ಕರಾವಳಿ

ತುಳು – ಕನ್ನಡ ವೆಲ್ಪೇರ್ ಅಸೋಸಿಯೇಶನ್ ಉದ್ಘಾಟನೆ

Pinterest LinkedIn Tumblr

iswer_ali_photo_1

ವರದಿ : ಈಶ್ವರ ಎಂ. ಐಲ್

ಚಿತ್ರ : ದಿನೇಶ್ ಕುಲಾಲ್

ಮುಂಬಯಿ : ಮೀರಾ-ಭಾಯಂಧರ್ ನ ತುಳು – ಕನ್ನಡಿಗರು ನೂತನವಾಗಿ ಸ್ಥಾಪಿಸಿದ ಮೀರಾ-ಭಾಯಂಧರ್ ತುಳು – ಕನ್ನಡ ವೆಲ್ಪೇರ್ ಅಸೋಸಿಯೇಶನ್ ಉದ್ಘಾಟನೆಯನ್ನು ನ. 8 ರಂದು ನಗರದ ಖ್ಯಾತ ಸಾಹಿತಿ, ಸಂಘಟಕ ರವಿ ರಾ. ಅಂಚನ್ ಮಾಡಿದರು.

ಬಂಟರ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿಯವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದು ಮಾತನಾಡುತ್ತಾ ಸಂಘಟನೆ ಕಟ್ಟುವುದು ಮುಖ್ಯವಲ್ಲ, ಅದರೊಳಗೆ ಸಮಸ್ಯೆಯು ಬೆಳೆಯದಂತೆ ನಿಸ್ವಾರ್ಥವಾಗಿ ಮುನ್ನಡೆಸಬೇಕು ಎಂದರು. ನೂತನ ಸಂಘಟನೆಯ ಸ್ಥಾಪಕಾಧ್ಯಕ್ಷ ಎ. ಕೆ. ಹರೀಶ್ ಅವರನ್ನು ಗೌರವಿಸಿದರು.

iswer_ali_photo_2 iswer_ali_photo_3

ಸಾಣೂರು ಸಾಂತಿಂಜ ಜನಾರ್ಧನ ಭಟ್ ಅವರು ಕಲೆ, ಕಲಾವಿದರು ಹಾಗೂ ಸಾಹಿತಿಗಳಿಗೆ ಆಶ್ರಯವಗುವ ಕೆಲಸ ಈ ಸಂಸ್ಥೆಯಿಂದ ನಡೆಯಲಿ ಎಂದರು.

ತುಳು ಲಿಪಿಯ ಸಂಶೋಧಕ ಜಯಕರ ಪೂಜಾರಿಯವರನ್ನು ಗೌರವಿಸಿ ಮಾತನಾಡಿದ ರವಿ ರಾ ಅಂಚನ್ ನೂತನ ಸಂಘಟನೆಗೆ ಶುಭ ಕೋರಿದರು. ಶರದ್ ಮೂಡಬಿದ್ರೆ, ಸಚ್ಚಿದಾನಂದ ಶೆಟ್ಟಿ, ಎಂ, ಜೆ. ಪ್ರವೀಣ್ ಭಟ್ ಮಾತನಾಡಿದರು. ವೇದಿಕೆಯಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

iswer_ali_photo_5 iswer_ali_photo_4

ಅರುಣ್ ಶೆಟ್ಟಿ ಯವರು ಕಾರ್ಯಕ್ರಮ ನಿರ್ವಹಿಸಿದ್ದು ಕಾರ್ಯದರ್ಶಿ ಸೀತಾರಾಮ ಸಿ. ಶೆಟ್ಟಿ ವಂದಿಸಿದರು.

Write A Comment