ಕರಾವಳಿ

ತೀರ್ಥಹಳ್ಳಿ ವಿದ್ಯಾರ್ಥಿನಿ ನಿಗೂಢ ಸಾವು ಪ್ರಕರಣ: ಕಾಮಪಿಪಾಸುಗಳ ಅಟ್ಟಹಾಸಕ್ಕೆ ನಲುಗಿದಳೇ ಬಾಲಕಿ..?; ಸಿಕ್ಕ ಡೆತ್ ನೋಟ್ ಅಕ್ಷರ ನಂದಿನಿದ್ದಲ್ಲ: ಪೋಷಕರು

Pinterest LinkedIn Tumblr

Theerthahalli_Nanditha_Death

ಶಿವಮೊಗ್ಗ: ಅಪಹರಿಸಿ, ಅತ್ಯಾಚಾರವೆಸಗಿ ವಿಷಪ್ರಾಶನ ಮಾಡಿಸಿದರೆನ್ನಲಾದ ತೀರ್ಥಹಳ್ಳಿ ಬಾಲಕಿ ನಂದಿತಾಳ ಸಾವು ಪ್ರಕರಣ ದಿನೇ ದಿನೇ ಕಾವು ಪಡೆಯುತ್ತಿದ್ದು ಪ್ರಕರಣಕ್ಕೆ ದಿನಕ್ಕೊಂದು ತಿರುವು ಸಿಗುತ್ತಿದೆ. ಅಲ್ಲದೇ ಪ್ರಕರಣವನ್ನು ಮುಚ್ಚಿಹಾಕಿ ಅದನ್ನು ಆತ್ಮಹತ್ಯೆ ಎಂದು ಸಾಧಿಸುವ ಪ್ರಯತ್ನಗಳು ನಡೆಯುತ್ತಿದೆ ಎಂಬ ಆರೋಪವನ್ನು ಬಾಲಕಿಯ ಪೋಷಕರು ಮಾಡುತ್ತಿದ್ದಾರೆ.

ಘಟನೆ ಹಿನ್ನೆಲೆ: ಅ.29ರಂದು ಬಾಲಕಿ ತನಗೆ ಆತ್ಮೀಯನಾಗಿರುವ ಇನ್ನೊಬ್ಬ ಯುವಕನೊಂದಿಗೆ ಕಾಣಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಕೆಲವರು ಅವರನ್ನು ವಿಚಾರಣೆ ನಡೆಸಿ ಬಾಲಕಿಯನ್ನು ಪಾಲಕರಿಗೆ ಒಪ್ಪಿಸಿದ್ದಾರೆಂದು ಸ್ಥಳೀಯರು ಹೇಳುತ್ತಿದ್ದಾರೆ. ಬಾಲಕಿಯ ಪೋಷಕರು ಆಕೆಯನ್ನು ಅಂದೇ ನೇರವಾಗಿ ಮನೆಗೆ ಕರೆದೊಯ್ದಿದ್ದು, ಎರಡು ದಿನಗಳ ಬಳಿಕ ಆಕೆಗೆ ಏಕಾ‌ಏಕಿ ಅಸೌಖ್ಯ ಕಾಣಿಸಿಕೊಂಡಿದೆ. ಆಕೆಯನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲ ಕಾರಿಯಾಗದೆ ಆಕೆ ಮೃತಪಟ್ಟಿದ್ದಳು. ಎರಡು ದಿನಗಳ ಬಳಿಕ ಬಾಲಕಿಯ ತಂದೆ ತನ್ನ ಮಗಳ ಕೊಲೆ ಯತ್ನದ ಬಗ್ಗೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.

