ಕರಾವಳಿ

ಅಕ್ಟೋಬರ್ 21: ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ನಮ್ಮ ಕುಡ್ಲ ಗೂಡುದೀಪ ಸ್ಪರ್ಧೆ – ಪ್ರಶಸ್ತಿ ಪ್ರದಾನ

Pinterest LinkedIn Tumblr

Gud_deepa_Press_Ma

ಮಂಗಳೂರು: `ನಮ್ಮ ಕುಡ್ಲ’ ತುಳುವಾರ್ತಾವಾಹಿನಿ ವರ್ಷಂಪ್ರತಿ ನಡೆಸುತ್ತಿರುವ ದೀಪಾವಳಿ ಗೂಡುದೀಪ ಸ್ಪರ್ಧೆಯು ಈ ಬಾರಿ ಅಕ್ಟೋಬರ್ 21ರಂದು ಮಂಗಳವಾರ ಸಂಜೆ 4ಗಂಟೆಗೆ ಕುದ್ರೋಳಿ  ಶ್ರೀ ಗೋಕರ್ಣ ನಾಥ ದೇವಸ್ಥಾನದಲ್ಲಿ ನಡೆಯಲಿರುವುದು. ಸಾಂಪ್ರದಾಯಿಕ, ಆಧುನಿಕ ಮತ್ತು ವಿಶೇಷ ಮಾದರಿ (ಪ್ರತಿಕೃತಿ-ಮೋಡೆಲ್)ಹೀಗೆ 3 ವಿಭಾಗಗಳಲ್ಲಿ ಗೂಡುದೀಪ ಸ್ಪರ್ಧೆಯು ಜರಗಲಿದೆ ಎಂದು ನಮ್ಮ ಕುಡ್ಲ ಸಂಸ್ಥೆಯ ನಿರ್ದೇಶಕ ಹರೀಶ್ ಬಿ. ಕರ್ಕೇರಾ ಅವರು ತಿಳಿಸಿದ್ದಾರೆ.

Gud_deepa_Press_1

ಶನಿವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪರ್ಧಾಳುಗಳು ಸ್ಪರ್ಧೆಯ ದಿನ ಸಂಜೆ 4 ಗಂಟೆಯ ಒಳಗೆ ಕುದ್ರೋಳಿ ಕ್ಷೇತ್ರಕ್ಕೆ ಬಂದು ತಮ್ಮ ಆಯ್ಕೆಯ ವಿಭಾಗದ ಬಗ್ಗೆ ತಿಳಿಸಬೇಕು. ಗೂಡುದೀಪಕ್ಕೆ ಬೆಳಗಿಸಲು ಬೇಕಾದ ಸಾಮಾಗ್ರಿಗಳನ್ನು ಸ್ವತಃ ತರಬೇಕು. ತಾವೇ ಸ್ವತಃ ತಯಾರಿಸಿದ ಗೂಡುದೀಪಗಳಿಗೆ ಮಾತ್ರ ಪ್ರಾಶಸ್ತ್ಯವಿರುತ್ತದೆ. ಕ್ಷೇತ್ರದ ಶಿಸ್ತು ಮತ್ತು ಶುಚಿತ್ವಕ್ಕೆ ಧಕ್ಕೆಯಾಗದಂತೆ ಸಹಕರಿಸಬೇಕು.ಪ್ರತಿಯೊಂದು ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳಿಸುವ ಗೂಡುದೀಪಗಳಿಗೆ ಚಿನ್ನದ ಪದಕದ ಬಹುಮಾನ ನೀಡಲಾಗುವುದು. ತೀರ್ಪುಗಾರರ ಮೆಚ್ಚುಗೆ ಪಡೆದ ಆಯ್ದ ಗೂಡು ದೀಪ ಗಳಿಗೆ ಪ್ರೋತ್ಸಾಹ ಬಹುಮಾನಗಳನ್ನು ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ನೆನಪಿನ ಕಾಣಿಕೆ ವಿತರಿಸಲಾಗುವುದು. ಅತೀ ಹೆಚ್ಚು ಗೂಡುದೀಪಗಳನ್ನು ತಂದ ಸಂಸ್ಥೆಗಳಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

