಯರ್ ಶರೀಅತ್ ಕಾಲೇಜು,ಬ್ರಹತ್ ಇರ್ಶಾದಿಯ್ಯ ಲೈಬ್ರರಿ ,ಕೆಜಿಎನ್ ದಅವಾ ಕಾಲೇಜು ,ಹಿಫ್ಳುಲ್ ಖುರ್ಆನ್ ಕಾಲೇಜು, ಕಂಪ್ಯೂಟರ್ ಸೆಂಟರ್ ,ನಿರ್ಗತಿಕ ಮಂದಿರ ,ಕೆಜಿಎನ್ ಪಿಯು ಕಾಲೇಜು ,ಕೆಜಿಎನ್ ಬಾಲಕರ ಪ್ರೌಡ ಶಾಲೆ ,ಬದ್ರೀಯ ಜುಮ್ಮಾ ಮಸ್ಜಿದ್ ಮುಂತಾದ ಹತ್ತು ಹಲವು ವ್ಯವಿದ್ಯಮಯ ಧಾರ್ಮಿಕ,ಶೈಕ್ಷಣಿಕ ಕೇಂದ್ರವಾಗಿ ಧಾರ್ಮಿಕ ಆರಾಧನಾಳಯಗಳಾಗಿ ಕಾರ್ಯಾಚರಿಸುತ್ತಾ ಅಬಿವ್ರದ್ದಿಯತ್ತ ಪಯಣಿಸ ತೊಡಗಿ ಇದೀಗ ಅದರ ಬೆಳ್ಳಿ ಹಬ್ಬದ ಸಡಗರ ಸಂಭ್ರಮದಲ್ಲಿ ನಾಡಿನೆಲ್ಲೆಡೆ ಹಾಗು ವಿದೇಶದಲ್ಲೂ ಪ್ರಚಾರದ ಅಲೆ ಗಳಿಂದ ಸಂಭ್ರಮಿಸುತ್ತಿದೆ.

ಈ ಸುಸಂದರ್ಭದಲ್ಲಿ ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿಯು ನೀಡ ಬಯಸಿದ”ತಾಜುಲ್ ಉಲಮಾ ಪ್ರಶಸ್ತಿ”ಅತ್ಯಂತ ಪ್ರಸ್ತುತವೆನಿಸುತ್ತಿದೆ. ಅನಿವಾಸಿ ಕನ್ನಡಿಗ ಮುಸಲ್ಮಾನರ ಅಭಿಮಾನದ ಸಂಘಟನೆಯಾದ ಕೆಸಿಎಫ್ ಯುಎಇ ಈ ಮೊದಲು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಕರ್ನಾಟಕ ಸುನ್ನೀ ಸಂಘಟನೆಗಳ ಬುದ್ದಿ ಕೇಂದ್ರವೆಂದೇ ಚಿರಪರಿಚಿತರಾದ ಲೇಖಕ ಎಸ್ ಪಿ ಹಂಝ ಸಖಾಫಿ ಬಂಟ್ವಾಳ ರವರಿಗೆ ಶೈಖ್ ಝಾಇದ್ ಸಾಹಿತ್ಯ ಪ್ರಶಸ್ತಿ ನೀಡಿ ಪುರಷ್ಕರಿಸಿದೆ. ಎಂದು ಕರ್ನಾಟಕ ಕಲ್ಚರಲ್ ಫೌ೦ಡೇಶನ್ ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಶೈಖ್ ಬಾವ ಹಾಜಿ ಮಂಗಳೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Write A Comment