ಅನ್ಯಮತೀಯ ಯುವಕನೊಬ್ಬನೊಂದಿಗೆ ಈಕೆ ಇರುವುದನು ನೋಡಿದವರಿದ್ದು ಬಾಲಕಿ ಅ.೨೯ಕ್ಕೆ ಕ್ಶಾಲೆಯಿಂದ ಬರುವಾಗ ಕೆಂಪು ಬಣ್ಣದ ಕಾರಿನಲ್ಲಿ ಬಂದ ಈ ಕಾಮುಕ ಅವಳನ್ನು ಬಲವಂತವಾಗಿ ಎಳೆದೊಯ್ದಿದ್ದಾನೆ ಎನ್ನಲಾಗಿದೆ. ಈತನೊಂದಿಗೆ ಈತನ ಮೂವರು ಸ್ನೇಹಿತರು ಇದ್ದರು ಎಂಬ ಮಾತುಗಳು ಕೂಡ ಕೇಳಿಬರುತ್ತಿದ್ದು ನಿರ್ಜನ ಗುಡ್ಡವೊಂದಕ್ಕೆ ನಂದಿತಾಳನ್ನು ಕರೆದಿಯ್ದು ಅತ್ಯಾಚಾರ ನಡೆಸುವ ಯತ್ನ ಮಾಡಲಾಗಿದೆ. ಈ ವೇಳೆ ಘಟನೆಯಿಂದ ಭೀತಳಾದ ಬಲಕಿ ಕೂಗಾಡಿದ್ದು ಸ್ಥಳೀಯ ಸೊಪ್ಪು ಕಡಿಯುವ ಮಂದಿ ದಾವಿಸಿದ್ದಾರೆ. ಈ ವೇಳೆ ಅನ್ಯಮತೀಯ ಯುವಕರೆನ್ನಲಾದವರು ಬಾಲಕಿಯನ್ನು ಗುಡ್ಡದಿಂದ ತಳ್ಳಿ ಪರಾರಿಯಾಗಿದ್ದನ್ನು ಕಂಡ ಮಹಿಳೆಯೋರ್ವರು ಇದ್ದಾರೆ. ಬಳಿಕ ಆ ಮಹಿಳೆ ನಂದಿತಾಳನ್ನು ಮಾತನಾಡಿಸಿ ಆಕೆಗೆ ಸಮಾಧನ ಹೇಳಿ ನಂದಿತಾ ಮನೆ ಸಂಪರ್ಕಿಸಿ ಸುರಕ್ಷಿತಾವಾಗಿ ಮನೆ ತಲುಪಿಸಿದ್ದಾರೆ.

ಆ ಬಳಿಕ ಮನೆಗೆ ಬಂದ ಬಾಲಕಿ ನಂದಿತಾ ತೀವ್ರ ಅಸ್ವಸ್ಥಳಾಗಿ ಹೊಟ್ಟೆ ನೋವಿನಿಂದ ಒದ್ದಾಡುತ್ತಿದ್ದು ತಾಯಿಯ ಬಳಿ ಆ ತಂಡದವರಲ್ಲಿದ್ದ ಪೈಕಿ ಯುವಕನೋರ್ವ ಪರಿಚಯವಿದ್ದು ಹೆಸರು ತಿಳಿದಿಲ್ಲ ಎಂದಿದ್ದಾಳೆ. ಹೊಟ್ಟೆ ನೋವು ಹಾಗೂ ತೀವ್ರ ಅಸ್ವಸ್ಥಳಾಗಿದ್ದ ಬಾಲಕಿಯನ್ನು ತುರ್ತು ಚಿಕಿತ್ಸೆಗಾಗಿ ಕಳೆದ ಶುಕ್ರವಾರ ಉಡುಪಿ ಸಮೀಪದ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಿದ್ದು ಬಾಲಕಿ ಸಂಜೆ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಮ್ರತಪಟ್ಟಿದ್ದಳೆ.

ಬಾಲಕಿಯನ್ನು ಅಪಹರಣ ಮಾಡಲಾಗಿತ್ತೇ…?
ಬಾಲಕಿಯನ್ನು ಅಪಹರಿಸಲಾಗಿರಲಿಲ್ಲ. ಯುವಕ ಆಕೆಗೆ ತೀರಾ ಪರಿಚಿತನಾಗಿದ್ದ ಎನ್ನುವುದು ಇದೀಗ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಅಕ್ಟೋಬರ್ 29ರಂದು ನಂದಿತಾ ತೀರ್ಥಹಳ್ಳಿಯ ಶಾಲೆಗೆ ಹೋಗುವ ವೇಳೆ ತನ್ನ ಊರಾದ ಬಾಳೇಬೈಲು ಗ್ರಾಮದಲ್ಲಿ ಬಸ್‌ಗೆ ಕಾಯುತ್ತಾ ನಿಂತಿದ್ದ ಈತನನ್ನು ಕಂಡಿದ್ದು, ಜೊತೆಗೆ ತೆರಳಿದ್ದಾಳೆನ್ನಲಾಗಿದೆ. ಆದರೆ, ಇದನ್ನೇ ಸ್ಥಳೀಯ ರಾಜಕೀಯ ಶಕ್ತಿಗಳು ತಿರುಚಿ, ಆಕೆಯನ್ನು ಅಪಹರಿಸಿ ಅತ್ಯಾಚಾರ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ ಎಂದು ಸಾರ್ವಜನಿಕರು ಹೇಳಿಕೊಳ್ಳುತ್ತಿದ್ದಾರೆ.