Gud_deepa_Press_4

ಸ್ಪರ್ಧಾ ವಿಭಾಗಗಳು:
1. ಸಾಂಪ್ರದಾಯಿಕ (ಬಣ್ಣದ ಕಾಗದ/ ಗ್ಲಾಸ್ ಪೇಪರ್ ಉಪಯೋಗಿಸಿರಬೇಕು.) 2. ಆಧುನಿಕ (ನವ ಧಾನ್ಯ, ಫ್ಲೆಕ್ಸ್, ಪ್ಲಾಸ್ಟಿಕ್, ಗರಿ ಹೂ ಇತ್ಯಾದಿ ಉಪಯೋಗಿಸಬಹುದು.) 3. ವಿಶೇಷ ಮಾದರಿ (ಪ್ರತಿಕೃತಿ -ಕಲಾಚಾತುರ್ಯಕ್ಕೆ ಆದ್ಯತೆ ನೀಡಲಾಗುವುದು.)
ಬಹುಮಾನಗಳು: 1. ಚಿನ್ನದ ಪದಕಗಳು – 3 ವಿಭಾಗದ ಪ್ರಥಮ, ದ್ವಿತೀಯ ವಿಜೇತರಿಗೆ. 2. ಆಕರ್ಷಕ ಬಹುಮಾನಗಳು. 3. ಪ್ರಶಸ್ತಿ ಪತ್ರ.
4. ಎಲ್ಲಾ ಸ್ಪರ್ಧಿಗಳಿಗೆ ಸ್ಮರಣಿಕೆ. 5. ಅತೀ ಹೆಚ್ಚು ಗೂಡುದೀಪ ತಂದ ಸಂಸ್ಥೆಗೆ ವಿಶೇಷ ಬಹುಮಾನ.

ಸ್ಪರ್ಧೆಗಳಿಗೆ ಸೂಚನೆಗಳು:
ಸ್ಪರ್ಧಾಳುಗಳು ಅಕ್ಟೋಬರ್ 21ರಂದು ಸಂಜೆ 4 ಗಂಟೆಯೊಳಗೆ ಕುದ್ರೋಳಿ ಕ್ಷೇತ್ರಕ್ಕೆ ಬಂದು ತಮ್ಮ ಆಯ್ಕೆಯ ವಿಭಾಗವನ್ನು ಸ್ಥಳದಲ್ಲೇ ನೊಂದಾಯಿಸಬೇಕು.
ಗೂಡುದೀಪಗಳನ್ನು ನೋಡಿ ವಿಭಾಗಗಳನ್ನು ನಿರ್ಣಯಿಸಲಾಗುವುದು. ಗೂಡುದೀಪಕ್ಕೆ ಬೇಕಾದ ಬಲ್ಬ್, ಹೋಲ್ಡರ್, ವಯರ್ ಇತ್ಯಾದಿ ಸಾಮಾಗ್ರಿಗಳನ್ನು ಸ್ವತಃ ತರಬೇಕು ಹಾಗೂದೀಪಾಲಂಕಾರಕ್ಕೆ ಬೇಕಾದ ವಿದ್ಯುತ್ ಸಂಪರ್ಕವನ್ನು ಮಾತ್ರ ಒದಗಿಸಲಾಗುವುದು. ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು.

ಸ್ಪರ್ಧೆಯು ಧಾರ್ಮಿಕ ಕ್ಷೇತ್ರದಲ್ಲಿ ನಡೆಯುವುದರಿಂದ ಕ್ಷೇತ್ರದ ಪ್ರಾವಿತ್ರ್ಯತೆ ಕಾಪಾಡಬೇಕು. |ಸ್ವತಃ ತಯಾರಿಸಿದ ಗೂಡುದೀಪಗಳನ್ನು ಮಾತ್ರ ಸ್ಪರ್ಧೆಯ ಗಣನೆಗೆ ತೆಗೆದುಕೊಳ್ಳಲಾಗುವುದು. | ಅತೀ ಹೆಚ್ಚು ಸಂಖ್ಯೆಯ ಗೂಡುದೀಪಗಳನ್ನು ತಂದ ಸಂಸ್ಥೆಗಳಿಗೆ ವಿಶೇಷ ಬಹುಮಾನ ನೀಡಲಾಗುವುದು. |ತೀರ್ಪುಗಾರರ ತೀರ್ಮಾನವೇ ಅಂತಿಮ.

