ಕರಾವಳಿ

ವಿಶ್ವ ತುಳುವೆರೆ ಪರ್ಬ: ಮುಖ್ಯ ಮಂತ್ರಿಯವರಿಗೆ ಉಸ್ತುವಾರಿ ಸಚಿವ ರೈ ನೇತೃತ್ವದ ನಿಯೋಗದಿಂದ ಮನವಿ.

Pinterest LinkedIn Tumblr

 siddaramayya_tulu_parbha_1

ಮಂಗಳೂರು,ಅ.10: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈಯವರ ಅಧ್ಯಕ್ಷತೆಯಲ್ಲಿ ಡಿಸೆಂಬರ್ 12 ರಿಂದ 14 ರ ವರೆಗೆ ಅಡ್ಯಾರ್‌ನ ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ಸಂಘಟಿಸಿರುವ ವಿಶ್ವ ತುಳುವೆರೆ ಪರ್ಬ 2014 ಸಮಾರಂಭಕ್ಕೆ ರಾಜ್ಯ ಸರಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವಂತೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ತುಳುವರೆ ಪರ್ಬದ ಅಧ್ಯಕ್ಷ ಬಿ.ರಮಾನಾಥ ರೈ ನೇತೃತ್ವದ ನಿಯೋಗವು ಬೆಂಗಳೂರಿನಲ್ಲಿ ಮಾನ್ಯ ಮುಖ್ಯಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಸಮಾರಂಭದಲ್ಲಿ ಭಾಗವಹಿಸುವಂತೆ ಉಸ್ತುವಾರಿ ಸಚಿವ ರಮಾನಾಥ ರೈಯವರು ಮುಖ್ಯಮಂತ್ರಿಯವರನ್ನು ವಿನಂತಿಸಿದರು. ವಿಶ್ವ ತುಳುವೆರೆ ಪರ್ಬದಲ್ಲಿ ಭಾಗವಹಿಸುವುದಾಗಿಯೂ ಕಾರ್ಯಕ್ರಮಕ್ಕೆ ಅನುದಾನ ನೀಡುವ ಭರವಸೆಯನ್ನು ಮುಖ್ಯಮಂತ್ರಿಯವರು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು. ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್, ಶಾಸಕ ಮೊಯ್ದೀನ್ ಬಾವ, ವಿಧಾನ ಪರಿಷತ್ ಸದಸ್ಯೆ ಜಯಮಾಲ, ವಿಶ್ವ ತುಳುವೆರೆ ಪರ್ಬದ ಪದಾಧಿಕಾರಿಗಳಾದ ಧರ್ಮಪಾಲ್ ದೇವಾಡಿಗ ಮುಂಬಾಯಿ, ಎ.ಸಿ.ಭಂಡಾರಿ, ದಾಮೋದರ ನಿಸರ್ಗ, ಅಡ್ಯಾರ್ ಮಹಾಬಲ ಶೆಟ್ಟಿ, ನಿಟ್ಟೆ ಶಶಿಧರ ಶೆಟ್ಟಿ, ಎಂ.ಬಿ.ಪುರಾಣಿಕ್, ಜಯಕೃಷ್ಣ ಶೆಟ್ಟಿ ತೋನ್ಸೆ, ಡಾ.ಕಿಶೋರ್ ರೈ, ಜಯಕರ ಶೆಟ್ಟಿ ಇಂದ್ರಾಳಿ, ಚಂದ್ರಶೇಖರ ಸುವರ್ಣ, ಪ್ರಭಾಕರ ನೀರುಮಾರ್ಗ, ಡಿ.ಎಂ.ಕುಲಾಲ್, ಮೋಹನ್ ಕೊಪ್ಪಲ, ಬಿ.ಕೆ.ಇದಿನಬ್ಬ, ಹರೀಶ್ ಕುಮಾರ್ ಬೆಳ್ತಂಗಡಿ, ಯೊಗೀಶ್ ಕುಮಾರ್, ಚಂದ್ರಹಾಸ ದೇವಾಡಿಗ ಹಾಗೂ ಬೆಂಗಳೂರು ತುಳುಕೂಟದ ಪದಾಧಿಕಾರಿಗಳು ಭಾಗವಹಿಸಿದ್ದರು.

Write A Comment