ಪ್ರಕರಣ ಮುಚ್ಚಿಹಾಕುವ ಯತ್ನ : ಅಕ್ಟೋಬರ್ 31 ರಂದು ನಿಧನಳಾದ ತೀರ್ಥಹಳ್ಳಿ ಶಾಲಾ ಬಾಲಕಿ ನಂದಿತಾ ಮೇಲೆ ಯಾವುದೇ ರೇಪ್ ನಡೆದಿಲ್ಲ ಎಂದು ಪೋಲಿಸ್ ಮೂಲಗಳು ತಿಳಿಸಿವೆ.ಅವರ ತಂದೆ ದಾಖಲಿಸಿರುವ ದೂರಿನಲ್ಲೂ ರೇಪಿನ ಪ್ರಸ್ತಾಪ ಇಲ್ಲ, ಆದರೆ ಕೊಲ್ಲಲು ಯತ್ನಿಸಿದ್ದರು ಎಂದು ದೂರು ಕೊಟ್ಟಿದ್ದಾರೆ ಎನ್ನಲಾಗುತ್ತಿದ್ದರೂ ಕೂಡ ತಂದೆ ಲೈಂಗಿಕ ದೌರ್ಜನ್ಯ ನಡೆಸಲು ಮುಂದಾಗಿದ್ದಾರೆ ಎಂದು ದೂರು ನೀಡಿದರೂ ಕೂಡ ಪೊಲೀಸರು ಈ ಬಗ್ಗೆ ದೂರು ದಾಖಲಿಸಲಿಲ್ಲ ಎಂಬ ಮಾತುಗಳು ಬಾಲಕಿ ಕುಟುಂಬದವರಿಂದ ಕೇಳಿಬರುತ್ತ್ತಿದೆ.

ಈ ನಡುವೆ ಹುಡುಗಿಯ ಶಾಲಾ ಚೀಲದಲ್ಲಿ ‘ಡೆತ್ ನೋಟ್’ ಸಿಕ್ಕಿದೆ ಎಂದು ಹೇಳಿರುವ ಪೊಲೀಸರು, ರೇಪ್ ಅಥವಾ ಕೊಲೆ ಯತ್ನ ನಡೆದಿದೆ ಎಂಬ ಆಪಾದನೆಯನ್ನು ತಳ್ಳಿಹಾಕಿ ಇದು ಆತ್ಮಹತ್ಯಾ ಪ್ರಕರಣ ಎಂದು ಹೇಳಿರುವುದು, ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಆದರೂ ಬಾಲಕಿ ಸಾಯುವ ಮೊದಲು ಡೆತ್ ನೋಟ್ ಬರೆದು ಪ್ರಿಂಟ್ ಹಾಕುತ್ತಾಳೆಯೇ..ಅಲ್ಲದೇ ಎಂದಿಗೂ ನೀಲಿ ಬಣ್ಣದ ಅಕ್ಷರದ ಪೆನ್ನಿನಲ್ಲಿ ಬರೆಯುವ ಆಕೆ ರೆಡ್ ಇಂಕಿನಲ್ಲಿ ಯಾಕೆ ಬರೆಯುತ್ತಾಳೆ ಹಾಗೂ ಪ್ರಕರಣ ನಡೆದು 4 ದಿನಗಳ ಬಳಿಕ ಡೆತ್ ನೋಟ್ ಹೇಗೆ ಸಿಕ್ಕಿತು ಎನ್ನುವ ಅನುಮಾನಗಳ ನಡುವೆಯೇ ಅದು ಮಗಳ ಕೈ ಬರಹವಲ್ಲ ಎಂದು ಆಕೆ ಪೋಷಕರು ತಿಳಿಸಿದ್ದಾರೆ.  ಇನ್ನು ಅಷ್ಟು ಸಣ್ಣ ಬಾಲಕಿ ವಿಷ ಕುಡಿಯುತ್ತಾಳೆ ಎಂದರೇ ಅಕೆಗೆ ವಿಷ ಹೇಗೆ ಸಿಗುತ್ತದೆಯೆಂಬುದನ್ನು ತನಿಖಾಧಿಕಾರಿಗಳು ಮೊದಲು ಉತ್ತರಿಸಬೇಕಿದೆ.