Gud_deepa_Press_3

ನಮ್ಮ ಕುಡ್ಲ ಗೂಡುದೀಪ ಪಂಥ – ಸಾಧಕರಿಗೆ ಸನ್ಮಾನ

ತುಳುನಾಡಿನಲ್ಲಿ ಜನಿಸಿ, ತುಳು ಮಣ್ಣಿನ ಮಹತ್ವವನ್ನು ದೇಶವಿದೇಶಗಳಲ್ಲಿ ಹರಡಿ ಖ್ಯಾತಿವೆತ್ತು, ಶಿಕ್ಷಣ – ಸಂಸ್ಕೃತಿ- ಸಮಾಜಸೇವೆ-ಉದ್ಯಮ ರಂಗ ಇತ್ಯಾದಿ ಕ್ಷೇತ್ರಗಳಲ್ಲಿ ಶ್ರೇಷ್ಠಮಟ್ಟದ ಸಾಧನೆ ಮಾಡಿ ನಾಡಿಗೆ ಗೌರವ ತಂದು ಕೊಟ್ಟ ವ್ಯಕ್ತಿಗಳಿಗೆ ಕೊಡಮಾಡುವ ನಮ್ಮ ತುಳುವೆ ವಿಶೇಷ ಪ್ರಶಸ್ತಿಯನ್ನು ಈ ಬಾರಿ ಶ್ರೀ ಪಿ. ಜಯರಾಂ ಭಟ್ ಕರ್ಣಾಟಕ ಬ್ಯಾಂಕ್ ಆಡಳಿತ ನಿರ್ದೇಶಕರು ಇವರಿಗೆ ನೀಡಲಾಗುವುದು.

ಗೂಡುದೀಪ ಪಂಥ ಸಂದರ್ಭದಲ್ಲಿ ತುಳುನಾಡಿನ ವ್ಯಾಪ್ತಿಯೊಳಗೆ ಸಾಹಿತ್ಯ-ಕಲೆ ಮತ್ತು ಸಾಂಸ್ಕೃತಿಕ ರಂಗದಲ್ಲಿ ವಿಶೇಷ ಸೇವೆ ಸಲ್ಲಿಸಿದವರಿಗೆ ಪ್ರತಿವರ್ಷನಮ್ಮ ಕುಡ್ಲ ಪ್ರಶಸ್ತಿಯನ್ನು ಕೊಡುತ್ತಿದ್ದೇವೆ, ಅದರಂತೆ 2014 ನೇ ಸಾಲಿಗೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕಲ್ಕೂರ ಪ್ರತಿಷ್ಠಾನ ಇದರ ಅಧ್ಯಕ್ಷರಾದ ಶ್ರೀ ಎಸ್. ಪ್ರದೀಪ ಕುಮಾರ ಕಲ್ಕೂರ‌ ಇವರಿಗೆ ನಮ್ಮ ಕುಡ್ಲ ಗೌರವ ಸನ್ಮಾನವನ್ನು ಮಾಡಲಾಗುವುದು.

ಇದೇ ಮೊದಲ ಬಾರಿಗೆ ನಮ್ಮ ಕುಡ್ಲ – ಬಿರ್‍ಸೆ ಪ್ರಶಸ್ತಿಯನ್ನು ಆಕಸ್ಮಿಕವಾಗಿ ನಡೆದ ಘಟನೆಯಿಂದ ತನ್ನ ಎರಡೂ ಕೈಗಳನ್ನು ಕಳೆದುಕೊಂಡರೂ ಸ್ವಾವಲಂಬಿಯಾಗಿ ಕೆಲಸ ಮಾಡಿ ಹತ್ತಾರು ಮಂದಿಗೆ ಉದ್ಯೋಗ ನೀಡಿ ನೂರಾರು ಕೈಗಳಿಗೆ ತುತ್ತು ನೀಡುವ ಯಶಸ್ವಿ ಉದ್ದಿಮೆದಾರ ಶ್ರೀಗಣೇಶ್ ಕಾಮತ್ ಮೂಡಬಿದಿರೆ- ಮಾಲಕರು, ಜಿ.ಕೆ. ಡೆಕೊರೇಟರ್‍ಸ್ ಇವರಿಗೆ ಹಾಗೂ ನಮ್ಮ ಕುಡ್ಲ ಮಾನದಿಗೆದ ಸಮ್ಮನ ಪ್ರಶಸ್ತಿಯನ್ನು ಬಹುಮುಖ ಪ್ರತಿಭೆ ಮಾ.ರಾಹುಲ್ ತುಷಾರ್ ಕುಂದರ್(ಎಮ್.ಬಿ.ಎ)ಇವರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಕಾರ್ಯಕ್ರಮ ಸಂಸ್ಥೆಯ ನಿರೂಪಕ ಕದ್ರಿ ನವನೀತ್ ಶೆಟ್ಟಿ ಅವರು ವಿವರ ನೀಡಿದರು.

