ಕರಾವಳಿ

ಭಾರತ ಹಿಂದೂಗಳ ದೇಶ : ಇಲ್ಲಿ ನಿಷ್ಠೆಯಿಂದ ಬದುಕಲು ಸಾದ್ಯವಾಗದ ಮುಸ್ಲಿಂರು ಪಾಕಿಸ್ಥಾನಕ್ಕೆ ಹೋಗ ಬಹುದು : ತೇಜಸ್ವಿನಿ ರಮೇಶ್

Pinterest LinkedIn Tumblr

hindu_vedike_tejasvini_1

ಮಂಗಳೂರು,ನ.12 : ಭಾರತದಂತಹ ಅಖಂಡ ದೇಶದಲ್ಲಿ ಹಿಂದೂಗಳ ಜೊತೆ ಬದುಕಲಿಕ್ಕಾಗುವುದಿಲ್ಲ, ನಮಗೆ ಬೇರೆಯೇ ದೇಶ ಕೊಡಿ ಎಂದು ಕೇಳುವ ಮುಸಲ್ಮಾನರು ಬ್ರಿಟಿಷರೊಂದಿಗೆ ಗುಪ್ತ ಪ್ರೇಮ ಪ್ರಸಂಗ ನಡೆಸಿಕೊಂಡು ಭಾರತವನ್ನು ಒಡೆದು ಪಾಕಿಸ್ತಾನವನ್ನು ಪಡೆದಿದ್ದೀರಿ. ಆದ್ದರಿಂದ ಪಾಕಿಸ್ತಾನ ನಿಮ್ಮ ದೇಶ, ಭಾರತ ನಮ್ಮ ದೇಶ ಎಂದು ಬಿಜೆಪಿ ಮುಖಂಡೆ ತೇಜಸ್ವಿನಿ ರಮೇಶ್ ಅವಾಜ್ ಹಾಕಿದ್ದಾರೆ.

ಅವರು ಬಜ್ಪೆಯ ಶಕ್ತಿ ಮಂಟಪದಲ್ಲಿ ಬಜರಂಗ ದಳ, ವಿಶ್ವಹಿಂದೂ ಪರಿಷತ್ ಹಾಗೂ ಹಿಂದೂ ಜಾಗರಣ ವೇದಿಕೆಯ ವತಿಯಿಂದ ಹಿಂದೂ ದಮನ ನೀತಿ, ಮಹಿಳಾ ದೌರ್ಜನ್ಯ ಹಾಗೂ ಹಿಂದೂ ಮುಖಂಡರ ಮೇಲೆ ಗೂಂಡಾ ಕಾಯ್ದೆ ಹೇರಿರುವುದನ್ನು ವಿರೋಧಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತಾಡು ತ್ತಿದ್ದರು.