ಡೆತ್ ನೋಟ್ ವಿವರ: ನಾನು ಚೆನ್ನಾಗಿ ಓದಲೇ ಇಲ್ಲ, ಅಪ್ಪ ನನ್ನನ್ನು ಕ್ಷಮಿಸಿ’, ‘ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಿ, ನಾನು ದೊಡ್ಡ ತಪ್ಪು ಮಾಡಿ ವಿಷ ಕುಡಿಯುತ್ತಿದ್ದೇನೆ’ ಎಂದು ನಂದಿತಾ ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ನಂದಿತಾ ಅಪಹರಣವಾದ ಬಗ್ಗೆ ನಗರದಲ್ಲಿ ಅಳವಡಿಸಿರುವ ಸಿಸಿಟಿವಿಗಳಲ್ಲಿ ಯಾವುದೇ ದೃಶ್ಯಾವಳಿಗಳು ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಕೊಲೆ ಮಾಡಿರುವ ಆರೋಪಿಗಳೇ ಬಾಲಕಿಯಿಂದ ಬಲವಂತವಾಗಿ ಡೆತ್ ನೋಟ್ ಬರೆಸಿಟ್ಟಿರುವ ಶಂಕೆಯೂ ವ್ಯಕ್ತವಾಗಿದೆ. ಕೈಬರಹವಿಲ್ಲದೇ ಟೈಪ್ ಮಾಡಿರುವ ಡೆತ್ ನೋಟನ್ನು ನಂದಿತಾ ಬರೆದಿಟ್ಟಿದ್ದಾಳೆನ್ನುವುದು ಅನುಮಾನಕ್ಕೆ ಆಸ್ಪದ ಕಲ್ಪಿಸಿದೆ. ಆದರೆ ಬಾಲಕಿ ಸಾವಿಗೀಡಾದ ದಿನ ಡೆತ್ ನೋಟ್ ಸಿಗದೇ ನಾಲ್ಕು ದಿನಗಳ ನಂತರ ಬಿಡುಗಡೆಯಾಗಿದ್ದು ಹೇಗೆ ಎನ್ನುವುದೇ ಪ್ರಶ್ನೆಯಾಗಿದೆ.

ನಂದಿತಾಳನ್ನು ಅನ್ಯಕೋಮಿನ ಮೂವರು ಯುವಕರು ಅಪಹರಿಸಿ ಅತ್ಯಾಚಾರ, ಹತ್ಯೆ ಮಾಡಿದ್ದಾರೆಂಬ ದೂರು ಕೇಳಿಬರುತ್ತಿರುವುದು ಕೂಡ ಉದ್ರಿಕ್ತ ಪರಿಸ್ಥಿತಿ ನೆಲೆಸಲು ಕಾರಣವಾಗಿದೆ. ನಂದಿತಾ ಸಾವಿಗೆ ಮುನ್ನ ಆರೋಪಿಯೊಬ್ಬನ ಹೆಸರನ್ನು ಬಹಿರಂಗಪಡಿಸಿದ್ದರೂ ಅವನನ್ನು ಬಂಧಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವೆನ್ನಲಾಗಿದೆ.

ಇನ್ನು ಬಂಧನವಾಗಿಲ್ಲ: ಅಪಹರಣ ಹಾಗೂ ಕೊಲೆ ಕೇಸು ದಾಖಲಿಸಿದ್ದರೂ ಕೂಡ ಪೊಲಿಸರು ಸಂಶಯಾಸ್ಪದ ಕೆಲವರನ್ನು ವಿಚಾರಿಸಿದ್ದಾರೆಯೇ ಹೊರತು ಯಾರನ್ನೂ ಈವರೆಗೂ ಬಂಧಿಸಿಲ್ಲ. ನಂದಿತಾ ಪರಿಚಯಸ್ಥ ಆ ಯುವಕನಾರು, ಆತನಿಗೂ ಆಕೆಗೂ ಹೇಗೆ ಪರಿಚಯವಿತ್ತು, ಆಕೆಯನ್ನು ಆತ ಅಪಹರಣ ಮಾಡಿದ ಉದ್ದೆಶವಾದರೂ ಏನು? ಅಥವಾ ಆಕೆಗೆ ಆತ ವಿಷ ಪ್ರಾಶನ ಮಾಡಿಸಿದ್ದಾನೆಯೇ? ಯುವಕನೊಂದಿಗೆ ಇದ್ದರೆನ್ನಲಾದ ಆ ಮೂವರು ಖದೀಮರಾದರೂ ಯಾರು ಎಂಬುದನ್ನು ಶೀಘ್ರ ಪೊಲಿಸರು ಕಂಡುಹಿಡಿದು ಆ ಕಾಮಪಿಪಾಸುಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.

