ಕರಾವಳಿ

ಸಿಕ್ಕಿದ ಎಟಿ‌ಎಂ ಕಾರ್ಡ್‌ಬಳಸಿ 8 ಸಾವಿರ ಹಣ ಡ್ರಾ ಮಾಡಿದ ಭೂಪ ಸಿಕ್ಕಿಬಿದ್ದ..!

Pinterest LinkedIn Tumblr

ATM-debit-card

ಕುಂದಾಪುರ: ತನಗೆ ಸಿಕ್ಕಿದ ಯಾರದ್ದೋ ಎಟಿ‌ಎಂ ಕಾರ್ಡ್ ಬಳಸಿ ಆ ಖಾತೆಯಲ್ಲಿದ್ದ ಸುಮಾರು 8 ಸಾವಿರ ಹಣವನ್ನು ಪಡೆದು ಕೊಂಡ ಆರೋಪಿಯನ್ನು ಕುಂದಾಪುರ ಪೋಲಿಸರು ತಮ್ಮ ವಶಕ್ಕೆ ಪಡೆದು ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಕುಂಭಾಸಿ ಜನತಾ ಕಾಲನಿ ನಿವಾಸಿ ಮಹಿಳೆಯೋರ್ವರು ತಮ್ಮ ಪರ್ಸನ್ನು ರಸ್ತೆಯಲ್ಲಿ ಕಳೆದು ಕೊಂಡಿದ್ದು ಅದರಲ್ಲಿ ಅವರ ವಿಜಯಾ ಬೈಂಕ್ ಖಾತೆಯ ಏಟಿ‌ಏಮ್ ಕಾರ್ಡ್ ಸಹಾ ಇದ್ದಿತು. ವಿಪಚಿiiಸವೆಂದರೆ ಎಟಿ‌ಎಮ್ ಗೆ ಬಳಸುತ್ತಿದ್ದ ಪಿನ್ ನಂಬ್ರವೂ ಸಹಾ ಅದರಲ್ಲಿಯೇ ಇದ್ದು ಹೌಹಾರಿದ ಮಹಿಳೆ ಆ ಕೂಡಲೇ ಬ್ಯಾಕ್ ಶಾಖೆಗೆ ಕರೆ ಮಾಡಿ ತನ್ನ ಖಾತೆಯನ್ನು ಬ್ಲಾಕ್ ಮಾಡುವಂತೆ ಕೋರಿ ಕೊಂಡಿದ್ದರು.

ಆದರೆ ತಡರಾತ್ರಿ ಹಾಗೂ ಮರುದಿನ ಬೆಳಗ್ಗೆ ಅವರ ಖಾತೆಯಿಂದ ಸಂಪೂರ್ಣ ಹಣವನ್ನು ಡ್ರಾ ಮಾಡಿರುವ ಸಂದೇಶ ಅವರ ಮೊಬೈಲಿಗೆ ಬಂದಿದ್ದರಿಂದ ಬೆಚ್ಚಿ ಬಿದ್ದ ಮಹಿಳೆ ಬ್ಯಾಂಕಿಗೆ ದೌಡಾಯಿಸಿದ್ದರು. ಆದರೆ ಸ್ಥಳೀಯ ಶಾಖೆಯವರು ಬೆಂಗಳೂರು ಮುಖ್ಯ ಕಛೇರಿಗೆ ಆಕೆಯ ಖಾತೆ ಬ್ಲಾಕ್ ಮಾಡುವಂತೆ ಕೋರಿದ್ದರೂ ಸಂವಹನದ ಕೊರತೆಯಿಂದ ಅದು ಸಾಧ್ಯವಾಗದೇ ಹಣ ಪರರ ಪಾಲಾಗಿತ್ತು. ಕಂಗಾಲಾದ ಮಹಿಳೆ ಈ ಕುರಿತು ಕುಂದಾಪುರ ಪೋಲಿಸ್ ಠಾಣೆಯನ್ನು ಸಂಪರ್ಕಿಸಿದ್ದರು.

ಸದ್ರಿ ಖಾತೆಯಿಂದ ಕೋಟೇಶ್ವರ ಸಿಂಡಿಕೇಟ್ ಬ್ಯಾಂಕ್ ನ ಏಟಿ‌ಎಮ್ ಹಾಗೂ ಕುಂಭಾಸಿ ಆನೆಗುಡ್ಡೆಯ ಕರ್ನಾಟಕ ಬ್ಯಾಂಕ್ ನ ಏಟಿ‌ಏಮ್ ಗಳಿಂದ ಹಣ ಡ್ರಾ ಮಾಡಲ್ಪಟ್ಟಿರುವುದು ಬ್ಯಾಂಕ್ ನವರಿಗೆ ಗೊತ್ತಾಗಿತಲ್ಲದೇ ಕುಂಭಾಸಿಯ ಏಟಿ‌ಏಮ್ ನ ಸಿಸಿ ಕ್ಯಾಮೆರಾದಲ್ಲಿ ಆರೋಪಿಯ ಚಿತ್ರ ಸಹಾ ನಿಚ್ಚಳವಾಗಿ ಮೂಡಿ ಬಂದಿತ್ತು. ಆ ನಿಟ್ಟಿ ನಲ್ಲಿ ತನಿಖೆ ಮುಂದುವರಿದಾಗ ಅದು ಪೋಲಿಸರನ್ನು ನೇರವಾಗಿ ಕೊಂಡೊಯ್ದು ನಿಲ್ಲಿಸಿದ್ದು ಅದೇ ಮಹಿಳೆ ವಾಸಿಸುವ ಜನತಾ ಕಾಲನಿ ನಿವಾಸಿ ಸುಬ್ರಹ್ಮಣ್ಯ ಎಂಬಾತನ ಮನೆ ಮುಂದೆ .

ಈ ಹಿಂದೆಯೂ ಒಂದೆರಡು ಪ್ರಕರಣ ಗಳಲ್ಲಿ ಅರೋಪಿಯಾಗಿ ಗುರ್ತಿಸಿ ಕೊಂಡಿರುವ ಈತ ಮೊದಲು ನಿರಾಕರಿಸಿದರೂ ಸಿಸಿ ಕ್ಯಾಮೆರಾ ದಲ್ಲಿರುವ ತನ್ನದೇ ಫೂಟೇಜ್ ಕಂಡು ದೂಸರಾ ಮಾತನಾಡದೇ ಹಣ ಡ್ರಾ ಮಾಡಿಕೊಂಡಿರುವುದನ್ನು ಒಪ್ಪಿ ಕೊಂಡಿದ್ದಾನೆ ಕೊನೆಗೆ ಪಡೆದ ಹಣವನ್ನು ಮಹಿಳೆಗೆ ಹಿಂತಿರುಗಿಸುವುದರೊಂದಿಗೆ ಪ್ರಕರಣ ಸಂಧಾನದಲ್ಲಿ ಗೊಂಡಿದೆ.

ಎಟಿ‌ಎಮ್ ಕಾರ್ಡ್ ಜತೆಗೆ ಪಿನ್ ನಂಬ್ರ ವನ್ನೂ ಇರಿಸುವವರಿಗೆ ಈ ಪ್ರಕರಣವೊಂದು ಎಚ್ಚರಿಕೆ ಎನ್ನಲಾಗಿದೆ.

Write A Comment