ಕುಂದಾಪುರ: ಅ.7ರಂದು ರಾತ್ರಿ ವೇಳೆ ಉಪ್ಪುಂದ ಹಾಗೂ ಬೈಂದೂರು ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದ್ದ ದರೋಡೆ ಪ್ರಕರಣದ ಪ್ರಮುಖ ಆರೋಪಿಯನ್ನು ಉಡುಪಿ ಜಿಲ್ಲಾ ಪೊಲೀಸರ ವಿಶೇಷ ತಂಡ ಬಂಧಿಸಿದೆ.
ಪರಾರಿಯಾಗಿದ್ದ ಪ್ರಕರಣದ ಪ್ರಮುಖ ಆರೋಪಿ ಕುಖ್ಯಾತ ದರೋಡೆಜೋರ ರವಿ ಜತ್ತನ್ನನನ್ನು ವಿಶೇಷ ಪೊಲೀಸರ ತಂಡ ಮಡಿಕೇರಿಯಲ್ಲಿ ಬಂಧಿಸಿ ಚಿನ್ನಾಭರಣಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಅ.7ರಂದು ಉಪ್ಪುಂದದ ಉಪ್ಪುಂದ ಗ್ರಾಮದ ಸೋನರಕೇರಿ ಬಳಿಯ ಗದ್ದೆಯಲ್ಲಿ ಈದು ಮಂದಿ ದರೋಡೆಕೋರರು ಚಿನ್ನದ ಅಂಗಡಿಯ ಮಾಲಕ ಸುಧೀಂದ್ರ ಶೇಟ್, ಅವರ ತಂದೆ ಮತ್ತು ತಂಗಿ ಹಾಗೂ ಅನಿಲ್ ಶೇಟ್ ಎನ್ನುವವರಿಗೆ ಮುಖಕ್ಕೆ ಖಾರದ ಪುಡಿ ಎರಚಿ, ಚೂರಿಯಿಂದ ಹಲ್ಲೆ ನಡೆಸಿ ಸುಮಾರು 12 ಲಕ್ಷರೂ.ಮೌಲ್ಯದ ಚಿನ್ನಾಭರಣಗಳನ್ನು ದರೋಡೆ ಮಾಡಿದ ಐವರು ಆರೋಪಿಗಳಲ್ಲಿ ನಾಲ್ವರನ್ನು ಈಗಾಗಲೇ ಬಂಧಿಸಲಾಗಿದ್ದು, ಪರಾರಿಯಾಗಿದ್ದ ಪ್ರಮುಖ ಆರೋಪಿ ಕುಖ್ಯಾತ ದರೋಡೆಜೋರ ರವಿ ಜತ್ತನ್ನನನ್ನು ವಿಶೇಷ ಪೊಲೀಸರ ತಂಡ ಮಡಿಕೇರಿಯಲ್ಲಿ ಬಂಧಿಸಿ ಚಿನ್ನಾಭರಣಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ದರೋಡೆ ನಡೆಸಿ ಕಾರಿನಲ್ಲಿ ಪರಾರಿಯಾಗುತ್ತಿದ್ದ ಆರೋಪಿಗಳಲ್ಲಿ ನಾಲ್ವರಾದ ರಿಪ್ಪನ್‌ಪೇಟೆಯ ಪ್ರಕಾಶ್, ಉಡುಪಿ ನಿಟ್ಟೂರಿನ ಚಂದ್ರಹಾಸ, ಕಾರ್ಕಳದ ಪ್ರದೀಪ ಪೂಜಾರಿ ಹಾಗೂ ಮುಲ್ಕಿಯ ದುರ್ಗಾಪ್ರಸಾದ್‌ನನ್ನು ಅ.8ರಂದೇ ಪೊಲೀಸರು ಸಿನೀಮಿಯ ರೀತಿಯಲ್ಲಿ ಬಂಧಿಸಿದ್ದು, ಪಕ್ರಕರಣದ ಪ್ರಮುಖ ಆರೋಪಿ ಕುಖ್ಯಾತ ದರೋಡೆಕೋರ ರವಿ ಜತ್ತನ್ ತಲೆಮರೆಸಿಕೊಂಡಿದ್ದ.
ಕೊಡಗು ಜಿಲ್ಲೆಯ ಸೋಮವಾರ ಪೇಟೆ, ಕುಶಾಲನಗರ ಒದಲಾದ ಕಡೆಗಳಲ್ಲಿ ಖಾಸಗಿ ಸಮಸ್ಥೆಗಳಲ್ಲಿ ಅಡವಿರಿಸಿದ್ದನ್ನು ಸೇರಿ ಒಟ್ಟು 12 ಲಕ್ಷ ರೂ.ಮೌಲ್ಯದ ಚಿನ್ನದ ಕಿವಿಯ ಬೆಂಡೋಲೆ, ಚಿನ್ನದ ಉಂಗುರಗಳು ಸೇರಿ 427 ಗ್ರಾಂ ತೂಕದ ಒಡವೆಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.