ಕರಾವಳಿ

ಬಡವರ ಏಳಿಗೆಯಿಂದ ಸಾಮಾಜಿಕ ಬದಲಾವಣೆ: ಸಚಿವ ರೈ.

Pinterest LinkedIn Tumblr

rai_bantwal_photo_1

ಬಿ.ಸಿ.ರೋಡ್, ನ.24: ಸಮಾಜದಲ್ಲಿ ದುರ್ಬಲ ವರ್ಗ ಮತ್ತು ದೀನ ದಲಿತ ರನ್ನು ಮೇಲೆತ್ತುವುದರ ಜೊತೆಗೆ ಹಂತ ಹಂತವಾಗಿ ಸಾಮಾಜಿಕ ಬದಲಾವಣೆೆ ಸಾಧ್ಯವಿದ್ದು, ಭೂತಕಾಲದಲ್ಲಿನ ಸ್ಥಿತಿಗತಿ ನೆನಪಿಸಿ, ಭವಿಷ್ಯತ್ಕಾಲಕ್ಕೆ ಅನುಕೂಲವಾಗುವಂತೆ ವರ್ತಮಾನ ದಲ್ಲಿ ಅಭಿವೃದ್ಧಿಯ ಕಡೆಗೆ ಹೆಜ್ಜೆಯಿಡುವುದು ನಮ್ಮೆ ಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.

ಸಜಿಪಮೂಡ ಗ್ರಾಪಂ ಸಮೀಪ ನೂತನವಾಗಿ ನಿರ್ಮಾಣಗೊಂಡ ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಜಿ.ಪಂ. ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಸದಸ್ಯೆ ಮಮತಾ ಡಿ.ಎಸ್. ಗಟ್ಟಿ ಮಾತನಾಡಿದರು. ಜಿ.ಪಂ. ಮಾಜಿ ಅಧ್ಯಕ್ಷ ಬಿ. ಸದಾನಂದ ಪೂಂಜ ಪ್ರಸ್ತಾವನೆ ಗೈದರು. ತಾ.ಪಂ. ಅಧ್ಯಕ್ಷ ಯಶವಂತ ದೇರಾಜೆ, ಸದಸ್ಯರಾದ ಪುಷ್ಪಾವತಿ, ಶರೀಫ್, ಜಿ.ಪಂ. ಮಾಜಿ ಸದಸ್ಯೆ ವಿಜಯ ವಿ. ಪ್ರಭು, ಸಜಿಪಮೂಡ ಗ್ರಾ.ಪಂ. ಅಧ್ಯಕ್ಷೆ ಸುಂದರಿ, ಸಜಿಪ ಮುನ್ನೂರು ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ ಮೊದಲಾದವರು ಶುಭ ಹಾರೈಸಿ ದರು. ಇದೇ ವೇಳೆ ಕಟ್ಟಡ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರ ಇಕ್ಬಾಲ್ ಅವರನ್ನು ಸನ್ಮಾನಿಸಲಾಯಿತು.

ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ಗ್ರಾ.ಪಂ. ಮಾಜಿ ಅಧ್ಯಕ್ಷ ಯೂಸುಫ್ ಕರಂದಾಡಿ, ತಾ.ಪಂ. ಕಾರ್ಯನಿರ್ವ ಹಣಾಧಿಕಾರಿ ಸಿಪ್ರಿಯನ್ ಮಿರಾಂದ, ಜಿ.ಪಂ. ಎಂಜಿನಿಯರ್ ಗಿರೀಶ್ ಕೆ.ಪಿ., ಪ್ರಮುಖರಾದ ಗೀತಾ ಜಾಡಕೋಡಿ, ಅಬ್ದುಲ್ ಕರೀಂ, ಎನ್. ಚಂದ್ರಶೇಖರ ಶೆಟ್ಟಿ ನೀಲ್ಯ, ಸುಶೀಲಾ ಕಂದೂರು, ಯೋಗೀಶ್ ಬೆಳ್ಚಡ ಕೂಡೂರು, ಬಿ.ಎಸ್. ಅಬೂಬಕರ್ ಬೊಳ್ಳಾಯಿ, ಕೆ. ಬಶೀರ್ ಕೊಳಕೆ, ಸಂಜೀವಿ ಕೇಪುಳಗುಡ್ಡೆ, ಗೀತಾ ಚಂಚಲಾಕ್ಷಿ ಮಿತ್ತಕೆರೆ, ಯಮುನಾ ಕೊಟ್ಟಾರಿಪಾಲು, ಯೋಗೀಶ ಪೂಜಾರಿ ಕೋಮಾಲಿ, ಲವಿನಾ ಲಸ್ರಾದೊ ಕೊಳಕೆ, ವಿಶ್ವನಾಥ ಬೆಳ್ಚಡ ಕೂಡೂರು, ಸುರೇಶ್ ಶೆಟ್ಟಿ ಕೊಯಮಜಲು, ಪಿಡಿ‌ಒ ನಿರ್ಮಲ, ಕಾರ್ಯದರ್ಶಿ ನಳಿನ್ ಎ.ಕೆ. ಮೊದಲಾದವರು ಉಪಸ್ಥಿತರಿದ್ದರು. ಸಜಿಪಮೂಡ ಗ್ರಾಪಂ ಮಾಜಿ ಅಧ್ಯಕ್ಷ ದೇವಿಪ್ರಸಾದ್ ಪೂಂಜ ಸ್ವಾಗತಿಸಿ, ಬಿ.ಎ. ಉಮರಬ್ಬ ಬೊಳ್ಳಾಯಿ ವಂದಿಸಿದರು. ಶಿಕ್ಷಕ ಬಿ. ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.

Write A Comment