ಕರಾವಳಿ

ರಾಜೀವ ಗಾಂಧಿ ಸೇವಾ ಕೇಂದ್ರ ಉದ್ಘಾಟನೆ |ಭೂ ಸುಧಾರಣೆ ಕಾಯ್ದೆ ಸಾಮಾಜಿಕ ಬದಲಾವಣೆಯ ಮೊದಲ ಹೆಜ್ಜೆ: ಸಚಿವ ರೈ

Pinterest LinkedIn Tumblr

Rajiv_ghandhi_Center

ಬಂಟ್ವಾಳ, ಅ.11: ಭೂ ಸುಧಾರಣೆ ಕಾಯ್ದೆ ಸಾಮಾಜಿಕ ಬದಲಾವಣೆಯ ಮೊದಲ ಹೆಜ್ಜೆ. ಈ ಕಾನೂನಿನ ತಿದ್ದುಪಡಿ ಯಿಂದಾಗಿ ಸಮಾಜದ ಬಡವರ್ಗ ದವರ ಸಾಮಾಜಿಕ ಸ್ಥಿತಿಗತಿ ಸುಧಾರಣೆ ಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಅವರು ನಾವೂರು ಗ್ರಾಮ ಪಂಚಾ ಯತ್ ವತಿಯಿಂದ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಭಾರತ್ ನಿರ್ಮಾಣ್ ರಾಜೀವ ಗಾಂಧಿ ಸೇವಾ ಕೇಂದ್ರದ ನೂತನ ಕಟ್ಟಡವನ್ನು ಲೋಕಾ ರ್ಪಣೆಗೊಳಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

29 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳ್ಳಲಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ನಾವೂರು ಗ್ರಾಮಕ್ಕೂ ಲಭಿಸಲಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಕೇಂದ್ರ ರಸ್ತೆ ನಿಧಿ, ‘ನಮ್ಮ ಗ್ರಾಮ ನಮ್ಮ ರಸ್ತೆ’, ಉದ್ಯೋಗ ಖಾತರಿ ಯೋಜನೆಗಳಿಗೆ ರಾಜ್ಯದಲ್ಲೇ ಅತ್ಯಧಿಕ ಅನುದಾನವನ್ನು ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಬಿಡುಗಡೆಗೊಳಿಸಲಾಗಿದೆ ಎಂದರು.

ಪಂ.ಅಧ್ಯಕ್ಷ ಬೇಬಿ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ತಾ. ಪಂ. ಅಧ್ಯಕ್ಷ ಯಶವಂತ ಡಿ., ಉಪಾಧ್ಯಕ್ಷೆ ವಿಲಾಸಿನಿ, ಕಾರ್ಯನಿರ್ವಾಹಣಾಧಿಕಾರಿ ಸಿಪ್ರಿಯಾನ್ ಮಿರಾಂಡ, ಜಿ.ಪಂ. ಸದಸ್ಯೆ ಗಿರಿಜಾ, ತಾ.ಪಂ.ಸದಸ್ಯ ಪದ್ಮಶೇಖರ್ ಜೈನ್, ಗ್ರಾ.ಪಂ. ಉಪಾಧ್ಯಕ್ಷೆ ಜ್ಯೋತಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಅಕ್ರಮ ಅಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಬಿ.ಎಚ್. ಖಾದರ್, ಕಿರಿಯ ಎಂಜಿನಿಯರ್ ಕೃಷ್ಣ, ಪಂ. ಕಾರ್ಯದರ್ಶಿ ಶೇಖರ್ ಹಾಗೂ ಪಂಚಾಯತ್ ಸದಸ್ಯರು ಹಾಜರಿದ್ದರು. ಗ್ರಾ.ಪಂ.ಸದಸ್ಯೆ ಲೀನಾ ಸುನೀತಾ ರೊಡ್ರಿಗಸ್ ಸ್ವಾಗತಿಸಿದರು. ಪಂ.ಅಭಿವೃದ್ಧಿ ಅಧಿಕಾರಿ ಅಬೂಬಕರ್ ವಂದಿಸಿದರು. ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

Write A Comment