ಕರಾವಳಿ

ಚರಂಡಿಯಲ್ಲಿ ಪೊಲೀಸ್ ಬ್ಯಾರಿಕೇಡ್ !

Pinterest LinkedIn Tumblr

ಕುಂದಾಪುರ: ಸರಕಾರದ ಸೊತ್ತುಗಳೆಂದರೆ ಹಾಗೆ. ಅವುಗಳನ್ನು ನೋಡಿದರೆ ಜನರಿಗೆ ಒಂದು ರೀತಿ ಅಲರ್ಜಿ. ಜನರಲ್ಲಿ ಸಾರ್ವಜನಿಕ ಸೊತ್ತುಗಳನ್ನು ರಕ್ಷಿಸುವ ಜವಾಬ್ದಾರಿ ಕಡಿಮೆಯಾಗುತ್ತಿದ್ದರೆ, ಸರಕಾರದ ಸೇವೆಯಲ್ಲಿರುವ ವ್ಯಕ್ತಿಗಳಿಗೆ ಅವರ ಇಲಾಖೆಯ ಸೊತ್ತುಗಳನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲ?

Gangoli-Police_baricade

 

ಹೌದು, ಪೊಲೀಸ್ ಇಲಾಖೆಗೆ ಸೇರಿದ ಬ್ಯಾರಿಕೇಡ್ ಕಳೆದ ಸುಮಾರು 15 ದಿನಗಳಿಂದ ಗಂಗೊಳ್ಳಿಯಲ್ಲಿ ವಾರಿಸುದಾರರಿಲ್ಲದೆ ಚರಂಡಿಯಲ್ಲಿ ತುಕ್ಕು ಹಿಡಿದು ಹಾಳಾಗುತ್ತಿದೆ. ಇತ್ತೀಚಿಗೆ ಜರಗಿದ ಸಾರ್ವಜನಿಕ ಶ್ರೀ ಶಾರದೋತ್ಸವದ ಸಂದರ್ಭ ಭದ್ರತೆಗಾಗಿ ಅಳವಡಿಸಲಾಗಿದ್ದ ಎರಡು ಬ್ಯಾರಿಕೇಡ್‌ಗಳ ಪೈಕಿ ಚರ್ಚ್ ರಸ್ತೆ ಸಮೀಪ ಅಳವಡಿಸಲಾಗಿದ್ದ ಬ್ಯಾರಿಕೇಡ್ ಚರಂಡಿಯಲ್ಲಿ ಬಿದ್ದುಕೊಂಡಿದ್ದರೆ, ಇನ್ನೊಂದು ಕೆನರಾ ಬ್ಯಾಂಕ್ ಸಮೀಪ ಅಡ್ಡಾದಿಡ್ಡಿಯಾಗಿ ಬಿದ್ದುಕೊಂಡಿದೆ. ಈಗಾಗಲೇ ಸಂಪೂರ್ಣ ತುಕ್ಕು ಹಿಡಿದು ಹಾಳಾಗಿರುವ ಈ ಬ್ಯಾರಿಕೇಡ್‌ಗಳು ಬೇಡವಾದ ವಸ್ತುವಿನ ರೀತಿಯಲ್ಲಿ ಎಸೆಯಲಾಗಿದೆ. ತಮ್ಮ ಕೆಲಸಕಾರ್ಯ ಮುಗಿದ ಬಳಿಕ ಅದನ್ನು ಸುರಕ್ಷಿತವಾಗಿ ಇಡುವ ಬದಲು ಸಂಪೂರ್ಣ ಹಾಳಾಗಿ ಹೋಗಲಿ ಎಂಬಂತೆ ಈ ಬ್ಯಾರಿಕೇಡ್‌ಗಳನ್ನು ಇಟ್ಟಿರುವುದು ಖಂಡನೀಯ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಬ್ಯಾರಿಕೇಡ್‌ಗಳನ್ನು ಈ ರೀತಿಯಾಗಿ ಇಟ್ಟಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸರಕಾರದ ಸೊತ್ತುಗಳನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳಲು ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಸೂಚನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Write A Comment