ಕರಾವಳಿ

ಹೊರಗುತ್ತಿಗೆ ರದ್ದುಗೊಳಿಸಿ ಪೌರ ಕಾರ್ಮಿಕರ ಹುದ್ದೆ ಖಾಯಂಗೊಳಿಸುವಂತೆ ಸರಕಾರಕ್ಕೆ ಶಿಫಾರಸು: ಶಿವಣ್ಣ

Pinterest LinkedIn Tumblr

shivanna_meet_photo_1

ಮಂಗಳೂರು, ಡಿ.5 : ಪೌರ ಕಾರ್ಮಿಕ ವ್ಯವಸ್ಥೆಯಲ್ಲಿ ಹೊರಗುತ್ತಿಗೆ ರದ್ದುಗೊಳಿಸಿ ಹುದ್ದೆ ಖಾಯಂಗೊಳಿಸುವಂತೆ ಸರಕಾರಕ್ಕೆ ಶಿಫಾರಸು  ಮಾಡಲಾಗಿದೆ ಎಂದು ರಾಷ್ಟ್ರೀಯ ಸಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ತಿಳಿಸಿದ್ದಾರೆ.

shivanna_meet_photo_2

ಮಂಗಳೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಗುರುವಾರ ನಡೆದ ಪಾಲಿಕೆ ಮಟ್ಟದ ಅಧಿಕಾರಿಗಳ, ಜನಪ್ರತಿನಿಧಿಗಳನ್ನು ಒಳಗೊಂಡಂತೆ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತಿದ್ದರು.ರಾಜ್ಯದಲ್ಲಿ ಸುಮಾರು 4 ಸಾವಿರ ಪೌರ ಕಾರ್ಮಿಕರ ಹುದ್ದೆಗಳ ಭರ್ತಿಗೆ ಶಿಫಾರಸು  ಮಾಡಲಾಗಿದೆ. ಹೊರ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ವರಿಗೆ ಪ್ರಥಮ ಆದ್ಯತೆ ನೀಡಲು ಕೋರಲಾಗಿದೆ ಎಂದು ಶಿವಣ್ಣ ತಿಳಿಸಿದರು.

ಪೌರ ಕಾರ್ಮಿಕರಿಗೆ ಸುರಕ್ಷಾ ಕಿಟ್: ಪೌರ ಕಾರ್ಮಿಕರಿಗೆ ಕಡ್ಡಾಯವಾಗಿ ಗಂಬೂಟ್, ಹ್ಯಾಂಡ್ ಗ್ಲೌಸ್, ಸಾಬೂನು, ಔಷಧೀಯ ಮಾಸ್ಕ್ ಸಹಿತ ಸುರಕ್ಷಾ ಕಿಟ್ ನೀಡಬೇಕು ಎಂದು ಸೂಚಿಸಿದ ಶಿವಣ್ಣ, ಪೌರ ಕಾರ್ಮಿಕರಿಗೆ ಮನೆ, 40 ಸಾವಿರ ರೂ.ಧನ ಸಹಾಯ ಸಹಿತ ಸ್ವ ಉದ್ಯೋಗಕ್ಕೆ ಸಾಲ ಸೌಲಭ್ಯ ನೀಡುವ ವ್ಯವಸ್ಥೆ ಕಲ್ಪಿಸಬೇಕು. ಅಲ್ಲದೆ ಪ್ರತಿ 3 ಅಥವಾ 6 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ನಡೆಸಬೇಕು ಎಂದರು.10 ಲಕ್ಷ ರೂ. ಪರಿಹಾರ ಪೌರ ಕಾರ್ಮಿಕರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದರೆ ಸಂಪೂರ್ಣವೆಚ್ಚವನ್ನು ಸಂಸ್ಥೆಗಳೇ ಭರಿಸುವಂತಾಗಬೇಕು ಎಂದು ಶಿವಣ್ಣ ತಿಳಿಸಿದರು ಮ್ಯಾನುವಲ್ ಸ್ಕ್ಯಾವೇಜಿಂಗ್ ಪ್ರೊಹಿಬಿಷನ್ ಆ್ಯಕ್ಟ್ ಪ್ರಕಾರ ಚರಂಡಿಗಿಳಿದು ಕೆಲಸ ಮಾಡಿಸುವುದು ಶಿಕ್ಷಾರ್ಹ ಅಪರಾಧ. ಇಂತಹ ಕೆಲಸದ ಸಂದರ್ಭ ಕಾರ್ಮಿಕ ಮೃತಪಟ್ಟರೆ 10 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದರು.

