ಪುತ್ತೂರು,ನ.10 : ನಗರದ ಇಬ್ಬರು ಉದ್ಯಮಿಗಳಿಗೆ ಭೂಗತ ಲೋಕದ ಕಲಿ ಯೋಗೀಶ್ ಹೆಸರಿನಲ್ಲಿ ಹಫ್ತಾ ವಸೂಲಿಗಾಗಿ ಬೆದರಿಕೆ ಕರೆ ಬಂದಿರುವ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ.
ಕೋರ್ಟ್ ರಸ್ತೆಯಲ್ಲಿ ಚಿನ್ನಾಭರಣಗಳ ಮಳಿಗೆ ಹೊಂದಿರುವ ಸ್ವರ್ಣೋದ್ಯಮಿ ಹಾಗೂ ಫೈನಾನ್ಸ್ ಮತ್ತು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವ ಇನ್ನೊಬ್ಬರಿಗೆ +301 ಮತ್ತು +344ರಿಂದ ಆರಂಭವಾಗುವ ದುಬೈ ಮೂಲದ ದೂರವಾಣಿಯಿಂದ ಕರೆ ಮಾಡಿ, ತಾನು ಕಲಿ ಯೋಗೀಶ್ ಎಂದು ಹೇಳಿಕೊಂಡ ವ್ಯಕ್ತಿ ಭಾರಿ ಮೊತ್ತದ ಹಣದ ಬೇಡಿಕೆ ಇಟ್ಟಿದ್ದಾನೆ. ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಇಬ್ಬರಿಗೂ ಭದ್ರತೆ ನೀಡುವುದಾಗಿ ಹೇಳಿದ್ದಾರೆ.