ಕರಾವಳಿ

ರೈತರ ಸರಕಾರಿ ಭೂಮಿ ಒತ್ತುವರಿ ತೆರವು ವಿರೋಧಿಸಿ ಅನಿರ್ಧಿಷ್ಟಾವಧಿ ಧರಣಿ 2 ನೇ ದಿನಕ್ಕೆ…

Pinterest LinkedIn Tumblr
ಕುಂದಾಪುರ: ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ತಾಲೂಕು ಸಮಿತಿಗಳ ನೇತ್ರತ್ವದಲ್ಲಿ ಬಡ ರೈತರ ಸರಕಾರಿ ಭೂಮಿ ಒತ್ತುವರಿ ತರೆರವು ವಿರೋಧಿ , ಭೂ ಕಂದಾಯ ಹಾಗೂ ಅರಣ್ಯ ಕಾಯಿದೆ ತಿದ್ದುಪಡಿ ತರಲು , ಅಕ್ರಮ ಸಕ್ರಮ ಸಮಿತಿ ಹೆಚ್ಚುವರಿ ರಚಿಸಲು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕುಂದಾಪುರ ತಹಶೀಲ್ದಾರ್‌ ಕಚೇರಿಯ ಎದುರು  ಅನಿರ್ದಿಷ್ಟಾವಧಿ ಸಾಮೂಹಿಕ ಧರಣಿ ಮುಷ್ಕರ ಹೋರಾಟ ಎರಡನೇ ದಿನವಾದ  ಮಂಗಳವಾರವೂ ನಡೆಯುತ್ತಿದ್ದು ಬುಧವಾರವೂ ಈ ಪ್ರತಿಭಟನೆ ನಡೆಯಲಿದೆ.
Kundapura_Protest_news Kundapura_Protest_news (1) Kundapura_Protest_news (2) Kundapura_Protest_news (3) Kundapura_Protest_news (4)
ಮಂಗಳವಾರ ಮಧ್ಯಾಹ್ನ ಈ ಸಭೆಯಲ್ಲಿ ರಾಜ್ಯ ಕೆಪಿಆರ್‌ಎಸ್‌ ಅಧ್ಯಕ್ಷ ನಿತ್ಯಾನಂದ ಸ್ವಾಮೀ  ಪಾಲ್ಘೊಂಡು ಪ್ರತಿಭಟನಾಕಾರರಿಗೆ ಧೈರ್ಯ ತುಂಬುವ ಕಾರ್ಯ ಮಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ (ಎ.ಐ.ಕೆ.ಎಸ್‌) ಕುಂದಾಪುರ ತಾಲೂಕು ಸಮಿತಿ ಅಧ್ಯಕ್ಷ ದಾಸ ಭಂಡಾರಿ, ಕಾರ್ಯದರ್ಶಿ ಮಹಾಬಲ ವಡೇರಹೋಬಳಿ, ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿ ಅಧ್ಯಕ್ಷ ರಾಜೀವ ಪಡುಕೋಣೆ, ಕಾರ್ಯದರ್ಶಿ ವೆಂಕಟೇಶ ಕೋಣಿ, ಸಮಿತಿಯ ಸದಸ್ಯರು ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.

 

Write A Comment