ಮಂಗಳೂರು,ಅ.16 : ಮಹಾತ್ಮಗಾಂಧಿ ಸೇವಾ ಪ್ರಶಸ್ತಿಯನ್ನು ಪಡೆದ ಹಿರಿಯ ಗಾಂಧಿವಾದಿ ಡಾ.ಎಸ್.ಎನ್ ಸುಬ್ಬರಾವ್ ಅವರು ನಗರದ ವಿಕಾಸ ಪದವಿ ಪೂರ್ವ ಕಾಲೇಜಿನ ನಡೆದ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಧ್ಯಾರ್ಥಿಗಳಿಗೆ ನಾವೆಲ್ಲರೂ ಭಾರತೀಯರು ಎಂದು ಕೊಳ್ಳಲು ಹೆಮ್ಮೆ ಪಡೆಯಬೇಕು ಎಂದು ಹೇಳಿದರು.
ದುಶ್ಚಟದ ದಾಸರಾಗುವ ಬದಲು ಈಗಿನ ಯುವಜನರು ದೇಶದ ಭವಿಷ್ಯಕ್ಕಾಗಿ ಹೋರಾಡಬೇಕು. ದೇಶ ಮತ್ತು ದೇಹಕ್ಕೆ ಒಂದು ಗಂಟೆಯನ್ನು ಮೀಸಲಿಟ್ಟಲ್ಲಿ ನಮ್ಮ ಮನಸ್ಸು ಸಡಿಲವಾಗಿ ರಾಷ್ಟ್ರಪ್ರೇಮ ಮುಂದಾಗುತ್ತದೆ ಎಂದು ವಿಧ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿಧ್ಯಾರ್ಥಿಗಳಿಗೆ `ಡಾ.ಎಸ್.ಎನ್.ಸುಬ್ಬರಾವ್‍ರವರು ರಾಷ್ಟ್ರೀಯ ಯುವ ಯೋಜನಾ ಪ್ರಾಧಿಕಾರ ರಾಷ್ಟ್ರಾಧ್ಯಕ್ಷರಾಗಿದ್ದು, ವಿಶೇಷವಾಗಿ ಚಂಬಲ್ ಕಣಿವೆಯ 500ಕ್ಕೂ ಹೆಚ್ಚು ಡಕಾಯಿತರ ಮನ ಪರಿವರ್ತಿಸಿ ಅವರನ್ನು ಸಮಾನ ಮನಸ್ಕರನ್ನಾಗಿ ಮಾಡಿದವರು, ಸುಮಾರು 48 ವಿವಿಧ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ಅಪ್ಪಟ ಕನ್ನಡಗಿರಾಗಿರುವುದು ನಮಗೆಲ್ಲ ಹೆಮ್ಮೆ ತಂದಿದೆ’ ಎಂದು ಕಸಾಪದ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ತಿಳಿಸಿದರು.
ಈ ಸಂದರ್ಭದಲ್ಲಿ ಡಾ.ಎಸ್.ಎನ್.ಸುಬ್ಬರಾವ್‍ರವರನ್ನು ಕಲ್ಕೂರ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು.ವಿಕಾಸ ಕಾಲೇಜಿನ ಟ್ರಸ್ಟಿಗಳಾದ ಜಿ.ಆರ್.ರಾವ್, ಕೊರಗಪ್ಪ, ಪ್ರಾಂಶುಪಾಲ ನಾಗೇಂದ್ರ, ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ, ಶ್ರೀನಿವಾಸ ನಾಯಕ್, ಯು.ಆರ್.ಸಭಾಪತಿ ಇನ್ನಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳೊಂದಿಗೆ ಆಟದ ಪಾಠ ಹಾಗೂ ವಿಶೇಷ ಸಮೂಹ ಗಾಯನವನ್ನು ಸುಬ್ಬರಾವ್ ಪ್ರದರ್ಶಿಸಿ ಮೆಚ್ಚುಗೆಗಳಿಸಿಕೊಂಡರು.




