ಕರಾವಳಿ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ : 27ಲಕ್ಷ ರೂ.ಮೌಲ್ಯದ 1ಕೆ.ಜಿ ಚಿನ್ನ ವಶ.

Pinterest LinkedIn Tumblr

Airport_Gold_size_1

ಮಂಗಳೂರು, ಅ.14: ದುಬೈಯಿಂದ ಬಂದ ಜೆಟ್ ಏರ್‌ವೆಸ್ ವಿಮಾನದ ಮೂಲಕ ಸಾಗಿಸಲಾದ 27.10 ಲಕ್ಷ ರೂ. ವೌಲ್ಯದ ಸುಮಾರು ಒಂದು ಕೆ.ಜಿ. ಚಿನ್ನ ವಶಪಡಿಸಿಕೊಂಡಿರುವ ಕಸ್ಟಂಮ್ಸ್ ಸಿಬ್ಬಂದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಿದ್ದಾರೆ. ಕಾಸರಗೋಡು ಕಲ್ಲಕೆರೆ ನಿವಾಸಿ ಮುಹಮ್ಮದ್ ಇಸ್ಮಾಯೀಲ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

Airport_Gold_size_2

ಈತ ಕುಳಿತಿದ್ದ ಸೀಟಿನ ಅಡಿ ಯಲ್ಲಿದ್ದ ಬ್ಯಾಗ್‌ನ್ನು ಅನುಮಾನಾಸ್ಪದ ರೀತಿಯಲ್ಲಿ ತೆಗೆಯುತ್ತಿದ್ದುದನ್ನು ಗಮನಿಸಿ ದಾಳಿ ನಡೆಸಿದ್ದು. ಬ್ಯಾಗ್ ಪರಿಶೀಲಿಸಿದಾಗ ಒಂದು ಕೆ.ಜಿ.ಯಷ್ಟು ಚಿನ್ನ ಪತ್ತೆಯಾಯಿತು ಎಂದು ಹೇಳಲಾಗಿದೆ. ದುಬೈಯಿಂದ ಬಂದಿದ್ದ ವಿಮಾನ ಮಂಗಳೂರಿನಿಂದ ಮುಂಬೈಗೆ ಹೊರಟಿದ್ದು, ಚಿನ್ನವನ್ನು ಮುಂಬೈಗೆ ಸಾಗಿಸುವ ಉದ್ದೇಶದಿಂದ ಬ್ಯಾಗ್‌ನ್ನು ಸೀಟ್‌ನ ಅಡಿಯಲ್ಲಿ ಇಡಲಾಗಿತ್ತು ಎಂಬ ಅನುಮಾನ ವ್ಯಕ್ತಪಡಿಸಲಾಗಿದೆ.

 Airport_Gold_size_3

ದುಬೈಯಿಂದ ಬಂದ ಚಿನ್ನ ವಶಪಡಿಸಿಕೊಂಡ ಈ ತಿಂಗಳ ಎರಡನೆ ಪ್ರಕರಣ ಇದಾಗಿದೆ. ಕಳೆದ ತಿಂಗಳಲ್ಲಿ ಆರು ಪ್ರಕರಣಗಳು ಪತ್ತೆಯಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Write A Comment