Gud_deepa_Press_2

ನಮ್ಮ ಕುಡ್ಲ V4 ಲೈವ್ ಚಾನೆಲ್‌ನಲ್ಲಿ ನೇರಪ್ರಸಾರ:

ಗೂಡುದೀಪ ಸ್ಪರ್ಧೆಯ ಅಂಗವಾಗಿ ಕುದ್ರೋಳಿ ಕ್ಷೇತ್ರದಲ್ಲಿ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭದಲ್ಲಿ ಜಿಲ್ಲೆಯ ಅನೇಕ ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳುವರು. ಆರಂಭದಿಂದ ಮುಕ್ತಾಯದವರೆಗೆ ಗೂಡುದೀಪ ಸ್ಪರ್ಧೆಯ ವರ್ಣರಂಜಿತ ಕಾರ್ಯಕ್ರಮವು ಕರಾವಳಿಯ ಅತ್ಯಧಿಕ ಪ್ರಸಾರ ವ್ಯಾಪ್ತಿಯ ನಮ್ಮ ಕುಡ್ಲ ವಿ೪ ಲೈವ್ ಚಾನೆಲ್ ನಲ್ಲಿ ನೇರ ಪ್ರಸಾರಗೊಳ್ಳಲಿರುವುದು. ಸಂಜೆ ೫.೩೦ರಿಂದ ೮ರ ತನಕ ಜಿಲ್ಲೆಯ ಖ್ಯಾತ ಕಲಾವಿದರಿಂದ ನೃತ್ಯ, ಸಂಗೀತ, ವೈವಿಧ್ಯಮಯ ಕಾರ್ಯಕ್ರಮಗಳು ಗೂಡುದೀಪ ವೀಕ್ಷಣೆಗೆ ಬರುವ ಆಸಕ್ತರಿಗೆ ಮುದನೀಡಲಿದೆ ಎಂದವರು ತಿಳಿಸಿದರು.

ಸ್ಫರ್ಧೆಯ ಬಗ್ಗೆ ಹೆಚ್ಚಿನ ಮಾಹಿತಿಗೆ ನಮ್ಮ ಕುಡ್ಲ, 401, 4ನೇ ಮಹಡಿ, ಕ್ಲಾಸಿಕ್ ಆರ್ಕೇಡ್, ಕೆ.ಎಸ್.ರಾವ್ ರಸ್ತೆ, ಮಂಗಳೂರು. ದೂರವಾಣಿ: 9743147999 ಅಥವಾ 9740097009 ಸಂಪರ್ಕಿಸಬಹುದಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕರುಗಳಾದ ಲೀಲಾಕ್ಷ ಬಿ. ಕರ್ಕೇರಾ, ಸುರೇಶ್ ಬಿ. ಕರ್ಕೇರಾ, ಮೋಹನ್ ಬಿ. ಕರ್ಕೇರಾ ಹಾಗೂ ನಿರೂಪಕರಾದ ಭಾಸ್ಕರ್ ರೈ ಕುಕ್ಕುವಳ್ಳಿ, ಪ್ರೊ. ಎಂ. ಎಸ್. ಕೋಟ್ಯಾನ್ ಉಪಸ್ಥಿತರಿದ್ದರು.

Write A Comment