ಕರಾವಳಿ

ಶಂಭು ಹೆಗಡೆ ವಜ್ರಮಹೋತ್ಸವ : ನಾಲ್ವರಿಗೆ ವಿಶೇಷ ಪುರಸ್ಕಾರ.

Pinterest LinkedIn Tumblr

Shambu_hegde_sanmana

ಉಡುಪಿ,ಅ.30: ಕೆರೆಮನೆ ಶಂಭು ಹೆಗಡೆ ಜಯಂತಿ(75) ವಜ್ರಮಹೋತ್ಸವ ಸಮಾರೋಪ ಸಮಾರಂಭವು ಯಶಸ್ವಿಯಾಗಿ ಉಡುಪಿಯಲ್ಲಿ ನೇರವೇರಿತು.

ವಜ್ರಮಹೋತ್ಸವ ವಿಶೇಷ ಪುರಸ್ಕಾರವನ್ನುಯಕ್ಷಗಾನಕೇಂದ್ರ ( ಶ್ರೀ ಹೆರಂಜೆ ಕೃಷ್ಣ ಭಟ್) ಉಡುಪಿ, ಯಕ್ಷಗಾನಕಲಾರಂಗ(ಶ್ರೀ ತಲ್ಲೂರು ಶಿವರಾಮ ಶೆಟ್ಟಿ), ಸಾಲಿಗ್ರಾಮ ಮಕ್ಕಳ ಮೇಳ ( ಶ್ರೀ ಹೆಚ್. ಶ್ರೀಧರ ಹಂದೆ), ಶ್ರೀ ಕೆ. ಗೋವಿಂದ ಭಟ್, ಖ್ಯಾತ ಯಕ್ಷಗಾನ ಕಲಾವಿದರು – ಸುರಿಕುಮೇರು, ಇವರಿಗೆ ಶಾರದಾ ಹೆಗಡೆ (ಅಧ್ಯಕ್ಷೆ, ಯಕ್ಷಗಾನ ರಂಗ ಚಿಂತನ) ಪ್ರದಾನಿಸಿದರು.

ಸಮಾರಂಭದಲ್ಲಿ ಶ್ರೀ ಎಂ.ಎಲ್. ಸಾಮಗ, ಶ್ರೀ ಪ್ರಸನ್ನ ಹೆಗಡೆ, ವಿದ್ವಾಂಸರಾಘವ ನಂಬಿಯಾರ್, ಶ್ರೀ ನಾಗರಾಜತಂತ್ರಿ, ಶ್ರೀ ಹೆಚ್. ಜನಾರ್ದನ ಹಂದೆ, ಶ್ರೀ ಗೌರೀಶ ಶಾಸ್ತ್ರಿ, ಹೊನ್ನಾವರ ಮುಂತಾದವರೊಂದಿಗೆ ಸರ್ವಾಧ್ಯಕ್ಷ ಶ್ರೀ ಪ್ರದೀಪ ಕುಮಾರ ಕಲ್ಕೂರರು ಉಪಸ್ಥಿತರಿದ್ದರು. ಶ್ರೀ ಜಿ.ಕೆ.ಭಟ್ ಸೆರಾಜೆ ಅಭಿನಂದಿಸಿದ ಸಭಾ ಕಾರ್ಯದಲ್ಲಿ ಶ್ರೀಮತಿ ಅಭಿಲಾಷಾ‌ಎಸ್. ನಿರೂಪಿಸಿದರು.

ಶ್ರೀ ಎಸ್.ವಿ ಭಟ್, ಶ್ರೀ ಎಸ್.ಎಂ. ಹೆಗಡೆ, ಶ್ರೀಮತಿ ಮಾಧುರಿ ಶ್ರೀರಾಮ್, ಶ್ರೀ ಲಕ್ಷ್ಮೀಕಾಂತ ಹೆಗಡೆ, ಶಿರಶಿ, ಶ್ರೀ ಕೆ.ಜಿ. ರಾಮರಾವ್, ಶ್ರೀ ಕೆ.ಜಿ. ಮಂಜುನಾಥ್ ಸಹಕರಿಸಿದರು.

Write A Comment