ಕರಾವಳಿ

ಆಲೂರು: ನದಿಯಲ್ಲಿ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವು

Pinterest LinkedIn Tumblr

ಕುಂದಾಪುರ: ಸ್ನೇಹಿತರೊಡನೆ ಈಜಲು ತೆರಳಿದ ಯುವಕನೋರ್ವ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಪಡುಕೋಣೆ ಸಮೀಪದ ಹಡವು ಎಂಬಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಇಲ್ಲಿಗೆ ಸಮೀಪದ ನಾಡಾ ನಿವಾಸಿ ಅಕ್ಷಯ ಪೂಜಾರಿ(17) ಸಾವನ್ನಪ್ಪಿದ ದುರ್ದೈವಿಯಾಗಿದ್ದಾನೆ.

Padukone_Akshaya Poojary death (2) Padukone_Akshaya Poojary death Padukone_Akshaya Poojary death (1)

ನಾಡಾದ ನಿವಾಸಿಗಳಾದ ದಿವಂಗತ ಈರಣ್ಣ ಹಾಗೂ ಜಯಾ ದಂಪತಿಗಳ ಪುತ್ರನಾಗಿದ್ದ ಈತ ತಂದೆ-ತಾಯಿಯ ನಿಧನದ ಬಳಿಕ ಅಜ್ಜಿಯೊಂದಿಗೆ ವಾಸವಿದ್ದ. ಬಳಿಕ ಉದ್ಯೋಗದ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ಈತ ಬೇಕರಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ ಎನ್ನಲಾಗಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಊರಿಗೆ ಬಂದಿದ್ದ ಅಕ್ಷಯ ಪೂಜಾರಿ ಇಮ್ದು ನಾಲ್ಕು ಜನ ಸ್ನೇಹಿತರೊಡನೆ ಹಡವು ಸಮೀಪದ ಸೌಪರ್ಣಿಕ ಹೊಳೆಗೆ ಈಜಲು ತೆರಳಿದ್ದಾನೆ. ಈ ವೇಳೆ ಕಾಲು ಜಾರಿ ನೀರಿನಲ್ಲಿ ಬಿದ್ದು ಈತ ಸಾವನ್ನಪ್ಪಿದ್ದಾನೆ.

ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.

Write A Comment