ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು: ಮಂಗಳೂರಿನ ಸ್ವಸ್ತಿ ಆರ್‌ಎಕ್ಸ್ ಲೈಫ್ ಟ್ರಸ್ಟ್ ಆಶ್ರಯದಲ್ಲಿ ಹಾಗೂ ದುಬೈ ಮೂಲದ ಕನ್ನಡಿಗ ವರ್ಲ್ಡ್ ಡಾಟ್ ಕಾಮ್ (ನ್ಯೂಸ್ ವೆಬ್ ಸೈಟ್) , ಮಂಗಳೂರಿನ ಹೋಮ್ ಲ್ಯಾಂಡ್ ಹಾಲಿಡೇಸ್ ಎಂಡ್ ಸರ್ವಿಸ್ ಅಪಾರ್ಟ್ ಮೆಂಟ್, ಮಹಾರಾಜಾ ಫ್ಯಾಮಿಲಿ ರೆಸ್ಟೋರೆಂಟ್ ಹಾಗೂ ಸುರಭಿ ಅಸೋಸಿಯೇಟ್ಸ್ ಪ್ರಯೋಜಕತ್ವದಲ್ಲಿ ಆರೋಗ್ಯದ ಬಗ್ಗೆ ಜನಜಾಗೃತಿಗೊಳಿಸುವ ವಿನೂತನ ಕಾರ್ಯಕ್ರಮ ಆರೋಗ್ಯದ ಕಡೆಗೆ ಬೀಚ್ ನಡಿಗೆ ಎಂಬ ಸಂದೇಶವನ್ನು ಸಾರುವ “ಬೀಚ್ ವಾಕ್” ರವಿವಾರ ಮುಂಜಾನೆ ತಣ್ಣೀರು ಬಾವಿಯ ಸಮುದ್ರ ತಟದಲ್ಲಿ ಜರಗಿತು.
5 ವರ್ಷದ ಪ್ರಾಯದ ಪುಟಾಣಿಗಳಿಂದ ಹಿಡಿದು 80 ವರ್ಷದ ಪ್ರಾಯದವರೆಗಿನ ಸುಮಾರು 250 ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ” ಬೀಚ್ ವಾಕ್” ಲಾಂಛನ ವಿರುವ ಟಿ-ಶರ್ಟ್ ವಿತರಿಸಲಾಯಿತು.
ಮೊದಲಿಗೆ ಮುಂಜಾನೆ 6 ಗಂಟೆಗೆ ಬೋಳೂರು ಸುಲ್ತಾನ್ ಬತ್ತೇರಿಯ ನದಿ ತೀರಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಸರಳ ವ್ಯಾಯಾಮವನ್ನು ಕಲಿಸಲಾಯಿತು. ಬಳಿಕ ಸುಲ್ತಾನ್ ಬತ್ತೇರಿಯಿಂದ ತಣ್ಣೀರು ಬಾವಿ ಬೀಚ್ ವರೆಗೆ ಬೋಟ್‌ನಲ್ಲಿ ತೆರೆಳಿ ಅಲ್ಲಿ ಸಮುದ್ರ ತೀರದಲ್ಲಿ ಮತ್ತೋಮ್ಮೆ ಸರಳ ವ್ಯಾಯಾಮವನ್ನು ಮಾಡಲು ಅವಕಾಶ ನೀಡಲಾಯಿತು.
ಮುಂಜಾನೆ ಗಂಟೆ 7.30ಕ್ಕೆ ತಣ್ಣೀರು ಬಾವಿ ಸಮುದ್ರದ ತಟದಲ್ಲಿ ಎಲ್ಲರೂ ಒಟ್ಟು ಸೇರಿ ವಂದೇ ಮಾತರಂ ಗೀತೆಯನ್ನು ಹಾಡಿದರು. ಬಳಿಕ ಸ್ವಸ್ತಿ ಆರ್‌ಎಕ್ಸ್ ಲೈಫ್ ಟ್ರಸ್ಟ್‌ನ ಶ್ರೀ ಗಿರಿಧರ್ ಕಾಮತ್ ಅವರ ಮಾರ್ಗದರ್ಶನದಲ್ಲಿ “ಬೀಚ್ ವಾಕ್” ಆರಂಭಗೊಂಡಿತು. ಸುಮಾರು 50 ನಿಮಿಷಗಳ ಕಾಲ ನಡೆದ ಈ ನಡಿಗೆ (ಬೀಚ್ ವಾಕ್) ಕಾರ್ಯಕ್ರಮದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡರು.
ನಡಿಗೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಖರ್ಜೂರ. ಎಳ್ಳುಂಡೆ, ಕಡ್ಲೆ ಚಿಕ್ಕಿ, ಉಂಡೆ ಮುಂತಾದ ತಿನಿಸುಗಳನ್ನು ವಿತರಿಸಲಾಯಿತು ಮಾತ್ರವಲ್ಲದೇ ನಡಿಗೆ ಕಾರ್ಯಕ್ರಮದ ಕೊನೆಯಲ್ಲಿ ಸ್ವಸ್ತಿ ಆರ್‌ಎಕ್ಸ್ ಲೈಫ್‌ನ ಸ್ವಯಂ ಸೇವಕರು ಸುಮಾರು 7 ಬಗೆಯ ತಾಜಾಹಣ್ಣುಗಳನ್ನು ಹಾಗೂ ವೆಜ್ ಸ್ಯಾಂಡ್‌ವಿಚ್ ಮತ್ತು ಲಿಂಬೆ ಪಾನಕವನ್ನು ವಿತರಿಸಿದರು. ಮಾತ್ರವಲ್ಲದೇ ನಡಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರ ಅನುಕೂಲಕ್ಕಾಗಿ ಹಣ್ಣುಗಳ ಬುಟ್ಟಿ, ನೀರಿನ – ಪಾನಿಯಾದ ಡ್ರಮ್, ಆಟವಾಡಲು ಚೆಂಡು, ಧ್ವನಿ ವರ್ಧಕ ಮುಂತಾದ ವಸ್ತುಗಳ ವ್ಯವಸ್ಥೆಯನ್ನು ಕೂಡ ಸ್ವಯಂ ಸೇವಕರು ಮಾಡಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ವಿಶೇಷವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಗೋಮಾತೆ ಹಾಗೂ ಹಾಲಿನ ಬಗ್ಗೆ ಶ್ರೀ ಉಮಾ ಮಂಜುಲಾಲ್ ರವರು ಮಾಹಿತಿ ನೀಡಿದರು. “ನಾದಸಿಂಚನ” ಬಳಗದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಶ್ರೀಮತಿ ಸರೋಜಿನಿ ಟಿ. ಪೈ ಯವರು ಬೀಚ್ ವಾಕ್ ಬಗ್ಗೆ ಸುಂದರ ಕವನ ಬರೆದು ಓದಿದರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಪಾಲ್ಗೊಂಡ ನರೇಂದ್ರ ನಾಯಕ್ ರವರು ಬೀಚ್ ವಾಕ್ ಬಗ್ಗೆ ತಮ್ಮ ಆನಿಸಿಕೆಗಳನ್ನು ವ್ಯಕ್ತಪಡಿಸಿದರು. ಸ್ವಚ್ಘ ಭಾರತ ಅಂದೋಲನದ ಪ್ರಯುಕ್ತ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಹಾಗೂ ಸ್ವಸ್ತಿ ಆರ್‌ಎಕ್ಸ್ ಲೈಫ್ ಟ್ರಸ್ಟ್‌ನ ಸ್ವಯಂ ಸೇವಕರಿಂದ ಕಾರ್ಯಕ್ರಮ ನಡೆದ ಪರಿಸರದ ಬೀಚ್ ಸ್ವಚ್ಛತಾ ಅಭಿಯಾನ ನಡೆಯಿತು.
ವಂದನ ನಾಯಕ್, ಜ್ಯೋತಿ ಪ್ರಸಾದ್ ನಾಯಕ್, ರೇಷ್ಮಾ ಬಾಳಿಗಾ ಅತಿಥಿಗಳನ್ನು ಸ್ವಾಗತಿಸಿದರು. ಸ್ವಸ್ತಿ ಆರ್‌ಎಕ್ಸ್ ಲೈಫ್‌ನ ಗಿರಿಧರ್ ಕಾಮತ್, ಬೀಚ್ ವಾಕ್ ನ ಕೋ ಆರ್ಡಿನೇಟರ್ ಸುನೀಲ್ ದತ್ತ್ ಪೈ ಯವರು ಬೀಚ್ ವಾಕನ್ನು ಯಶಸ್ವಿಗೊಳಿಸಿದುದಕ್ಕಾಗಿ ಎಲ್ಲರನ್ನು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದರು. ಶ್ರೀಮತಿ ವಂದನಾ ನಾಯಕ್ ಹಾಗೂ ಡಾ.ಗಾಯತ್ರಿ ಭಟ್ ದನ್ಯವಾದ ಸರ್ಮಪಿಸಿದರು.
ವರದಿ/ಚಿತ್ರ : ಸತೀಶ್ ಕಾಪಿಕಾಡ್
2 Comments
We are fortunate to have such a wonderful Beach in our neighbourhood, well maintained by by Yojaka group.
Together we can do lot more events, whats required is little more enthusiasm, patience and the spirit to explore…fortunately we have all these qualities in people like Sunil Dath Pai. Support from business world by way of sponsorship would go a long way in ensuring wellness of the city dwellers…which is the need of the day.
Amazing Event by Rxlife! Really glad to have attended such an event with such great enthusiastic crowd and support from Like minded people who want to do something for the society 🙂