ಕರಾವಳಿ

ಫಿಜಾ ಮಾಲ್‌ನ ಟಿಸೊಟ್ ಮಳಿಗೆಯಲ್ಲಿ ಎಂಟಿವಿ ತಾರೆಯರು.

Pinterest LinkedIn Tumblr

tissot_watch_models_1

ಮಂಗಳೂರು, ನ.12: ಪ್ರಖ್ಯಾತ ಸ್ವಿಸ್ ವಾಚ್ ಬ್ರಾಂಡ್ ಆಗಿರುವ ಟಿಸೊಟ್‌ನ ಹೊಸ ಟಿಸೊಟ್ ಟಿ ರೇಸ್ ಆಟೋಮ್ಯಾಟಿಕ್ ಮತ್ತು ಟಿಸೊಟ್ ಟಿ ಲೇಡಿ ವಾಚ್‌ಗಳನ್ನು ನಗರದ ಫಿಜಾ ಮಾಲ್‌ನಲ್ಲಿರುವ ಟಿಸೊಟ್ ಮಳಿಗೆಯಲ್ಲಿ ಬುಧವಾರದಂದು ಬಿಡುಗಡೆ ಮಾಡಲಾಯಿತು. ಎಂಟಿವಿ ಸ್ಪ್ಲಿಟ್‌ವಿಲ್ಲಾ ರಿಯಾಲ್ಟಿ ಶೋನ ಫೈನಲ್ ತಲುಪಿರುವ ಶ್ರವಣ್ ರೆಡ್ಡಿ ಮತ್ತು ದಾನಾ ವನ ಈ ವಾಚ್‌ಗಳನ್ನು ಬಿಡುಗಡೆ ಮಾಡಿದರು.

tissot_watch_models_2a tissot_watch_models_3a tissot_watch_models_4 tissot_watch_models_5 tissot_watch_models_7a tissot_watch_models_8a

ಈ ಸಂದರ್ಭದಲ್ಲಿ ಮಾತನಾಡಿದ ಶ್ರವಣ್ ಟಿಸೊಟ್‌ನ ಹೊಸತನ ಮತ್ತು ವಿನ್ಯಾಸಗಳನ್ನು ನಾನು ಸದಾ ಇಷ್ಟ ಪಡುತ್ತೇನೆ. ಸುಂದರ ವಿನ್ಯಾಸ ಮತ್ತು ತಾಂತ್ರಿಕತೆ ಟಿಸೊಟ್ ವಾಚ್‌ಗಳಲ್ಲಿ ಮೇಳೈಸಿರುತ್ತವೆ. ಸಾಂಪ್ರದಾಯಿಕತೆಯನ್ನು ಉಳಿಸಿಕೊಂಡು ಆಕರ್ಷಕ ನೋಟವನ್ನು ಇವು ಹೊಂದಿವೆ. ಟಿ ರೇಸ್ ಆಟೋಮ್ಯಾಟಿಕ್ ವಾಚ್ ನನ್ನ ಸ್ವಭಾವಕ್ಕೆ ತಕ್ಕುದಾಗಿದೆ ಎಂದು ಪ್ರಶಂಸಿಸಿದರು. ಟಿಸೊಟ್ ಟಿ ಲೇಡಿ ವಾಚ್ ಬಿಡುಗಡೆ ಮಾಡಿ ಮುದ್ದಾಡಿದ ದಾನಾ ‘ಸ್ಲೀಕ್ ವಾಚ್‌ಗಳನ್ನು ನಾನು ಸದಾ ಇಷ್ಟಪಡುತ್ತೇನೆ. ಸ್ತ್ರೀತ್ವದ ಮಧುರತೆಯನ್ನು ಇವು ಪ್ರತಿನಿಧಿಸುತ್ತವೆ. ಟಿಸೊಟ್ ಟಿ ಲೇಡಿ ವಾಚ್‌ಗಳಲ್ಲಿ ಇವೆಲ್ಲವೂ ಇವೆ ಎಂದು ನುಡಿದರು.

tissot_watch_models_20a tissot_watch_models_9a tissot_watch_models_10 tissot_watch_models_11 tissot_watch_models_15 tissot_watch_models_16 tissot_watch_models_17a tissot_watch_models_18 tissot_watch_models_19