ಪೌರ ಕಾರ್ಮಿಕರಿಗೆ ಉಪಾಹಾರ: ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡು ತ್ತಿರುವ ಹಾಗೆ ಮುಂಜಾನೆಯಿಂದ ಕೆಲಸ ಪ್ರಾರಂಭಿಸುವ ಪೌರ ಕಾರ್ಮಿಕ ರಿಗೆ ಉಪಾಹಾರ ನೀಡುವಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯರಿಗೆ ತಿಳಿಸ ಲಾಗಿದೆ ಎಂದು ಶಿವಣ್ಣ ತಿಳಿಸಿದರು. ಒಳಚರಂಡಿ, ಗಠಾರಗಳನ್ನು ಯಂತ್ರ ಉಪಯೋಗಿಸಿ ಶುಚಿಗೊಳಿಸಬೇಕು ಹಾಗೂ ಪ್ರತಿ 10 ಸಾವಿರ ಜನ ಸಂಖ್ಯೆಗೆ ಅನುಗುಣವಾಗಿ ತಲಾ 1 ಸಕ್ಕಿಂಗ್ ಮತ್ತು ಜೆಟ್ಟಿಂಗ್ ಯಂತ್ರ ಅಳವಡಿಸ ಬೇಕು ಎಂದು ಶಿವಣ್ಣ ಸೂಚಿಸಿದರು.

ವಸತಿ ನಿಲಯ ಕ್ಲೀನರ್‌ಗೆ ದಿನಕ್ಕೆ 20 ರೂ.!: ವಸತಿ ನಿಲಯ ಶುಚಿತ್ವಗೊಳಿಸುವ ಕ್ಲೀನರ್‌ಗೆ ಎಷ್ಟು ವೇತನ ನೀಡಲಾಗುತ್ತದೆ ಎಂದು ಅಧ್ಯಕ್ಷ ಶಿವಣ್ಣ ಪ್ರಶ್ನಿಸಿದಾಗ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸಂತೋಷ್ ಮಾಸಿಕ 600 ರೂ. ಎಂದರು.

ಸಾರ್ವಜನಿಕರ ಅಹವಾಲು:

ಉದ್ಯೋಗ ಮೀಸಲಿಡಿ ಪೌರ ಕಾರ್ಮಿಕ ಮಕ್ಕಳಿಗೆ ಪಾಲಿಕೆಯ ಉದ್ಯೋಗ ದಲ್ಲಿ ಪ್ರತ್ಯೇಕ ಮೀಸಲಾತಿ ಕಲ್ಪಿಸಬೇಕು ಎಂದು ದಲಿತ ಮುಖಂಡ ಎಸ್.ಪಿ.ಆನಂದ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿವಣ್ಣ ‘ಈ ಬಗ್ಗೆ ಪಾಲಿಕೆಯಿಂದ ನಿರ್ಣಯ ಮಾಡಿ ಸರಕಾರಕ್ಕೆ ಕಳುಹಿಸಿ’ ಎಂದು ಸೂಚಿಸಿದರಲ್ಲದೆ, ಅಧಿಕಾರಿಗಳು ಸ್ವತಃ ಪೌರ ಕಾರ್ಮಿಕರಿರುವ ಕಾಲನಿಗೆ ತೆರಳಿ ಸರಕಾರದಿಂದ ದೊರೆಯುವ ಸೌಲಭ್ಯಗಳ ಮಾಹಿತಿ ನೀಡಬೇಕು ಹಾಗೂ ಪೌರ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು.

ಪೌರ ಕಾರ್ಮಿಕರಿಗೆ ನಿವೇಶನ ನೀಡಿ: ಪಚ್ಚನಾಡಿಯಲ್ಲಿ 9 ಎಕರೆ ಸರಕಾರಿ ಜಾಗವಿದ್ದರೂ ಕೂಡಾ ಪೌರ ಕಾರ್ಮಿಕರ ನಿವೇಶನಕ್ಕೆ ಪಾಲಿಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದಲಿತ ಮುಖಂಡ ಎಸ್.ಪಿ.ಆನಂದ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಮಹಾಬಲ ಮಾರ್ಲ, ‘ಪಚ್ಚನಾಡಿಯಲ್ಲಿ ಡಂಪಿಂಗ್ ಯಾರ್ಡ್ ಇರುವ ಕಾರಣ ಸರಕಾರ ಅನುಮೋದನೆ ನೀಡಿಲ್ಲ’ ಎಂದರು.

ತೆರೆದ ಚರಂಡಿಯಲ್ಲಿ ಒಳಚರಂಡಿ ಕೊಳಚೆ: ಬಂದರು ಪ್ರದೇಶದಲ್ಲಿ ತೆರೆದ ಚರಂಡಿಯಲ್ಲಿ ಪೌರ ಕಾರ್ಮಿಕರು ಕೆಲಸ ಮಾಡುವಾಗ ಒಳಚರಂಡಿಯ ಮಲ ಸಹಿತ ಕೊಚ್ಚೆ ನೀರು ಮೈಮೇಲೆ ಬೀಳುತ್ತಿದೆ ಎಂದು ದಲಿತ ಮುಖಂಡ ಎಸ್.ಪಿ.ಆನಂದ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿವಣ್ಣ, ಆರೋಗ್ಯ ನಿರೀಕ್ಷಕರ ಸಮ್ಮುಖದಲ್ಲೇ ತೆರೆದ ಚರಂಡಿ ಶುಚಿತ್ವ ಕಾರ್ಯ ನಡೆಸಬೇಕು.ಒಳ ಚರಂಡಿಯ ನೀರು ತೆರೆದ ಚರಂಡಿಯಲ್ಲಿ ಹರಿದು ಹೋಗದಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

Write A Comment