ಈ ಮಧ್ಯೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ನಂದಿತಾ ಸಾವು ಪ್ರಕರಣವನ್ನು ಸಿ.ಐ.ಡಿ.ಗೆ ಒಪ್ಪಿಸಿದ್ದಾರೆ.

ಈ ಭಾಗದ ಶಾಸಕ ಮತ್ತು ರಾಜ್ಯ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ವದಂತಿಗಳನ್ನು ಹಬ್ಬಿ ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಜನರನ್ನು ಖಂಡಿಸಿ ಶಾಂತಿ ಸುವ್ಯವಸ್ಥೆ ಕಾಯ್ದುಕೊಳ್ಳುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಒಂದೆಡೆ ಕಿಮ್ಮನೆಯವರ ರಾಜಿನಾಮೆಗೂ ಆಗ್ರಹಿಸಿ ಜನರು ಹಾಗೂ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದು, ರಾಜ್ಯ ಸರಕಾರದ ಮೇಲೆ ತೀವ್ರ ವಾಗ್ದಾಳಿ ನಡೆಯುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಪೊಲಿಸ್ ಇಲಾಖೆ ಕೆಲಸವನ್ನು ದಕ್ಷವಾಗಿ ಮಾಡುತ್ತಿಲ್ಲ ಎಂಬ ಕೂಗು ಎಲ್ಲೆಡೆ ಕೇಳಿಬರುತ್ತಿದೆ.

144 ಸೆಕ್ಷನ್: ಶಾಲಾ ಬಾಲಕಿ ನಂದಿತಾ ಸಾವಿನ ಹಿನ್ನೆಲೆಯಲ್ಲಿ ನ.3ರಿಂದ 10ರವರೆಗೆ ಪಟ್ಟಣದಲ್ಲಿ 144 ಸೆಕ್ಷನ್ ಜಾರಿಗೊಳಿಸಿ ತಹಸೀಲ್ದಾರ್ ಅಹೋಬಲಯ್ಯ ಆದೇಶ ಹೊರಡಿಸಿದ್ದಾರೆ. ಸೋಮವಾರ ಶಾಲಾ, ಕಾಲೇಜಿಗೆ ಡಿಡಿಪಿಐ ರಜೆ ಘೋಷಿಸಿದ್ದಾರೆ.

ನಂದಿತಾ ಸಾವಿಗೆ ಕಾರಣರಾದ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಸಾರ್ವಜನಿಕರ ಆಗ್ರಹ ಹೆಚ್ಚಿದ್ದು,  ಎಲ್ಲೆಡೇ ಆಕೆಯ ಸಾವಿನ ಕಾರಣ ತಿ:ಳಿಸಿ, ಅಪಾಧಿತರನು ಬಂಧಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆಗಳು ನಡೆಯುತ್ತಿದೆ. ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗದಂತೆ ಎಚ್ಚರಿಕೆವಹಿಸಲು ಜಿಲ್ಲಾಡಳಿತ ಬಂದೋಬಸ್ತ್ ಕ್ರಮ ತೆಗೆದುಕೊಂಡಿದೆ. ಜಿಲ್ಲಾಧಿಕಾರಿ ಡಿ.ಪಿ.ಇಕ್ಕೇರಿ, ಪೋಲಿಸ್ ವರಿಷ್ಠಾಧಿಕಾರಿ ಕೌಶಲೇಂದ್ರ ಕುಮಾರ್, ಉಪ ವಿಭಾಗಾಧಿಕಾರಿ ಕೃಷ್ಣಮೂರ್ತಿ ಪಟ್ಟಣದಲ್ಲಿ ಬೀಡು ಬಿಟ್ಟು ಬಂದೋಬಸ್ತ್ ವ್ಯವಸ್ಥೆ ಪರಿಶೀಲನೆ ನಡೆಸಿದ್ದಾರೆ.

 

Write A Comment