ನಂತರ ಮಾತಾಡಿದ ಅವರು ಮುಸಲ್ಮಾನರೇ, ನಾವಿಲ್ಲಿ ಭಿಕ್ಷುಕರಲ್ಲ, ನೀವು ಒಂದಷ್ಟು ಮಂದಿ ಮುಸಲ್ಮಾನರು ಭಾರತದಲ್ಲಿರುತ್ತೇವೆ ಎಂದು ಆಯ್ಕೆ ಮಾಡಿಕೊಂಡು, ನಮ್ಮ ದೇಶದ ಅನ್ನ, ನೀರನ್ನು ಕುಡಿದು ಬದುಕುತ್ತಿದ್ದೀರಿ. ಆದ್ದರಿಂದ ಈ ದೇಶದಲ್ಲಿ ಭಯೋತ್ಪಾದಕತೆಯನ್ನು ಮಾಡದೇ, ಹಿಂದೂಗಳ ವಿರುದ್ಧ ಅವಹೇಳನ ಮಾಡದೇ, ಹಿಂದೂ ಮಾತೆಯರೊಂದಿಗೆ ಲವ್ ಜಿಹಾದ್ ಮಾಡದೇ, ಹಿಂದೂಗಳು ಪವಿತ್ರವಾಗಿ ಪೂಜಿಸುವ ಗೋಮಾತೆಯನ್ನು ಕತ್ತರಿಸದೆ ನಮ್ಮ ನೆಲಕ್ಕೆ ನಿಷ್ಟವಾಗಿ ಬದುಕಬೇಕಾಗಿರುವುದು ನಿಮ್ಮ ಧರ್ಮ; ಅದು ನಿಮಗೆ ಒಳ್ಳೆಯದು ಎಂದು ತೇಜಸ್ವಿನಿ ಟಾಂಗ್ ನೀಡಿದ್ದಾರೆ ನಂತರ ಮಾತಾಡಿದ ಅವರು ನರಿ ಕೂಗಿದ್ದು ಗಿರಿಗೆ ಮುಟ್ಟಲ್ಲ, ಮೋದಿಯವರು ಕೈಲಾಸದ ಸಿಂಹ, ಅಚ್ಚಾ ದಿನ್‌ಕಿ ಸಚ್ಚಾಯಿ? ಎಂದು ಬೋರ್ಡ್ ಹಾಕಿ ಮೋದಿಯವರನ್ನು ತೆಗಳುವವರ ಒಂದು ಕ್ಷಣ ಅರ್ಥ ಮಾಡಿಕೊಳ್ಳುವುದು ಒಳಿತು. ಯಾಕೆಂದರೆ ಮೋದಿ ಸರಕಾರ ಬಂದ ಮೇಲೆ ಪೆಟ್ರೋಲ್, ಚಿನ್ನದ ಬೆಲೆ ಕುಸಿದಿದೆ. ಅಚ್ಚಾ ದಿನ್ ಎಂದರೆ ಮೋದಿ ಬಾಂಬ್ ಹಾಕಬೇಕಿತ್ತಾ ಎಂದು ತೇಜಸ್ವಿನಿ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ರಾವಣ: ನಳಿನ್ ಕುಮಾರ್ ಕಟೀಲ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಏರಿದಂದೇ ಗೋಹತ್ಯೆ ನಿಷೇಧ ಕಾನೂನನ್ನು ತೆಗೆದು ಗೋಹಂತಕರಿಗೆ ರಕ್ಷಣೆ ನೀಡಿದ್ದಾರೆ. ಅಲ್ಲಿಂದ ದಕ್ಷಿಣ ಕನ್ನಡದ ಗೋ ಹಂತಕರು ಎಚ್ಚರವಾಗಿ ತಲವಾರು ಹಿಡಿದು ಹಟ್ಟಿಯ ಗೋವನ್ನು ಕದ್ದುಕೊಂಡು ಹೋಗಲಾರಂಭಿಸಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ. ಸಿದ್ದರಾಮಯ್ಯನನ್ನು ರಾವಣನಿಗೆ ಹೋಲಿಸಿದ ನಳಿನ್ ರಾಜ್ಯದಲ್ಲಿ ಹಿಂದೂಗಳನ್ನು ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ನೋಡಲಾಗುತ್ತದೆ. ಮಣಿಪಾಲದಿಂದ ಹಿಡಿದು ನಂದಿತಾವರೆಗೆ ಎಷ್ಟೋ ಅತ್ಯಾಚಾರ ನಡೆಯಿತು. ಗೋಹಂತಕನ ಮನೆಗೆ 10 ಲಕ್ಷ ಕೊಡುವ ಸರಕಾರ ಸಮಾಜದ ಪರವಾಗಿ ಯೋಚನೆ ಮಾಡುವರಿಗೆ ಗೂಂಡಾ ಕಾಯಿದೆ ಹಾಕುತ್ತಿದೆ ಎಂದು ಆರೋಪಿಸಿದರು.

ದೇಶದಲ್ಲಿ ಎರಡು ಕಾನೂನು: ಜಗದೀಶ್ ಶೇಣವ
ಸುರೇಶ್ ಬಾಕ್ರಬೈಲ್ ಎಂಬಾತನ ಮುಖಕ್ಕೆ ಸೆಗಣಿ ಬಾಚಿದವರಿಗೆ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದ ಸೆಕ್ಷನ್ 307 ಜಡಿಯುತ್ತದೆ. ಆದರೆ ತುಕಾರಾಮ ಎನ್ನುವ ಯುವಕನ ಕೈ ಕಾಲು ಕಡಿದು, ಆತನ ಕಣ್ಣನ್ನು ಕಿತ್ತವರಿಗೆ ತೀವ್ರದ ತರದ ಗಾಯ ಸಂಬಧಪಟ್ಟ ಸೆಕ್ಷನ್ ೩೨೬ ಜಡಿಯುತ್ತದೆ. ಈ ಬಗ್ಗೆ ಎಸ್‌ಐನಲ್ಲಿ ಪ್ರಶ್ನಿಸಿದರೆ ರಜೆಯಲ್ಲಿ ಹೋಗಿದ್ದೆ ಎಂಬ ಉತ್ತರ ಬರುತ್ತದೆ. ಈ ದೇಶದಲ್ಲಿ ಹಿಂದೂಗಳಿಗೊಂದು ಕಾರಣ, ಮುಸ್ಲಿಮರಿಗೊಂದು ಕಾನೂನು ಎಂದು ಜಗದೀಶ್ ಶೇಣವ ಆರೋಪಿಸಿದ್ದಾರೆ. ಪ್ರತಿಭಟನೆಯಲ್ಲಿ ಸತ್ಯಜಿತ್ ಸುರತ್ಕಲ್, ಉಮಾನಾಥ ಕೋಟ್ಯಾನ್, ಭುಜಂಗ ಕುಲಾಲ್ ಮುಂತಾದವರು ಉಪಸ್ಥಿತರಿದ್ದರು.

1 Comment

Write A Comment