2014 ರ ಟಿಸೊಟ್ ಟಿ ರೇಸ್ ಮೊಟೊಜಿಟಿ ಆಟೋಮ್ಯಾಟಿಕ್ ಕ್ರೋನೋಗ್ರಾಫ್ ಲಿಮಿಟೆಡ್ ಸಂಗ್ರಹ ಈಗಾಗಲೇ ಜನಪ್ರಿಯಗೊಂಡಿದೆ. ರೇಸ್‌ನ ಆರಂಭವನ್ನು ಸೂಚಿಸುವ ಫ್ಲಾಗ್ ಹೋಗುವ ಡಯಲ್ ಹೊಂದಿರುವ ಈ ಸೀಮಿತ ಸಂಗ್ರಹದ ವಾಚ್‌ಗಳಲ್ಲಿ ನಿಮಿಷದ ಓಟ ಟ್ರ್ಯಾಕನ್ನು ನೆನಪಿಸುತ್ತದೆ. ಟಿಸೊಟ್ ಟಿ ರೇಸ್ ಮೊಟೊಜಿಪಿ ಆಟೋಮ್ಯಾಟಿಕ್ ಕ್ರೋನೋಗ್ರಾಫ್ ಸಂಗ್ರಹ ಪ್ರತಿಯೊಬ್ಬರ ಬಳಿಯಲ್ಲೂ ಇರಬೇಕಾದ ವಾಚ್. ಕೇವಲ 3,333 ವಾಚ್‌ಗಳನ್ನು ಟಿಸೊಟ್ ಬಿಡುಗಡೆ ಮಾಡಿದ್ದು ಬೆಲೆ74 ,೦೦೦ ರೂ.ಗಳಂತೆ ನಿಗದಿಗೊಳಿಸಿದೆ. ವಾಚ್‌ನಷ್ಟೇ ಆಕರ್ಷಕವಾಗಿರುವ ಬಾಕ್ಸ್‌ನೊಂದಿಗೆ ವಾಚ್ ದೊರೆಯುತ್ತದೆ.

tissot_watch_models_32 tissot_watch_models_21 tissot_watch_models_22a tissot_watch_models_23a tissot_watch_models_24a tissot_watch_models_25a tissot_watch_models_26 tissot_watch_models_27 tissot_watch_models_28 tissot_watch_models_29 tissot_watch_models_30 tissot_watch_models_31

ಮಹಿಳೆಯರು ತಾವು ಬಯಸಿದ್ದನ್ನೇ ಸದಾ ಆಯ್ಕೆ ಮಾಡಿಕೊಳ್ಳುತ್ತಾರೆ. ಟಿಸೊಟ್ ಗ್ರಾಹಕರ ಬಯಕೆಗಳನ್ನು ಅರ್ಥ ಮಾಡಿಕೊಂಡೇ, ಮಹಿಳೆಯರ ಬಯಕೆಗೆ ಉತ್ತರವೆಂಬಂತೆ ಟಿಸೊಟ್ ಮಹಿಳೆಯರ ಸಂಗ್ರಹವನ್ನು ಬಿಡುಗಡೆ ಮಾಡಿದೆ. ಬೆಲೆ 37,೦೦೦ ರೂ. ಟಿಸೊಟ್ ಲೇಡಿ ಕಲೆಕ್ಷನ್ ಸ್ತ್ರೀತ್ವವನ್ನು ಪ್ರತಿನಿಧಿಸುವುದಷ್ಟೇ ಅಲ್ಲ, ಹೂವಿನ ಎಸಳಿನ ರೂಪದ ಹ್ಯಾಂಡ್ಸ್, ಬೆಝೆಲ್ ಮತ್ತು ಸೂಕ್ಷ್ಮವಾದ ಗೆರೆಗಳನ್ನು ಹೊಂದಿದೆ. ವಿವಿಧ ಮಾದರಿ, ಬಣ್ಣ ಮತ್ತು ಶೈಲಿಗಳಲ್ಲಿ ಇವು ದೊರೆಯುತ್ತದೆ. ಕ್ರಾಂತಿಕಾರಕ ಪವರ್‌ಮ್ಯಾಟಿಕ್ 80  ಆಟೋಮ್ಯಾಟಿಕ್ ಚಲನೆಯೊಂದಿಗೆ ಈ ವಾಚ್‌ಗಳು ಬಂದಿವೆ. 80  ಗಂಟೆಗಳ ಪವರ್ ರಿಸರ್ವ್ ಇರುವುದರಿಂದ ಮಹಿಳೆಯರು ತಮಗೆ ಅಗತ್ಯವಿರುವ ವಿಶ್ರಾಂತಿ ಪಡೆಯುವುದು ಪವರ್‌ಮ್ಯಾಟಿಕ್ 80  ತಂತ್ರಜ್ಞಾನದಿಂದ ಸಾಧ್ಯವಾಗಲಿದೆ.

Write A Comment