ಕರಾವಳಿ

ಮಹಿಳೆಯರ ವಿಷಯದಲ್ಲಿ ಲಘು ಮಾತು, ಬೇಜವಾಬ್ದಾರಿ ಹೇಳಿಕೆಗಳು ಶೋಭೆ ತರುವುದಿಲ್ಲ :ವೀರಪ್ಪ ಮೊಯ್ಲಿ

Pinterest LinkedIn Tumblr

Veerappa-Moily1

ಮಂಗಳೂರು, ನ.10: ಹೆಣ್ಣು ಮಕ್ಕಳ ಖಾಸಗಿ ಬದುಕಿನ ವಿಚಾರದಲ್ಲಿ ಯಾವುದೇಪಕ್ಷ ಹಾಗೂ ಮುಖಂಡರು ರಾಜಕೀಯ ಮಾಡುವುದು ಸರಿಯಲ್ಲ. ಲಘು ಮಾತು, ಬೇಜವಾಬ್ದಾರಿಯ ಹೇಳಿಕೆಗಳು ಯಾರಿಗೂ ಶೋಭೆ ತರುವಂತದ್ದಲ್ಲ ಎಂದು ಕೇಂದ್ರದ ಮಾಜಿ ಸಚಿವ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.

ರಾಜ್ಯದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಕುರಿತು ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಬೇಜವಾಬ್ದಾರಿ ಹೇಳಿಕೆಗಳ ಬಗ್ಗೆ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಈ ಪ್ರತಿಕ್ರಿಯೆ ನೀಡಿದ ಅವರು, ರಾಷ್ಟ್ರೀಯ ಮಟ್ಟದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ನಡೆದ ಸಂದರ್ಭಗಳಲ್ಲಿ ಕೂಡ ಕಾಂಗ್ರೆಸ್ ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸಿದೆ ಎಂದರು.

ತೀರ್ಥಹಳ್ಳಿಯಲ್ಲಿ ನಡೆದ ಬಾಲಕಿಯ ಅಸಹಜ ಸಾವು ಹಾಗೂ ವಿವಾದಕ್ಕೆ ಒಳಗಾದ ಡೆತ್ ನೋಟ್ ಕುರಿತು ನಡೆಯುತ್ತಿರುವ ಸಿಒಡಿ ತನಿಖೆ ಹಾಗೂ ರಕಾರ ಕೈಗೊಂಡ ಇತರ ಕ್ರಮಗಳ ಕುರಿತು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸೋನಿಯಾ-ರಾಹುಲ್ ನಾಯಕತ್ವ ವಿವಾದಾತೀತ

ಸೋನಿಯಾ ಗಾಂಧಿ ಹಾಗೂ ರಾಹುಲ್‌ಗಾಂಧಿ ನಾಯಕತ್ವ ವಿವಾದಾತೀತ. ಒಂದು ಅವಧಿದಲ್ಲಿ ಬಿಜೆಪಿ ಎರಡು ಲೋಕಸಭಾ ಸದಸ್ಯರನ್ನು ಮಾತ್ರ ಹೊಂದಿತ್ತು. ಅದರರ್ಥ ಬಿಜೆಪಿ ನಾಶವಾಗಿದೆ ಎಂದಲ್ಲ. ಕಾಂಗ್ರೆಸ್‌ನ ಸೋಲಿನ ಅವಧಿ ಮುಗಿ ದಿದ್ದು, ಶೀಘ್ರದಲ್ಲೇ ಪಕ್ಷ ರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಚೇತರಿಸಿಕೊಳ್ಳಲಿದೆ ಎಂದವರು ಹೇಳಿದರು.

ಕಾಶ್ಮೀರ ಮತ್ತು ಜಾರ್ಖಂಡ್ ವಿಧಾನಸಭೆ ಚುನಾ ವಣೆಗೆ ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಗಳ ಆಯ್ಕೆ ಅಂತಿಮ ಗೊಳಿಸಿದೆ. ಉಭಯ ರಾಜ್ಯಗಳಲ್ಲಿ ಪಕ್ಷ ಏಕಾಂಗಿಯಾಗಿ ಎದುರಿಸಲಿದೆ ಎಂದರು.

ಶಾಸಕರಾದ ಐವನ್ ಡಿಸೋಜ ಹಾಗೂ ಜೆ.ಆರ್. ಲೋಬೊ, ಪಾಲಿಕೆ ಸದಸ್ಯರಾದ ಪ್ರವೀಣ್‌ಚಂದ್ರ ಆಳ್ವ ಹಾಗೂ ಭಾಸ್ಕರ ಮೊಯ್ಲಿ ಉಪಸ್ಥಿತರಿದ್ದರು.

Write A Comment